ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಗೆ ಮುಸ್ಲಿಂ, ಕ್ರೈಸ್ತ ಮಹಿಳೆಯರು ಪ್ರವೇಶಿಸಲು ಪ್ರಯತ್ನಿಸಿದ್ದೇಕೆ?

|
Google Oneindia Kannada News

Recommended Video

Sabarimala Verdict : ಶಬರಿಮಲೈ ದೇವಸ್ಥಾನದ ಒಳಗೆ ಮುಸ್ಲಿಂ ಕ್ರಿಶ್ಚಿಯನ್ ಮಹಿಳೆ ಪ್ರವೇಶ ಮಾಡಲು ಯತ್ನಿಸಿದ್ಯಾಕೆ?

ತಿರುವನಂತಪುರಂ, ಅಕ್ಟೋಬರ್ 30: 'ಶಬರಿಮಲೆ ದೇವಾಲಯಕ್ಕೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಹಿಳೆಯರು ಪ್ರೇಶಿಸಲು ಪ್ರಯತ್ನಿಸಿದ್ದೇಕೆ?' ಎಂದು ಕೇಂದ್ರ ಸಚಿವ ಕೆ ಜೆ ಆಲ್ಫಾನ್ಸ್ ಪ್ರಶ್ನಿಸಿದ್ದಾರೆ.

"ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಲು ಯತ್ನಿಸಿದ ಮಹಿಳೆಯರು ಅಯ್ಯಪ್ಪನ ಮೇಲಿನ ಪ್ರೀತಿಯಿಂದ, ಅಥವಾ ಭಕ್ತಿಯಿಂದ ಹೀಗೆ ಮಾಡಿಲ್ಲ. ಕೇವಲ ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರಷ್ಟೆ" ಎಂದು ಅವರು ಲೇವಡಿ ಮಾಡಿದ್ದಾರೆ.

ಅಯ್ಯಪ್ಪ ಭಕ್ತರಿಗೆ ಸಡ್ಡುಹೊಡೆಯಲು ಕೇರಳ ಸರಕಾರದ ಭಾರೀ ಪ್ಲಾನ್?ಅಯ್ಯಪ್ಪ ಭಕ್ತರಿಗೆ ಸಡ್ಡುಹೊಡೆಯಲು ಕೇರಳ ಸರಕಾರದ ಭಾರೀ ಪ್ಲಾನ್?

Why Muslim and Christian women attempted to enter Sabarimala?

10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ ಬಳಿಕ ಮೊದಲ ಬಾರಿಗೆ ಕಳೆದ ವಾರ ದೇವಾಲಯ ತೆರೆಯಲ್ಪಟ್ಟಿತ್ತು.

ಈ ಸಂದರ್ಭದಲ್ಲಿ ಕಿಸ್ ಆಫ್ ಲವ್ ಆಯೋಜಕಿ ಮತ್ತು ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಎಂಬ ಮುಸ್ಲಿಂ ಮಹಿಳೆ ಮತ್ತು ಓರ್ವ ಕ್ರೈಸ್ತ ಮಹಿಳೆ ದೇವಾಲಯ ಪ್ರವೇಶಕ್ಕೆ ಪ್ರಯತ್ನಿಸಿದರು. ನಂತರ ಮುಸ್ಲಿಂ ಸಮುದಾಯದಿಂದ ರೆಹನಾ ಅವರನ್ನು ಉಚ್ಛಾಟನೆ ಸಹ ಮಾಡಲಾಯಿತು.

ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್

ಆದರೆ ಇವರ್ಯಾರೂ ಅಯ್ಯಪ್ಪನ ಮೇಲಿನ ಭಕ್ತಿಯಿಂದ ದೇವಾಲಯ ಪ್ರವೇಶಿಸಿಲ್ಲ, ಬದಲಾಗಿ ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾರೆ ಎಂದು ಆಲ್ಫಾನ್ಸ್ ಆರೋಪಿಸಿದ್ದಾರೆ.

ಶಬರಿಮಲೆ ಅಯ್ಯಪ್ಪನ ಗರ್ಭಗುಡಿಯ ಮುಂದೆ ಕಣ್ಣೀರಿಟ್ಟ ಕೇರಳ ಪೊಲೀಸ್ ಐಜಿಪಿಶಬರಿಮಲೆ ಅಯ್ಯಪ್ಪನ ಗರ್ಭಗುಡಿಯ ಮುಂದೆ ಕಣ್ಣೀರಿಟ್ಟ ಕೇರಳ ಪೊಲೀಸ್ ಐಜಿಪಿ

10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಅವರು ದೇವಾಲಯ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕಳೆದ 800 ವರ್ಷಗಳಿಂದ ದೇವಾಲಯ ಪ್ರವೇಶಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

English summary
Union minister KJ Alphons on Monday questioned the intentions of a muslim and a christian woman who attempted to enter the Sabarimala. And he aslo said it is a publicity stunt!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X