ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿ ವಿರುದ್ಧ ಬಿತ್ತು ಮತ್ತೊಂದು ಕಂಪ್ಲೇಂಟ್, ಈ ಬಾರಿ ವಯನಾಡಿನಲ್ಲಿ!

|
Google Oneindia Kannada News

Recommended Video

ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಕ್ಕೆ ರಾಹುಲ್ ಗಾಂಧಿಗೆ ಮತ್ತೆ ಸಂಕಷ್ಟ | Oneindia Kannada

ತಿರುವನಂತಪುರಂ, ಏಪ್ರಿಲ್ 23 : 'ಚೌಕಿದಾರ್ ಚೋರ್ ಹೈ' ಎಂದು ಸುಪ್ರೀಂ ಕೋರ್ಟೇ ಹೇಳಿದೆ ಎಂದು ಹೇಳಿಕೆ ನೀಡಿದ್ದಕ್ಕಾಗಿ ಸುಪ್ರೀಂ ಕೋರ್ಟಿನಿಂದಲೇ ನೋಟೀಸ್ ಪಡೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮತದಾನದ ದಿನದಂದೇ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿರುವುದರ ವಿರುದ್ಧ ವಯನಾಡಿನಿಂದ ಸ್ಪರ್ಧಿಸುತ್ತಿರುವ ಎನ್‌ಡಿಎದ ಅಭ್ಯರ್ಥಿ ತುಷಾರ್ ವೆಲ್ಲಪಲ್ಲಿ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ರಾಹುಲ್ ಗಾಂಧಿ ಮತ್ತೆ ಮುಖಭಂಗ: ನೋಟಿಸ್ ನೀಡಿದ ಸುಪ್ರೀಂ ಕೋರ್ಟ್ರಾಹುಲ್ ಗಾಂಧಿ ಮತ್ತೆ ಮುಖಭಂಗ: ನೋಟಿಸ್ ನೀಡಿದ ಸುಪ್ರೀಂ ಕೋರ್ಟ್

"ಭಾರತದಾದ್ಯಂತ ಕೋಟ್ಯಂತರ ಯುವಜನತೆ ಹೊರಬಂದು ಮತ ಚಲಾಯಿಸುತ್ತಿದ್ದಾರೆ. ಇವರಲ್ಲಿ ಹಲವರು ಮೊದಲ ಬಾರಿ ಮತ ನೀಡುತ್ತಿದ್ದಾರೆ. ಭಾರತದ ಭವಿಷ್ಯ ಇವರ ಕೈಯಲ್ಲಿದೆ. ಪ್ರತಿ ಭಾರತೀಯನಿಗೆ 'ನ್ಯಾಯ್' ಬೇಕಾಗಿದೆ, ಅವರು ಜಾಣತನದಿಂದ ಮತ ಚಲಾಯಿಸಲಿದ್ದಾರೆ" ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದರು.

Wayanad BJP candidate files complaint against Rahul Gandhi for his tweet

ಮತದಾನ ನಡೆಯುತ್ತಿರುವಾಗಲೇ ರಾಹುಲ್ ಗಾಂಧಿ ಅವರು ತಮ್ಮ ಪರವಾಗಿ ಮತ ಗಳಿಸಲೆಂದೇ ಟ್ವಿಟ್ಟರ್ ನಲ್ಲಿ ಖುಲ್ಲಂಖುಲ್ಲಾ ಪ್ರಚಾರ ಮಾಡಿ, ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಏಪ್ರಿಲ್ 21ರಂದೇ ಪ್ರಚಾರ ಮುಕ್ತಾಯವಾಗಿದ್ದರೂ ಅವರು ಪ್ರಚಾರ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ 'ಮೋದಿ'ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ 'ಮೋದಿ'

ರಾಹುಲ್ ಗಾಂಧಿ ಅವರ ಬಳಿ ವಿದೇಶಿ ಪಾರ್ಸೋರ್ಟ್ ಇದ್ದು, ಅವರು ನಾಮಪತ್ರವನ್ನು ಮರುಪರಿಶೀಲಿಸಬೇಕು ಎಂದು ತುಷಾರ್ ವೆಲ್ಲಪಲ್ಲಿ ಅವರು ಕೆಲ ದಿನಗಳ ಹಿಂದೆ ದೂರು ನೀಡಿದ್ದರು. ಆದರೆ, ರಾಹುಲ್ ಗಾಂಧಿ ಅವರ ನಾಮಪತ್ರ ಸಿಂಧುವಾಗಿದೆ ಎಂದು ಚುನಾವಣಾಧಿಕಾರಿ ಈಗಾಗಲೆ ತಿಳಿಸಿದ್ದಾರೆ.

English summary
Wayanad (Kerala) BJP candidate has filed complaint against Rahul Gandhi for his tweet on the voting day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X