• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪವಿತ್ರ ಪ್ರೇಮ ಅಂದ್ರೆ ಇದೇನಾ? ಈ ಫೇಸ್‌ಬುಕ್ ಪ್ರೇಮಿಗಳ ಕತೆ ಓದಿ

|

ತಿರುವನಂತಪುರಂ, ಮಾರ್ಚ್ 5: ಪ್ರೀತಿಗೆ ಕಣ್ಣಿಲ್ಲ ಕುರುಡು ಅಂತಾರೆ ಅದು ಈ ಇಬ್ಬರು ಫೇಸ್‌ಬುಕ್ ಪ್ರೇಮಿಗಳ ವಿಷಯದಲ್ಲಿ ನಿಜವಾಗಿದೆ.

ಕೇರಳದ ಯುವತಿಯೊಬ್ಬಳು ಪಾರ್ಶ್ವವಾಯುವಿಗೆ ಒಳಗಾಗಿರುವ ಯುವಕನನ್ನು ಮದುವೆಯಾಗಿ ಆಶ್ಚರ್ಯ ಮೂಡಿಸಿದ್ದಾರೆ. ಶಾಹ್ನಾ ಪಾರ್ಶ್ವವಾಯುವಿಗೆ ಒಳಗಾದ ಪ್ರಣವ್‍ನನ್ನು ಮದುವೆಯಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ. ಶಾಹ್ನಾ ತನ್ನ ಪೋಷಕರ ವಿರುದ್ಧವಾಗಿ ಪ್ರಣವ್‍ನನ್ನು ಮದುವೆಯಾಗಿದ್ದಾಳೆ.

ಇರಿಂಜಲಕುಡ ಮೂಲದ ಪ್ರಣವ್ ಆರು ವರ್ಷಗಳ ಹಿಂದೆ ಕಾಲೇಜಿನಲ್ಲಿದ್ದಾಗ ರಸ್ತೆ ಅಪಘಾತವಾಗಿತ್ತು. ಆಗ ಸೊಂಟದ ಕೆಳಗಿನ ಭಾಗದ ಶಕ್ತಿ ಕಳೆದುಕೊಂಡು ಪಾರ್ಶ್ವವಾಯುವಿಗೆ ಒಳಗಾಗಿದ್ದನು.

ಅಂದಿನಿಂದ ಪ್ರಣವ್ ವೀಲ್‌ಚೇರ್ ಮೇಲಿಯೇ ಇದ್ದಾರೆ. ಅಲ್ಲದೇ ಮೂಲಭೂತ ಅಗತ್ಯಗಳಿಗೂ ಇನ್ನೊಬ್ಬರ ಮೇಲೆ ಅವಲಂಬಿತನಾಗಿದ್ದಾನೆ. ಪ್ರಣವ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದನು. ಆಗಾಗ ವ್ಹೀಲ್‍ಚೇರ್ ಮೂಲಕವೇ ಸ್ಥಳೀಯ ದೇವಾಲಯದ ಉತ್ಸವಗಳಿಗೆ ಹೋಗುತ್ತಿದ್ದನು. ಅಲ್ಲಿನ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುತ್ತಿದ್ದನು.

ಕೆಲವು ದಿನಗಳ ನಂತರ ತನ್ನ ಪ್ರೀತಿಯನ್ನು ಪ್ರಣವ್‍ಗೆ ಹೇಳಿಕೊಂಡಿದ್ದಾಳೆ. ಅಲ್ಲದೇ ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ಆಗ ಪ್ರಣವ್ ತನ್ನ ಆರೋಗ್ಯದ ಸ್ಥಿತಿಯ ಬಗ್ಗೆ ಹೇಳಿದ್ದಾನೆ. ಆದರೂ ಶಾಹ್ನಾ ಆತನನ್ನೇ ಮದುವೆಯಾಗಲು ಬಯಸಿದ್ದಳು. ಪ್ರಣವ್, ಅವರ ಸಂಬಂಧಿಕರು ಮತ್ತು ಸ್ನೇಹಿತರು ಅವಳ ನಿರ್ಧಾರವನ್ನು ಬದಲಾಯಿಸುವಂತೆ ಮನವೊಲಿಸಿದರು. ಶಾಹ್ನಾ ಕುಟುಂಬವೂ ಈ ಸಂಬಂಧವನ್ನು ವಿರೋಧಿಸಿತ್ತು.

ಆದರೆ ಶಾಹ್ನಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಬಳಿಕ ಪೋಷಕರು ಒಪ್ಪದಿದ್ದರೂ ಕೂಡ ಹೇಗೋ ಅವರನ್ನು ಒಪ್ಪಿಸಿ ಮದುವೆಯಾಗಿದ್ದಾರೆ. ಪ್ರಣವ್ ಪೋಷಕರು, ಸ್ನೇಹಿತರು ಮತ್ತು ಸಂಬಂಧಿಕರ ನವದಂಪತಿಗೆ ಆಶೀರ್ವಾದ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ನವ ದಂಪತಿಗೆ ಶುಭಾಕೋರಿದ್ದಾರೆ.

English summary
Shahna, a young Keralite girl, is winning the internet after she chose to go against her parents' will and marry a paralysed man Pranav, whom she met on social media. The couple tied the nuptial knot on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X