ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ದಿನ ವಿಳಂಬ: ಜೂನ್ 3ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶ

|
Google Oneindia Kannada News

ನವದೆಹಲಿ, ಮೇ 30: ಭಾರತದಲ್ಲಿ ನೈಋತ್ಯ ಮಾನ್ಸೂನ್ ಮಳೆಯು ಎರಡು ದಿನ ವಿಳಂಬವಾಗಲಿದೆ. ಮೇ 31ರ ಬದಲಿಗೆ ಜೂನ್ 3ರಂದು ಕರಾವಳಿಗೆ ಮಾನ್ಸೂನ್ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯಾಸ್ ಮತ್ತು ತೌಕ್ತೆ ಚಂಡಮಾರುತದ ಪ್ರಭಾವದಿಂದ ಮೇ 31ರಂದು ಕರಾವಳಿಗೆ ಮಾನ್ಸೂನ್ ಪ್ರವೇಶಿಸಲಿದೆ ಎಂದು ಈ ಮೊದಲು ಹವಾಮಾನ ಇಲಖೆ ತಿಳಿಸಿತ್ತು.
ಇತ್ತೀಚಿನ ಹವಾಮಾನ ಸೂಚನೆಗಳ ಪ್ರಕಾರ, ಜೂನ್ 1 ರಿಂದ ನೈಋತ್ಯ ಮಾರುತಗಳು ಕ್ರಮೇಣ ಮತ್ತಷ್ಟು ಪ್ರಬಲಗೊಳ್ಳುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಜೂನ್ 3ರಂದು ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೇ 31ರಂದು ಕೇರಳಕ್ಕೆ ಮುಂಗಾರು ಆಗಮನ
ಸಮುದ್ರ ಮಟ್ಟದಿಂದ 1.5 ಕಿಲೋ ಮೀಟರ್ ವೇಗದಲ್ಲಿ ಪಂಜಾಬ್ ಮತ್ತು ನೆರೆಹೊರೆ ರಾಜ್ಯಗಳಲ್ಲಿ ಚಂಡ ಮಾರುತ ಬೀಸಿದೆ. ಅರಬ್ಬಿ ಸಮುದ್ರದ ಪೂರ್ವ ಕೇಂದ್ರದಿಂದ ಕರ್ನಾಟಕದ ಕರಾವಳಿ ಪ್ರದೇಶದಿಂದ ಚಂಡ ಮಾರುತ 3.1 ಕಿಲೋ ಮೀಟರ್ ದೂರದಲ್ಲಿದೆ ಎಂದು ಸರ್ಕಾರದ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Why Monsoon Delayed To Hit To Indian Coastal Area; Here Read Reason Behind This.
ಪಂಜಾಬ್ ಮತ್ತು ನೆರೆಹೊರೆ ರಾಜ್ಯಗ ಮೇಲೆ ಚಂಡಮಾರುತವು ಸರಾಸರಿ ಸಮುದ್ರ ಮಟ್ಟಕ್ಕಿಂತ 1.5 ಕಿಲೋಮೀಟರ್ ವರೆಗೆ ವಿಸ್ತರಿಸಿದೆ. ಕರ್ನಾಟಕ ಕರಾವಳಿಯ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಸಮುದ್ರ ಮಟ್ಟದಿಂದ 3.1 ಕಿಲೋಮೀಟರ್ ದೂರದಲ್ಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ದಕ್ಷಿಣ ಪಶ್ಚಿಮ ಮಾರುತಗಳು ಪ್ರಬಲಗೊಂಡಿರುವ ಹಿನ್ನೆಲೆ ಮಾನ್ಸೂನ್ ಪ್ರವೇಶದಲ್ಲಿ ವಿಳಂಬವಾಗಿದೆ. ಜೂನ್ 1ರಿಂದಲೇ ಕೇರಳದಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ಹವಾಮಾನ ಇಲಾಖೆ ಮುಖ್ಯಸ್ಥ ಡಾ. ಎಂ ಮೋಹಪಾತ್ರ ತಿಳಿಸಿದ್ದಾರೆ.
ದೇಶದಲ್ಲಿ ಸುರಿಯುವ ಒಟ್ಟು ಮಳೆಯಲ್ಲಿ ಶೇ.70ರಷ್ಟು ಮಳೆ ಮಾನ್ಸೂನ್ ಮಾರುತಗಳಿಂದಲೇ ಬೀಳುತ್ತದೆ. ಮಳೆಯನ್ನೇ ನೆಚ್ಚಿಕೊಂಡು ಕೃಷಿ ಮಾಡುವ ಬಹುಪಾಲು ರೈತರು ಈ ಮಾನ್ಸೂನ್ ಮಳೆಯನ್ನೇ ಅವಲಂಬಿತರಾಗಿದ್ದಾರೆ. ಬೇಸಿಗೆಯ ಬೆಳೆಗಳಿಗೆ ಈ ಮಾನ್ಸೂನ್ ಮಳೆಯೇ ನಿರ್ಣಾಯಕವಾಗಿರುತ್ತದೆ. ಅಷ್ಟೇ ಅಲ್ಲದೇ ದೇಶದ ಆರ್ಥಿಕತೆ, ಕೃಷಿ, ಉದ್ಯೋಗ, ಕೈಗಾರಿಕೆಗಳು ಹೀಗೆ ಪ್ರತಿಯೊಂದು ರಂಗದ ಮೇಲೂ ಈ ಮಾನ್ಸೂನ್ ಮಳೆಯು ಪರಿಣಾಮ ಬೀರಲಿದೆ.
English summary
Why Monsoon Delayed To Hit To Indian Coastal Area; Here Read Reason Behind This.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X