ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

50ರ ನಂತರ ಮತ್ತೆ ಬರುತ್ತೇನೆ: ಅಯ್ಯಪ್ಪನಿಗೆ ಒಂಬತ್ತರ ಬಾಲಕಿಯ ಪ್ರಾರ್ಥನೆ!

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 20: "ನನಗೀಗ 9 ವರ್ಷ ವಯಸ್ಸು, ನನಗೆ ಇನ್ನು 50 ವರ್ಷ ವಯಸ್ಸಾದ ಮೇಲೆ ಮತ್ತೆ ನಿನ್ನ ದರ್ಶನಕ್ಕೆ ಬರುತ್ತೇನೆ" ಎಂದು ಪುಟ್ಟ ಬಾಲಕಿಯೊಬ್ಬಳು ಪ್ಲೆಕಾರ್ಡ್ ಹಿಡಿದು ಶಬರಿಮಲೆಗೆ ಬಂದ ದೃಶ್ಯ ಲಕ್ಷಾಂತರ ಭಕ್ತರನ್ನು ಸೆಳೆಯಿತು.

9 ವರ್ಷದ ಜನನಿ ಶುಕ್ರವಾರದಂದು ಕೇರಳದ ಶಬರಿಮಲೆಯ ಅಯ್ಯಪ್ಪ ದೇವಅಲಯಕ್ಕೆ ಬಂದಿದ್ದರು. ಕೈಯಲ್ಲಿ ಪ್ಲೆಕಾರ್ಡ್ ಹಿಡಿದಿದ್ದ ಅವರ ಜೊತೆ ಇದ್ದ ಅವರ ತಂದೆ ಸಟಿಶ್ ಕುಮಾರ್, 'ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿದರು.'

ಹೆಲ್ಮೆಟ್ ಧರಿಸಿ ಇಬ್ಬರು ಮಹಿಳೆಯರ ಶಬರಿಮಲೆ ಪ್ರವೇಶ ಕೊನೇ ಕ್ಷಣದಲ್ಲಿ ವಿಫಲಹೆಲ್ಮೆಟ್ ಧರಿಸಿ ಇಬ್ಬರು ಮಹಿಳೆಯರ ಶಬರಿಮಲೆ ಪ್ರವೇಶ ಕೊನೇ ಕ್ಷಣದಲ್ಲಿ ವಿಫಲ

ಇತ್ತೀಚೆಗಷ್ಟೇ ಶಬರಿಮಲೆ ದೇವಾಲಯದ ಬಾಗಿಲುಗಳು ಮತ್ತೆ ತೆರೆಯಲ್ಪಟ್ಟಿದ್ದು, ದೇವಾಲಯ ಪ್ರವೇಶಕ್ಕೆ ಪ್ರಯತ್ನಿಸಿದ ಮಹಿಳೆಯರನ್ನು ತಡೆಯುವ ಘಟನೆಗಳು ದಿನೇ ದಿನೇ ನಡೆಯುತ್ತಿವೆ.

50 ರ ನಂತರ ಮತ್ತೆ ಬರುತ್ತೇನೆ!

50 ರ ನಂತರ ಮತ್ತೆ ಬರುತ್ತೇನೆ!

ನನಗೀಗ ಒಂಬತ್ತು, ಐವತ್ತರ ನಂತರ ಮತ್ತೆ ಬರುತ್ತೇನೆ ಎನ್ನುವ ಜನನಿಗೆ ಅವರ ತಂದೆಯ ಬೆಂಬಲವೂ ಇದೆ. ನಮ್ಮ ಮಗಳಿಗೆ ಇಗ ಒಂಬತ್ತು ವರ್ಷ. ಮತ್ತೆ ಅವಅರು ಐವತ್ತು ವರ್ಷ ವಯಸ್ಸಿನ ನಂತರ ಬರುತ್ತಾಳೆ. ಅದಕ್ಕೂ ಮುನ್ನವೇ ಆಕೆ ದೇವಾಲಯಕ್ಕೆ ಬರುವುದಾದರೆ ಅದಕ್ಕೆ ನನ್ನ ವಿರೋಧವಿದೆ. ಎಷ್ಟೋ ಶತಮಾನದಿಂದ ನಡೆಸಿಕೊಂಡು ಬರುತ್ತಿರುವ ಸಿದ್ಧಾಂತವನ್ನು ನಾವು ಉಳಿಸಿಕೊಂಡು ಹೋಗಬೇಕು ಎಂದರು.

