ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಪಾಹ್ ವೈರಸ್ ಎಂದರೇನು? ಪತ್ತೆ ಹೇಗೆ, ಲಕ್ಷಣ, ಪರಿಹಾರಗಳು

|
Google Oneindia Kannada News

ಬೆಂಗಳೂರು, ಜೂನ್ 4: ನಿಪಾಹ್ ವೈರಸ್ ಈ ವರ್ಷದ ಮೊದಲ ಪ್ರಕರಣ ಕೇರಳದ ಎರ್ನಾಕ್ಯುಲಮ್‌ನಲ್ಲಿ ದೃಢಪಟ್ಟಿದೆ. ಹಾಗಾದರೆ ನಿಪಾಹ್ ವೈರಸ್ ಎಂದರೇನು?, ಪತ್ತ ಮಾಡುವುದು ಹೇಗೆ, ಲಕ್ಷಣಗಳೇನು, ಪರಿಹಾರವೇನು ಎಂಬುದನ್ನು ನೋಡಬೇಕಿದೆ.

ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಒಂದು ಪ್ರಕರಣ ದೃಢ ಕೇರಳದಲ್ಲಿ ಮತ್ತೆ ನಿಪಾಹ್ ವೈರಸ್ ಪತ್ತೆ, ಒಂದು ಪ್ರಕರಣ ದೃಢ

ಸಾಮಾನ್ಯವಾಗಿ ಈ ನಿಪಾಹ್ ವೈರಾಣುಗಳು, ಒಂದು ಬಗೆಯ ಬಾವಲಿಯಿಂದ (ಫ್ರೂಟ್‌ ಬ್ಯಾಟ್ಸ್‌) ಹರಡಬಹುದಾದ ವೈರಸ್ ಆಗಿದ್ದು, ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ. ಇದರಿಂದ ಕಳೆದ ವರ್ಷ 17 ಮಂದಿ ಮೃತಪಟ್ಟಿದ್ದರು.

ನಿಪಾಹ್ ವೈರಸ್ ಒಬ್ಬರಿಂದೊಬ್ಬರಿಗೆ ಹರಡುವ ರೋಗವೇ?

ನಿಪಾಹ್ ವೈರಸ್ ಒಬ್ಬರಿಂದೊಬ್ಬರಿಗೆ ಹರಡುವ ರೋಗವೇ?

ಹೌದು ನಿಪಾಹ್ ವೈರಸ್ ಒಬ್ಬರಿಂದೊಬ್ಬರಿಗೆ ಹರಡುವ ರೋಗವಾಗಿದೆ. ಈ ನಿಪಾಹ್ ವೈರಾಣು ಮೂಲಸ್ಥಾನ ಪ್ಟೆರೋಪೋಡಿಡೇ ಬಾವಲಿ ಕುಟುಂಬ ಎನ್ನಲಾಗಿದೆ. ಈ ಜಾತಿಯ ಬಾವಲಿಗಲ ಮುಖಾಂತರ ಈ ಮಾರಕ ವೈರಾಣು ಹರಡುತ್ತಿದೆ. ಈ ಜಾತಿಯ ಬಾವಲಿಗಳು ತಿಂದು ಬಿಸಾಡಿದ ಅಥವಾ ಈ ಬಾವಲಿಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶವಾದರೆ ಈ ಸೋಂಕು ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.

