ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಫೋಟೋಶೂಟ್‌ಗಾಗಿ ಗುಂಡಿ ಬಿದ್ದ ರಸ್ತೆಯಲ್ಲಿ ನಡೆದಾಡಿದ ಕೇರಳದ ವಧು

|
Google Oneindia Kannada News

ಮದುವೆ ಜೀವನದಲ್ಲಿ ಮರೆಯಲಾಗದ ಸಂಭ್ರಮ. ಇದನ್ನು ಹೆಚ್ಚು ಸ್ಮರಣೀಯ ದಿನವನ್ನಾಗಿ ಮಾಡಲು ಪ್ರಯತ್ನಿಸುವವರು ಸದ್ಯ ಹೆಚ್ಚಾಗಿದ್ದಾರೆ. ಅದರಲ್ಲೂ ವಿಭಿನ್ನವಾಗಿ ಫೋಟೋ ಶೂಟ್ ಮಾಡೋದು ಅಂದರೆ ಈಗಿನ ಟ್ರೆಂಡ್ ಆಗಿದೆ. ಮದುವೆ ಫೋಟೋ ಶೂಟ್‌ಗಾಗಿ ಹಲವಾರು ಪ್ರವಾಸಿ ತಾಣಗಳು, ರೆಸಾರ್ಟ್‌, ರೆಸ್ಟೋರೆಂಟ್, ಫಾಲ್ಸ್‌ ಹೀಗೆ ಹಲವಾರು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಂದು ಫೋಟೋ ಶೂಟ್‌ಗಾಗಿ ಆಯ್ಕೆ ಮಾಡಿಕೊಂಡ ಸ್ಥಳ ತುಂಬಾನೇ ವಿಭಿನ್ನವಾಗಿದೆ.

ಕೇರಳದ ವಧುಯೊಬ್ಬರು ತಮ್ಮ ಮದುವೆಯ ಚಿತ್ರೀಕರಣವನ್ನು ಸ್ಮರಣೀಯವಾಗಿಸಲು ಗುಂಡಿಗಳ ಸಮಸ್ಯೆಯನ್ನು ಹೈಲೈಟ್ ಮಾಡಿದ್ದಾರೆ. ವಧು ಮತ್ತು ವಿವಾಹದ ಛಾಯಾಗ್ರಾಹಕರನ್ನು ಒಳಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಂಪು ಸೀರೆ ಉಟ್ಟ ವಧು ಗುಂಡಿಗಳಿಂದ ಕೂಡಿದ ರಸ್ತೆಯಲ್ಲಿ ನಡೆಯುತ್ತಿರುವುದು ವಿಡಿಯೋದಲ್ಲಿದೆ.

ವಿಡಿಯೊದಲ್ಲಿ, ವಧು ಸಂಪೂರ್ಣವಾಗಿ ಕೆಸರು ನೀರಿನಿಂದ ತುಂಬಿದ ದೊಡ್ಡ ಗುಂಡಿಯ ಉದ್ದಕ್ಕೂ ನಡೆದುಕೊಂಡು ಬರುತ್ತಾರೆ. ಬೀಳದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವಾಗ ವಾಹನಗಳು ಹಾದುಹೋಗುವುದನ್ನು ಕ್ಲಿಪ್ ತೋರಿಸುತ್ತದೆ. ಒಬ್ಬ ಛಾಯಾಗ್ರಾಹಕ ವಧುವಿನ ಚಿತ್ರಗಳನ್ನು ದೂರದಿಂದ ಸೆರೆಹಿಡಿಯುತ್ತಿರುವುದು ಕಂಡುಬರುತ್ತದೆ.

