ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ತಮಿಳುನಾಡು ಅಥವಾ ಕೇರಳದಲ್ಲಿ ಸ್ಪರ್ಧಿಸುವ ಧೈರ್ಯ ಮೋದಿಗೆ ಇದೆಯಾ?'

|
Google Oneindia Kannada News

Recommended Video

Lok Sabha Elections 2019 : ಇಲ್ಲಿ ಮಾತ್ರ ಮೋದಿ ನಿಂತು ಗೆಲ್ಲೋಕೆ ಸಾಧ್ಯವೇ ಇಲ್ಲ.. | Oneindia Kannada

ತಿರುವನಂತಪುರಂ (ಕೇರಳ), ಏಪ್ರಿಲ್ 7: ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎರಡೂ ಕಡೆಯಿಂದ ಚುನಾವಣೆ ಗೆಲ್ಲಬಹುದು ಎಂಬ ನಂಬಿಕೆ ಇರುವುದರಿಂದ ರಾಹುಲ್ ಗಾಂಧಿ ಅವರು ವಯನಾಡ್ ನಿಂದಲೂ ಸ್ಪರ್ಧಿಸುವ ನಿರ್ಧಾರ ಮಾಡಿದ್ದಾರೆ. ಅದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇರಳ ಅಥವಾ ತಮಿಳುನಾಡಿನಿಂದ ಸ್ಪರ್ಧಿಸುವ ಧೈರ್ಯ ಇದೆಯಾ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಭಾನುವಾರ ಪ್ರಶ್ನಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ರಾಹುಲ್ ಗಾಂಧಿ ಅವರು ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿರುವುದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಉತ್ಸಾಹ ಮೂಡಿದೆ. ಭಾರತದ ಮುಂದಿನ ಪ್ರಧಾನಿ ಆಗುವವರು ಈ ಭಾಗದಿಂದ ಆಯ್ಕೆಯಾಗಲಿದ್ದರೆ ಎಂಬ ಉತ್ಸಾಹ ಅದು ಎಂದು ಶಶಿ ತರೂರ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತಿರುವನಂತಪುರಂ : ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಆಸ್ತಿ ವಿವರ ತಿರುವನಂತಪುರಂ : ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಆಸ್ತಿ ವಿವರ

ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಜತೆಗೆ ದಕ್ಷಿಣ ಭಾರತದ ರಾಜ್ಯಗಳ ಸಂಬಂಧ ಸ್ಥಿರವಾಗಿ ಇಳಿಕೆ ಆಗುತ್ತಲೇ ಇದೆ. ಆರ್ಥಿಕ ಭದ್ರತೆಗೆ ಆತಂಕ ಹಾಗೂ ಭವಿಷ್ಯದ ರಾಜಕೀಯ ಪ್ರಾತಿನಿಧಿಕತೆಗೆ ಸವಾಲು ಎದುರಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

Will PM Narendra Modi have courage to fight from Kerala, Tamil Nadu?: Shashi Tharoor

ತಿರುವನಂತಪುರಂ ಲೋಕಸಭಾ ಕ್ಷೇತ್ರ ಪರಿಚಯತಿರುವನಂತಪುರಂ ಲೋಕಸಭಾ ಕ್ಷೇತ್ರ ಪರಿಚಯ

ಉತ್ತರ ಹಾಗೂ ದಕ್ಷಿಣ ಭಾರತ ಎರಡೂ ಕಡೆ ಗೆಲ್ಲುವ ವಿಶ್ವಾಸ ರಾಹುಲ್ ಗಾಂಧಿ ಅವರಿಗೆ ಇದೆ. ಅಂಥ ನಿರ್ಧಾರ ಮೋದಿ ಮಾಡಬಲ್ಲರೆ? ಕೇರಳ ಅಥವಾ ತಮಿಳುನಾಡಿನ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಧೈರ್ಯ ಅವರಿಗೆ ಇದೆಯಾ ಎಂದು ಶಶಿ ತರೂರ್ ಪ್ರಶ್ನೆ ಮಾಡಿದ್ದಾರೆ.

English summary
Rahul Gandhi's decision to contest from Wayanad shows he has the confidence to win from both north and south India, senior Congress leader Shashi Tharoor said Sunday as he asked whether Prime Minister Narendra Modi whether he had the courage to fight from a seat in Kerala or Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X