ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯಲೆಂದು ಟವರ್ ಏರಿದವಳ ಜೀವ ಉಳಿಸಿದ ಕಣಜ ಹುಳು

|
Google Oneindia Kannada News

ಅಲಪ್ಪುಳ, ಮೇ 10: ಮೊಬೈಲ್ ಟವರ್ ಏರಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದ ಮಹಿಳೆಯೊಬ್ಬಳು ಕಣಜಗಳಿಗೆ ಹೆದರಿ ಕೆಳಗಿಳಿದು ಜೀವ ಉಳಿಸಿದ ಘಟನೆ ಕೇರಳ ರಾಜ್ಯದ ಅಲಪ್ಪುಳ ಜಿಲ್ಲೆಯ ಕೈಯಂಕುಳಂ (Kayamkulam) ಪಟ್ಟಣದಲ್ಲಿ ನಡೆದಿದೆ. ಸ್ಥಳೀಯ ಟಿವಿ ಚಾನಲ್‌ಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ.

ನಿನ್ನೆ ಸೋಮವಾರ ಈ ಘಟನೆ ನಡೆದಿದೆ. ತನ್ನ ಮಗು ಗಂಡನ ಬಳಿ ಇದೆ. ಅದನ್ನು ತನಗೆ ಒಪ್ಪಿಸಬೇಕು ಎಂಬುದು ತಮಿಳುನಾಡು ಮೂಲದ ಈ ಮಹಿಳೆಯ ಬೇಡಿಕೆ. ತನಗೆ ಮಗು ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಹತ್ತತೊಡಗುತ್ತಾಳೆ.

ಬೊಂಬಾಟ್ ಮಗಾ: 12,000 ರೂಪಾಯಿಯಲ್ಲೇ ಇಡೀ ಭಾರತ ಸುತ್ತಿದ ಬೆಂಗಳೂರಿನ ಹುಡುಗ!ಬೊಂಬಾಟ್ ಮಗಾ: 12,000 ರೂಪಾಯಿಯಲ್ಲೇ ಇಡೀ ಭಾರತ ಸುತ್ತಿದ ಬೆಂಗಳೂರಿನ ಹುಡುಗ!

ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ. ಕೆಳಗಿಳಿಯುವಂತೆ ಆಕೆಗೆ ಮನವೊಲಿಸಲು ಯತ್ನಿಸುತ್ತಾರೆ. ಆದರೂ ಆಕೆ ಕೇಳದೇ ತನ್ನ ಪಾಡಿಗೆ ತಾನು ಟವರ್ ತುದಿತ್ತ ಹತ್ತುತ್ತಾ ಹೋಗುತ್ತಿರುತ್ತಾಳೆ.

Wasps Save Life of Kerala Woman Who Threatened to Jump from Tower

ಕಣಜ ಹುಳುಗಳ ಸ್ವಾಗತ:
ಸಿಟ್ಟಿನ ಭರದಲ್ಲಿ ಮೊಬೈಲ್ ಟವರ್ ಹತ್ತುತ್ತಿದ್ದ ಆ ಮಹಿಳೆ ಆಕಸ್ಮಿಕವಾಗಿ ಕಣಜ ಹುಳುಗಳ ಗೂಡನ್ನ (Wasp Net) ಕೆದಕಿಬಿಡುತ್ತಾಳೆ. ರೊಚ್ಚಿಗೆದ್ದ ಕಣಜಗಳು ಆಕೆಯ ಮೇಲೆ ಮುತ್ತಗೆ ಹಾಕಿ ಕಚ್ಚಿವೆ.

ಹುಷಾರ್: ನೀವು ಸೇವಿಸುವ ನೀರು, ಹಣ್ಣು, ಆಹಾರದಿಂದಲೇ ಹರಡುವುದು ಶಿಗೆಲ್ಲಾ ಸೋಂಕು!ಹುಷಾರ್: ನೀವು ಸೇವಿಸುವ ನೀರು, ಹಣ್ಣು, ಆಹಾರದಿಂದಲೇ ಹರಡುವುದು ಶಿಗೆಲ್ಲಾ ಸೋಂಕು!

ದಿಢೀರ್ ಆಗಿ ಕಣಜಗಳ ದಾಳಿಯಿಂದ ಆ ಮಹಿಳೆಗೆ ಬೆವರಿಳಿಯುತ್ತದೆ. ಸಾಯುತ್ತೇನೆಂದು ಬೆದರಿಕೆ ಹಾಕಲು ಮೇಲೆ ಹತ್ತಿದ ಮಹಿಳೆ ಕಣಜಗಳ ದಾಳಿಯಿಂದ ಭಯಗೊಂಡು ಜೀವ ಉಳಿಸಿಕೊಳ್ಳಲು ಕೆಳಗೆ ಇಳಿಯತೊಡುತ್ತಾಳೆ. ಸರಸರನೆ ಕೆಳಗಿಳಿದ ಈಕೆ ಇನ್ನೂ ಕೆಲ ಅಡಿ ಎತ್ತರದಲ್ಲಿರುವಾಗಲೇ ಕೆಳಗೆ ಹಾರುತ್ತಾಳೆ. ಕೆಳಗೆ ಸುರಕ್ಷತೆಗೆಂದು ಹಾಕಲಾಗಿದ್ದ ಬಲೆಯಿಂದಾಗಿ ಆಕೆಗೆ ಸಣ್ಣಪುಟ್ಟ ಗಾಯ ಮಾತ್ರ ಆಗಿದೆ.

Wasps Save Life of Kerala Woman Who Threatened to Jump from Tower

ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳು, ಈ ಕಣಜಗಳು ದಾಳಿ ಮಾಡದೇ ಇದ್ದಿದ್ದರೆ ಆ ಮಹಿಳೆ ಕೆಳಗಿಳಿದು ಬರುತ್ತಿರಲಿಲ್ಲವೇನೋ ಎಂದು ಅನುಮಾನ ವ್ಯಕ್ತಡಿಸುತ್ತಾರೆ.

(ಒನ್ಇಂಡಿಯಾ ಸುದ್ದಿ)

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

English summary
A woman in Kerala who threatened to die by suicide by jumping from a mobile tower was saved after wasps swarmed around her, forcing her to climb down from the tower.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X