ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದಲ್ಲಿ ಮತ್ತೆ ಹೆಚ್ಚಾಯ್ತು ಕೊರೊನಾ ಕೇಸ್‌ಗಳ ಸಂಖ್ಯೆ

|
Google Oneindia Kannada News

ತಿರುವನಂತಪುರಂ, ಮೇ 17: ಕೊರೊನಾ ನಿಯಂತ್ರಣದಲ್ಲಿ ಕೇರಳ ರಾಜ್ಯ ಒಂದು ಹಂತಕ್ಕೆ ಯಶಸ್ಸಾಗಿದೆ. ದೇಶದಲ್ಲಿ ಮೊದಲ ಸೋಂಕು ಪತ್ತೆಯಾಗಿದ್ದ ರಾಜ್ಯ ದಿನಕಳೆದಂತೆ ಸಂಪೂರ್ಣವಾಗಿ ಚೇತರಿಕೆ ಕಾಣುವ ಕಡೆ ಹೆಜ್ಜೆ ಇಟ್ಟಿತ್ತು.

ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಆಕ್ಟಿವ್ ಕೇಸ್ ಸಂಖ್ಯೆ 21ರವರೆಗೂ ಇಳಿಕೆಯಾಗಿತ್ತು. ಇನ್ನೇನೂ ಕೇರಳ ಕೊರೊನಾ ಮುಕ್ತರಾಜ್ಯವಾಗುತ್ತೆ ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ರೆಡ್‌ ಜೋನ್ ಕಡೆ ಸಾಗುತ್ತಿದೆ.

ಕೇರಳದಲ್ಲಿ ಹೊಸ ಆತಂಕ ಸೃಷ್ಟಿಸುತ್ತಾ ಕೊರೊನಾ ವೈರಸ್ 3ನೇ ಅಲೆ?ಕೇರಳದಲ್ಲಿ ಹೊಸ ಆತಂಕ ಸೃಷ್ಟಿಸುತ್ತಾ ಕೊರೊನಾ ವೈರಸ್ 3ನೇ ಅಲೆ?

ಇಂದು ಕೇರಳದಲ್ಲಿ ಹೊಸದಾಗಿ 14 ಪ್ರಕರಣಗಳು ದಾಖಲಾಗಿದೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯವಾಗಿರುವ ಕೇಸ್‌ಗಳ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. ಕನಿಷ್ಠ 21ಕ್ಕೆ ಇಳಿದಿದ್ದ ಆಕ್ಟಿವ್ ಕೇಸ್‌ ಈಗ ನೂರರ ಗಡಿದಾಟಿದೆ. ಇಂದು ಒಂದೇ ಒಂದು ಕೇಸ್‌ ಕೂಡ ಚೇತರಿಸಿಕೊಂಡಿಲ್ಲ. ಇದು ಸಹಜವಾಗಿ ನಿರಾಸೆ ತಂದಿದೆ.

With 14 New COVID19 Cases In Kerala Today

ಒಟ್ಟು 602 ಪ್ರಕರಣಗಳಲ್ಲಿ ಕೇರಳದಲ್ಲಿ 497 ಜನರು ಸೋಂಕಿನಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ನಾಲ್ಕು ಜನ ಮೃತಪಟ್ಟಿದ್ದಾರೆ. ಇಂದು ವರದಿಯಾದ ಹದಿನಾಲ್ಕು ಜನರ ಪೈಕಿ ತಮಿಳುನಾಡಿನಿಂದ ಬಂದವರು ಏಳು ಹಾಗೂ ಮಹಾರಾಷ್ಟ್ರದಿಂದ ಬಂದವರು ಮೂವರಿಗೆ ಸೋಂಕು ಖಚಿತವಾಗಿದೆ.

ಉಳಿದವರು ಮೂವರು ವಿದೇಶದಿಂದ ಬಂದವರು. ಹಾಗೂ ಓರ್ವ ಆರೋಗ್ಯ ಸಿಬ್ಬಂದಿಯಾಗಿದ್ದಾನೆ ಎಂದು ಕೇರಳ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

English summary
With 14 new COVID19 cases in Kerala today, the number of active cases in the state rises to 101 now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X