ಶಬರಿಮಲೆ ಪ್ರವೇಶಿಸಲು ಹೋದ 'ಕಿಸ್ ಆಫ್ ಲವ್' ಫಾತಿಮಾ ರೆಹನಾ ಹಿನ್ನಲೆಶಬರಿಮಲೆ ಪ್ರವೇಶಿಸಲು ಹೋದ 'ಕಿಸ್ ಆಫ್ ಲವ್' ಫಾತಿಮಾ ರೆಹನಾ ಹಿನ್ನಲೆ

ಹೆಲ್ಮೇಟ್ ಧರಿಸಿ ಪ್ರವೇಶಕ್ಕೆ ಯತ್ನ!

ಹೆಲ್ಮೇಟ್ ಧರಿಸಿ ಪ್ರವೇಶಕ್ಕೆ ಯತ್ನ!

ಹೆಲ್ಮೇಟ್ ಧರಿಸಿ, ಪೊಲೀಸರ ವೇಷ ಧರಿಸಿದ್ದ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಕ್ಕೆ ಪ್ರಯತ್ನಿಸಿದ ಘಟನೆಯೂ ಶುಕ್ರವಾರ ನಡೆದಿದ್ದು, ನಂತರ ವಿಷಯ ತಿಳಿದು ಅವರನ್ನು ದೇವಾಲಯದ ಸಿಬ್ಬಂದಿ ತಡೆದ ಘಟನೆ ನಡೆಯಿತು. ನಂತರ ಹೋದ ದಾರಿಗೆ ಸುಂಕವಿಲ್ಲ ಎಂದು ಇಬ್ಬರು ಮಹಿಳೆಯರೂ ವಾಪಸ್ಸಾದರು. ಅವರಲ್ಲಿ ಒಬ್ಬ ಮಹಿಳೆ ವಿವಾದಾತ್ಮಕ ಮಹಿಳಾ ಹೋರಾಟಗಾರ್ತಿ ಫಾತಿಮಾ ರೆಹಾನಾ ಸುಲೇಮಾನ್ ಎಮಬುದು ನಂತರ ತಿಳಿದಿತ್ತು. ಇನ್ನೊಬ್ಬರು ಹೈದರಾಬಾದ್ ಮೂಲದ ಪತ್ರಕರ್ತೆ ಕವಿತಾ ಕೋಶಿ ಜಕ್ಕಲ್ ಎಂಬುವವರು.

ಶಬರಿಮಲೆ ಗರ್ಭಗುಡಿ ಮುಚ್ಚಲು ರಾಜಮನೆತನದ ಆದೇಶ? ಶಬರಿಮಲೆ ಗರ್ಭಗುಡಿ ಮುಚ್ಚಲು ರಾಜಮನೆತನದ ಆದೇಶ?

ತೀರ್ಪಿನಲ್ಲೇನಿದೆ?

ತೀರ್ಪಿನಲ್ಲೇನಿದೆ?

ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳಳು ಋತುಮತಿಯಾಗುವ ಕಾರಣ ಅವರು ದೇವಾಲಯಕ್ಕೆ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ವಾದ. ಅದಕ್ಕೆಂದೇ ಕಳೆದ ಎಮಟುನೂರು ವರ್ಷಗಳಿಂದ ಈ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಆದರೆ ಸೆ. 28 ರಂದು ಈ ನಿರ್ಬಂಧವನ್ನು ತೆರವುಗೊಳಿಸಿ, ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು.

ಪ್ರಕ್ಷುಬ್ಧ ವಾತಾವರಣ

ಪ್ರಕ್ಷುಬ್ಧ ವಾತಾವರಣ

ಅ.17 ರಿಂದ ಶಬರಿಲೆ ದೇವಾಲಯ ಮತ್ತೆ ಭಕ್ತರಿಗೆ ತೆರೆಯಲ್ಪಟ್ಟಿದ್ದು, ಈ ಸಂದರ್ಭದಲ್ಲಿ ದೇವಾಲಯಕ್ಕೆ ನುಗ್ಗಲು ಪ್ರಯತ್ನಿಸಿದ ಹಲವು ಮಹಿಳೆಯರನ್ನು ತಡೆಯಲಾಗಿದೆ. ಅಂದಿನಿಂದಲೂ ದೇವಾಲಯದ ಎದುರು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತಿನಲ್ಲೇ ದೇವಾಲಯದ ಸಂಪ್ರದಾಯಗಳು ನಡೆಯುತ್ತಿದೆ.

English summary
A nine-year-old girl from Madurai grabbed public attention at Sabarimala after she was seen with a placard, which read she will again visit the hill shrine to have darshan of Lord Ayyappa after she crosses 50.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X