• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಜವಾದ ಮತದಾರ ಸರತಿಯಲ್ಲಿರುವಾಗಲೇ ನಕಲಿ ಮತದಾರನಿಂದ ಮತದಾನ

|

ಕಣ್ಣೂರು, ಏಪ್ರಿಲ್ 7: ಕೇರಳದಲ್ಲಿ ಏಪ್ರಿಲ್ 6 ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆದಿತ್ತು. 63 ವರ್ಷದ ವೃದ್ಧರೊಬ್ಬರು ಗಂಟೆಗಟ್ಟಲೆ ಸರತಿಯಲ್ಲಿ ನಿಂತಿದ್ದರೂ ಅವರ ಹೆಸರಿನ ಮತವನ್ನು ಇನ್ಯಾರೋ ಚಲಾಯಿಸಿರುವ ಘಟನೆ ನಡೆದಿದೆ.

ಘಟನೆ ಏನು?: ವೃದ್ಧರೊಬ್ಬರು ಮತದಾನ ಮಾಡಲು ಕಣ್ಣೂರಿಗೆ ಬಂದಿದ್ದರು, ಗಂಟೆಗಟ್ಟಲೆ ಸರತಿಯಲ್ಲೇನೋ ನಿಂತಿದ್ದರು, ಅವರ ಪಾಳಿ ಬರುವಾಗ ಅವರ ಹೆಸರಿನ ಮತವನ್ನು ಇನ್ಯಾರೋ ಚಲಾಯಿಸಿರುವುದು ಗೊತ್ತಾಗಿತ್ತು.

ಅಸಲಿಗೆ, ಮತ ಹಾಕಲು ನಟ ವಿಜಯ್ ಸೈಕಲ್‌ನಲ್ಲಿ ಬಂದಿದ್ದೇಕೆ? ಇಲ್ಲಿದೆ ನಿಜ ಕಾರಣಅಸಲಿಗೆ, ಮತ ಹಾಕಲು ನಟ ವಿಜಯ್ ಸೈಕಲ್‌ನಲ್ಲಿ ಬಂದಿದ್ದೇಕೆ? ಇಲ್ಲಿದೆ ನಿಜ ಕಾರಣ

ಸಸೀಂದ್ರನ್ ಅವರ ಬಳಿ ವೋಟರ್ ಐಡಿ ಇರಲಿಲ್ಲ, ಅದರ ಬದಲು ಆಧಾರ್ ಕಾರ್ಡ್ ಮತ್ತು ವೋಟರ್ ಸ್ಲಿಪ್ ಹಿಡಿದು ಬಂದಿದ್ದರು. ಇನ್ನೊಬ್ಬ ಮತದಾರನ ಹೆಸರಿನಲ್ಲಿ ಅದೇ ಹೆಸರಿನ ಮತದಾರ ಮತ ಚಲಾಯಿಸಿದಾಗ ಪೊಲೀಸ್ ಹಾಗೂ ಮತಗಟ್ಟೆಯ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾರೆ.

ಬೂತ್ ಏಜೆಂಟ್ ಸರತಿಯಲ್ಲಿ ನಿಂತಿದ್ದ ನಿಜವಾದ ಮತದಾರನನ್ನು ಗುರುತಿಸಿದ್ದಾರೆ. ಮತ್ತೋವ್ರನ ಹೆಸರು ಕೂಡ ಸಸೀಂದ್ರನ್ ಮತ್ತು ಅವರ ತಂದೆಯ ಹೆಸರು ಗೋಪಾಲನ್ ಆಗಿತ್ತು. ಬಳಿಕ ಅಸಲಿ ಮತದಾರನಿಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು.

ಕೇರಳ, ಪುದುಚೇರಿ ತಮಿಳುನಾಡು ವಿಧಾನಸಭೆಗೆ ಇಂದು ಒಂದೇ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮ ಮತದಾನ ಪ್ರಮಾಣ ದಾಖಲಾಗಿದೆ. ಹಾಗೇಯೇ ಅಸ್ಸಾಂನಲ್ಲಿ ಮೂರನೇ ಹಾಗೂ ಕೊನೆ ಹಂತದ ಮತದಾನ, ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ಸಹ ಯಶಸ್ವಿಯಾಗಿದೆ.

ಸಂಜೆ ಏಳರವರೆಗಿನ ವರದಿಯಂತೆ ಕೇರಳದಲ್ಲಿ 73.58%, ತಮಿಳುನಾಡಿನಲ್ಲಿ 65.11%, ಅಸ್ಸಾಂನಲ್ಲಿ 82.29% ಪುದುಚೇರಿಯಲ್ಲಿ 78.13% ಮತ್ತು ಪಶ್ಚಿಮ ಬಂಗಾಳದಲ್ಲಿ 77.38% ಮತದಾನ ದಾಖಲಾಗಿದೆ. ಚುನಾವಣೆಗಳ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

English summary
Police personnel and polling officials got trapped when a voter with the same name as another voter cast the latter’s vote.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X