ವೈದ್ಯಕೀಯ ಲೋಕಕ್ಕೇ ನಿಪಾಹ್ ಒಂದು ಸವಾಲು

ವೈದ್ಯಕೀಯ ಲೋಕಕ್ಕೇ ನಿಪಾಹ್ ಒಂದು ಸವಾಲು

ಈ ನಿಪಾಹ್ ವೈರಾಣು 1998ರಲ್ಲೇ ಪತ್ತೆಯಾಗಿದ್ದರೂ, ಈ ವೈರಾಣುವಿಗೆ ಈ ವರೆಗೂ ಲಸಿಕೆಯನ್ನೇ ಕಂಡು ಹಿಡಿಯಲಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಿಲ್ಲ ಎನ್ನಲಾಗಿದೆ. ಮಾರಣಾಂತಿಕ ಕಾಯಿಲೆಗಳನ್ನು ತರಬಲ್ಲ ನಿಪಾಹ್ ವೈರಾಣುವಿಗೆ ಲಸಿಕೆ ತಯಾರಿಸಲು ಸಾಕಷ್ಟು ವೈದ್ಯಕೀಯ ಸಂಸ್ಥೆಗಳು ಸಂಶೋಧನೆ ನಡೆಸುತ್ತಿವೆಯಾದರೂ ಲಸಿಕೆ ಮಾತ್ರ ಇನ್ನೂ ಕಂಡುಹಿಡಿಯಲಾಗಿಲ್ಲ.

ನಿಪಾಹ್ ಗುಣಲಕ್ಷಣಗಳೇನು?

ನಿಪಾಹ್ ಗುಣಲಕ್ಷಣಗಳೇನು?

ಆರಂಭದಲ್ಲಿ ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುವ ವೈರಾಣು ಪತ್ತೆಯಾಗಲು 5ರಿಂದ 14 ದಿನಗಳೇ ಬೇಕಾಗುತ್ತದೆ. ಸಾಮಾನ್ಯ ಜ್ವರ, ವಿಪರೀತ ತಲೆನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಈ ಸೋಂಕಿನ ಲಕ್ಷಣಗಳಾಗಿವೆ.ನಿಪಾಹ್ ಸೋಂಕು ನಮ್ಮನ್ನು ಆವರಿಸಿದರೆ, ಮೊದಲಿಗೆ ಅದು ಮೆದುಳಿನ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ. ಕೆಲ ಪ್ರಕರಣಗಳಲ್ಲಿ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿದೆ. ಈ ಸೋಂಕು ಎಷ್ಟು ಮಾರಕ ಎಂದರೆ, ಕೇವಲ 24 ರಿಂದ 48 ಗಂಟೆಗಳಲ್ಲೇ ಸೋಂಕು ಪೀಡಿತ ವ್ಯಕ್ತಿ ಕೋಮಾಗೆ ಜಾರುವ ಅಪಾಯವಿದೆ. ಅಲ್ಲದೆ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಯಾರಿಗೆ ಹೆಚ್ಚು ಅಪಾಯ, ನಿಪಾಹ್ ನಿಂದ ದೂರವಿರುವುದು ಹೇಗೆ?

ಯಾರಿಗೆ ಹೆಚ್ಚು ಅಪಾಯ, ನಿಪಾಹ್ ನಿಂದ ದೂರವಿರುವುದು ಹೇಗೆ?

ಈ ವೈರಸ್‌ ಮನುಷ್ಯರಿಗಷ್ಟೇ ಅಲ್ಲದೆ ಹಂದಿಗಳಿಗಳು ಹಾಗೂ ಇನ್ನಿತರೆ ಸಾಕು ಪ್ರಾಣಿಗಳಿಗೆ ಹರಡಬಲ್ಲದು. ಯಾವುದೇ ರೀತಿಯ ಸೋಂಕುಗಳಾದರೂ ಅದರ ನಿರ್ಮೂಲನೆ ಅಥವಾ ನಿಯಂತ್ರಣ ಮನಷ್ಯನ ರೋಗ ನಿರೋಧಕ ಸಾಮರ್ಥ್ಯದ ಮೇಲೆ ಆಧಾರಿತವಾಗಿರುತ್ತದೆ. ಹೀಗಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರ ಪದಾರ್ಥಗಳು, ಡಯಟ್ ಗಳನ್ನು ಪಾಲಿಸುವುದು ಉತ್ತಮ. ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಹರ್ಬಲ್ ಟೀ (ಗಿಡಮೂಲಿಕಾ ಚಹಾ) ಅಥವಾ ವಿವಿಧ ಬಗೆಯ ಕಷಾಯಗಳನ್ನು ಆಗಾಗ ಸೇವಿಸುತ್ತಿರಬೇಕು.

English summary
After 17 people dead in Kozikode district in Kerala due to infection of Nipah virus last year. people have worried about rarest disease which has no vaccination. Here is the details about the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X