Video: Kerala bride walks potholed road for photoshoot

ವಿಡಿಯೊವನ್ನು ಇಲ್ಲಿ ಪರಿಶೀಲಿಸಿ:

ಚಿತ್ರಗಳು ಮತ್ತು ವಿಡಿಯೊವನ್ನು Instagram ಹ್ಯಾಂಡಲ್ Arrow_weddingcompany ಪೋಸ್ಟ್ ಮಾಡಿದೆ. ವಿಡಿಯೋ ಜೊತೆಗೆ, "ರಸ್ತೆಯ ಮಧ್ಯದಲ್ಲಿ ವಧುವಿನ ಫೋಟೋಶೂಟ್" ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವಿಡಿಯೊವನ್ನು ಸೆಪ್ಟೆಂಬರ್ 11 ರಂದು ಹಂಚಿಕೊಳ್ಳಲಾಗಿದೆ ಮತ್ತು ಇದುವರೆಗೆ ಈ ಕ್ಲಿಪ್ 4.3 ಮಿಲಿಯನ್ ವೀಕ್ಷಣೆಗಳನ್ನು ಮತ್ತು 37,0400 ಲೈಕ್‌ಗಳನ್ನು ಸಂಗ್ರಹಿಸಿದೆ.

ವಧುವಿನ ಸೃಜನಶೀಲತೆಯಿಂದ ಇಂಟರ್ನೆಟ್ ಪ್ರಭಾವಿತವಾಗಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಕೇರಳದ ರಸ್ತೆ ಪರಿಸ್ಥಿತಿಗಳನ್ನು ಗೇಲಿ ಮಾಡಿದ್ದಾರೆ. ಸಾಕಷ್ಟು ಕಾಮೆಂಟ್‌ಗಳನ್ನು ಮಾಡಿದ್ದಾರೆ.

Video: Kerala bride walks potholed road for photoshoot

ಇನ್ನೊಬ್ಬ ಬಳಕೆದಾರರು "ಇದು ರಸ್ತೆಯಲ್ಲ ಕೊಳ" ಎಂದು ಬರೆದಿದ್ದಾರೆ. ಮತ್ತೊಂದು ಕಾಮೆಂಟ್ ನಲ್ಲಿ "ಇದು ನೈಸ್ ರೋಡ್" ಎಂದು ಗೇಲಿ ಮಾಡಲಾಗಿದೆ. "ಇದು ರಸ್ತೆಯೇ? ನೀವು ಕೆಲವು ಮರಿ ಮೀನುಗಳನ್ನು ಖರೀದಿಸಿದರೆ, ನೀವು ಮೀನು ಸಾಕಾಣಿಕೆಯನ್ನು ಪ್ರಾರಂಭಿಸಬಹುದು" ಎಂದು ಮೂರನೇ ಕಾಮೆಂಟ್‌ನಲ್ಲಿ ಗುಂಡಿ ರಸ್ತೆಗಳ ಬಗ್ಗೆ ಅಪಹಾಸ್ಯ ಮಾಡಲಾಗಿದೆ.

ಆಗಸ್ಟ್ 9 ರಂದು ಕೇರಳ ಹೈಕೋರ್ಟ್ ಸೋಮವಾರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ತಮ್ಮ ನಿಯಂತ್ರಣದಲ್ಲಿರುವ ಪ್ರತಿಯೊಂದು ರಸ್ತೆಯನ್ನು ಪ್ರಸ್ತುತ ರಿಯಾಯಿತಿದಾರರ ಮೂಲಕ ಅಥವಾ ಹೊಸ ಗುತ್ತಿಗೆದಾರರ ಮೂಲಕ ಸರಿಪಡಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿತು. ಅದನ್ನು ಯಾವುದೇ ವಿಳಂಬವಿಲ್ಲದೆ ಮಾಡಬೇಕು ಎಂದು ಆದೇಶಿಸಿತ್ತು. ರಾಷ್ಟ್ರೀಯ ಹೆದ್ದಾರಿಯ ಗುಂಡಿಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಅಮಿಕಸ್ ಕ್ಯೂರಿ ನ್ಯಾಯಾಲಯದ ಗಮನಕ್ಕೆ ತಂದ ನಂತರ ರಿಟ್ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಾಯಿತು.

English summary
A video of a Kerala bride walking on a bumpy road for a wedding photoshoot has gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X