ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಯಲ್ಲಿ ಮುಂದುವರೆದ ಹಿಂಸಾಚಾರ, 1400 ಮಂದಿ ಬಂಧನ

|
Google Oneindia Kannada News

ತಿರುವನಂತಪುರಂ, ಜನವರಿ 04: ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಬೆನ್ನಲ್ಲೆ ಕೇರಳದಲ್ಲಿ ಹಿಂಸಾಚಾರ ಹೆಚ್ಚಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು 1400 ಜನರನ್ನು ಶುಕ್ರವಾರ ಬಂಧಿಸಿದ್ದಾರೆ.

ಅಯ್ಯಪ್ಪ! ಕಣ್ಣೀರು ತುಂಬಿಕೊಂಡೇ ತನ್ನ ಕರ್ತವ್ಯ ನಿರ್ವಹಿಸಿದ ಆ ಪತ್ರಕರ್ತೆ ಅಯ್ಯಪ್ಪ! ಕಣ್ಣೀರು ತುಂಬಿಕೊಂಡೇ ತನ್ನ ಕರ್ತವ್ಯ ನಿರ್ವಹಿಸಿದ ಆ ಪತ್ರಕರ್ತೆ

ಪರಿಸ್ಥಿತಿಯನ್ನು ಹತೋಟಿಗೆ ತರಲು, ಮುನ್ನೆಚ್ಚರಿಕಾ ಕ್ರಮವಾಗಿ ಇಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ನಿನ್ನೆ ನಡೆದ ಬಂದ್ ಸಂದರ್ಭದಲ್ಲಿ ಹಿಂಸಾಚಾರ ನಡೆದು ಹಲವರು ಗಾಯಗೊಂಡಿದ್ದರು. ಒಬ್ಬ ಬಿಜೆಪಿ ಕಾರ್ಯಕರ್ತ ಹತನಾಗಿದ್ದ.

ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ:ಮಂಜೇಶ್ವರದಲ್ಲಿ 144 ಸೆಕ್ಷನ್ ಜಾರಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಹಲ್ಲೆ:ಮಂಜೇಶ್ವರದಲ್ಲಿ 144 ಸೆಕ್ಷನ್ ಜಾರಿ

ಕೇರಳದಲ್ಲಿ ಪ್ರತಿಭಟನೆ ಹಿಂಸಾಚಾರ ಹೆಚ್ಚಾಗಿದ್ದು, ಭಾನುವಾರ ನಡೆಯಬೇಕಿದ್ದ ಮೋದಿ ಅವರ ಕೇರಳ ಭೇಟಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಮೋದಿ ಅವರ ಕಾರ್ಯಕ್ರಮ ಮುಂದೂಡಲ್ಪಟ್ಟಿರುವುದು ಇತರ ಕಾರಣಗಳಿಗಾಗಿಯೇ ಹೊರತು ಹಿಂಸಾಚಾರ, ಪ್ರತಿಭಟನೆಯ ಕಾರಣಕ್ಕೆ ಅಲ್ಲ ಎಂದು ಕೇರಳ ಬಿಜೆಪಿ ಹೇಳಿದೆ.

violence in Sabarimala: 1400 people arrested

ಶುಕ್ರವಾರ ಬೆಳಿಗಿನ ಜಾವ ಮಲಬಾರ್ ದೇವಸಂ ಬೋರ್ಡ್‌ನ ಸದಸ್ಯ ಶಶಿಕುಮಾರ್ ಎಂಬುವರ ಮನೆಯ ಮೇಲೆ ಕಚ್ಚಾ ಬಾಂಬ್ ದಾಳಿ ಸಹ ಆಗಿದೆ. ನಿನ್ನೆ ಸಹ ಸಿಪಿಐಎಂ ಕಚೇರಿ ಮೇಲೆ ಕಚ್ಚಾ ಬಾಂಬ್ ದಾಳಿ ಆಗಿತ್ತು. ಗುರುವಾರದಂದು ಬಿಜೆಪಿ ಮತ್ತು ಕಮ್ಯೂನಿಸ್ಟ್‌ ಪಕ್ಷದ ಕಾರ್ಯಕರ ಮನೆಗಳ ಮೇಲೂ ದಾಳಿಗಳಾಗಿವೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ: ಮಾಸ್ಟರ್ ಪ್ಲಾನ್ ಮಾಡಿದ್ದು ಮಡಿಕೇರಿಯಲ್ಲಿ! ಶಬರಿಮಲೆಗೆ ಮಹಿಳೆಯರ ಪ್ರವೇಶ: ಮಾಸ್ಟರ್ ಪ್ಲಾನ್ ಮಾಡಿದ್ದು ಮಡಿಕೇರಿಯಲ್ಲಿ!

ಜನವರಿ 1 ರ ತಡರಾತ್ರಿ 3:45 ಕ್ಕೆ ಇಬ್ಬರು ಮಹಿಳೆಯರು ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದರು ಇದು ಕೇರಳದಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ನಿನ್ನೆ ರಾತ್ರಿ ಸಹ ಶ್ರೀಲಂಕಾದ ಮಹಿಳೆ ಒಬ್ಬರು ದೇವಾಲಯ ಪ್ರವೇಶಿಸಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಕೇರಳದಲ್ಲಿ ಪ್ರತಿಭಟನೆಗಳು ಇನ್ನೂ ಹೆಚ್ಚಾಗುವ ಆತಂಕ ಇದೆ. ಹಾಗಾಗಿಯೇ ಮುನ್ನೆಚ್ಚರಿಕಾ ಕ್ರಮವಾಗಿ 1400 ಜನರನ್ನು ಬಂಧಿಸಲಾಗಿದೆ.

English summary
Violence continued in Sabarimala and Kerala's other parts. Police today arrested 1400 people for precautionary. Modi's Kerala visit dated Sunday was also postponed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X