ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಗೆ ತೆರಳಲು ಸಾಧ್ಯವಾಗದ ಭಕ್ತರಿಗೆ ಪರ್ಯಾಯ ಆಯ್ಕೆ

|
Google Oneindia Kannada News

ತಿರುವನಂತಪುರಂ, ನವೆಂಬರ್ 30: ಕೊರೊನಾ ವೈರಸ್ ಸೋಂಕಿನ ಕಠಿಣ ನಿಯಮಗಳ ಕಾರಣದಿಂದ ಶಬರಿಮಲೆ ದೇವಸ್ಥಾನಕ್ಕೆ ತೆರಳಲು ಸಾಧ್ಯವಾಗದೆ ನಿರಾಶೆಗೊಂಡಿರುವ ಭಕ್ತರಿಗೆ ತಿರುಚಿಯ ಅಯ್ಯಪ್ಪನ್ ದೇವಸ್ಥಾನ ಸ್ವಾಗತ ನೀಡುತ್ತಿದೆ. 65 ವರ್ಷ ಮೇಲ್ಪಟ್ಟ ವೃದ್ಧರು ಮತ್ತು 10 ವರ್ಷದ ಒಳಗಿನ ಮಕ್ಕಳಿಗೆ ಅಯ್ಯಪ್ಪನ್ ದೇವಸ್ಥಾನದ ಒಳಗೆ ಪ್ರವೇಶವಿಲ್ಲ.

ಕೊರೊನಾ ವೈರಸ್ ಸೋಂಕು ಹರಡುವ ಭೀತಿಯಿಂದ ಪ್ರತಿ ದಿನ ತಲಾ 1,000 ಭಕ್ತರ ಪ್ರವೇಶಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಶನಿವಾರ ಮತ್ತು ಭಾನುವಾರ ಹಾಗೂ ರಜಾ ದಿನಗಳಲ್ಲಿ ಮಾತ್ರವೇ 2,000 ಭಕ್ತರಿಗೆ ಟಿಕೆಟ್‌ಗಳನ್ನು ನೀಡಲಾಗುತ್ತಿದೆ. ಈ ಅವಧಿಯಲ್ಲಿ ಪ್ರತಿ ದಿನ ಲಕ್ಷಾಂತರ ಭಕ್ತರ ಆಗಮನದೊಂದಿಗೆ ಕೋಟ್ಯಂತರ ರೂ. ಸಂಗ್ರಹವಾಗುತ್ತಿತ್ತು. ಆದರೆ ಈ ಬಾರಿ ಕೆಲವೇ ಸಾವಿರ ಮಂದಿ ಭೇಟಿ ನೀಡಲು ಸಾಧ್ಯವಾಗಿದ್ದು. ದೇವಾಲಯದ ಆದಾಯ ಕುಸಿತವಾಗಿದೆ.

ಶಬರಿಮಲೆಗೆ ಭಕ್ತರ ಸಂಖ್ಯೆ ಹೆಚ್ಚಳ ಮಾಡಲು ತೀರ್ಮಾನಶಬರಿಮಲೆಗೆ ಭಕ್ತರ ಸಂಖ್ಯೆ ಹೆಚ್ಚಳ ಮಾಡಲು ತೀರ್ಮಾನ

ಇದರಿಂದಾಗಿ ಅಯ್ಯಪ್ಪ ಸ್ವಾಮಿ ಲಕ್ಷಾಂತರ ಭಕ್ತರಿಗೆ ಶಬರಿಮಲೆಯ ಅಯ್ಯಪ್ಪನ ಸನ್ನಿಧಿಗೆ ವಾಡಿಕೆಯಂತೆ ಭೇಟಿ ನೀಡಲು ಸಾಧ್ಯವಾಗದೆ ನಿರಾಶೆಯಾಗಿದೆ. ಅಯ್ಯಪ್ಪನ ಭಕ್ತರು ಶಬರಿಮಲೆಗೆ ತೆರಳಿ ತಮ್ಮ ವ್ರತ ಪೂರೈಸಲು ಸಾಧ್ಯವಾಗದೆ ಇದ್ದರೆ ತಿರುಚಿಯ ಸ್ಥಳೀಯ ಅಯ್ಯಪ್ಪನ್ ದೇವಾಲಯದಲ್ಲಿ ಪೂಜೆ ಸಲ್ಲಿಸಬಹುದಾಗಿದೆ.

Trichy Ayyappan Temple Invites Devotees Who Unable To Visit Sabarimala

'ಶಬರಿಮಲೆ ಅಯ್ಯಪ್ಪನ ಸ್ವಾಮಿಯ ಸನ್ನಿಧಿಗೆ ಹೋಗಲು ಸಾಧ್ಯವಾಗದ ಭಕ್ತರನ್ನು ತಿರುಚಿಯ ಅಯ್ಯಪ್ಪನ್ ದೇವಸ್ಥಾನಕ್ಕೆ ಅಯ್ಯಪ್ಪ ಸೇವಾ ಸಂಘಂ ಆಹ್ವಾನಿಸುತ್ತಿದೆ' ಎಂದು ದೇವಸ್ಥಾನದ ಹೇಳಿಕೆ ತಿಳಿಸಿದೆ.

ಶಬರಿಮಲೆ: ಮೂವರು ಪೊಲೀಸರಲ್ಲಿ ಕೋವಿಡ್ ಪಾಸಿಟಿವ್, ತೀವ್ರ ಕಟ್ಟೆಚ್ಚರಶಬರಿಮಲೆ: ಮೂವರು ಪೊಲೀಸರಲ್ಲಿ ಕೋವಿಡ್ ಪಾಸಿಟಿವ್, ತೀವ್ರ ಕಟ್ಟೆಚ್ಚರ

Recommended Video

coronaಯಿಂದ ಎಷ್ಟು ಕಷ್ಟ ನೋಡಿ | Oneindia Kannada

ಇರುಮುಡಿ ಕಟ್ಟಲು ಮತ್ತು ತುಪ್ಪದ ಅಭಿಷೇಕ ಮಾಡಿಸಲು ಸಾಧ್ಯವಾಗದ ಭಕ್ತರು ತಿರುಚಿಯ ಅಯ್ಯಪ್ಪನ್ ದೇವಾಲಯಕ್ಕೆ ತೆರಳಿ ತುಪ್ಪ ಮತ್ತು ವಿಭೂತಿ ಪ್ರಸಾದ ಸ್ವೀಕರಿಸಬಹುದು. ಬೆಳಿಗ್ಗೆ 7:10 ರಿಂದ 10:00 ಗಂಟೆ ಮತ್ತು ಸಂಜೆ 6:00 ರಿಂದ 8:00 ದರ್ಶನದ ಸಮಯವಾಗಿದೆ. ಇರುಮುಡಿಯಿಂದ ಮತ್ತು ಭಕ್ತರಿಂದ ಸ್ವೀಕರಿಸಿದ ತುಪ್ಪವನ್ನು ಅಯ್ಯಪ್ಪ ಸ್ವಾಮಿಯ ಅಭಿಷೇಕಕ್ಕೆ ಬಳಸಲಾಗುತ್ತದೆ. ಸರ್ಕಾರದ ಮಾರ್ಗಸೂಚಿಗಳ ಅನ್ವಯ ಭಕ್ತರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ ಮುಂತಾದ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಅದು ತಿಳಿಸಿದೆ.

English summary
Ayyappan temple in Trichy has offered invite to Ayyappa Swamy pilgrims who unable to visit Sabarimala due to Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X