ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಮುತುಂಗಾದಲ್ಲಿ ಬೆನ್ನಟ್ಟಿ ಬಂದ ಹುಲಿಯ ವಿಡಿಯೋ ವೈರಲ್

|
Google Oneindia Kannada News

ಕೇರಳ ರಾಜ್ಯದ ವಯನಾಡಿನಲ್ಲಿ ಇರುವ ಮುತುಂಗಾ ವನ್ಯಜೀವಿ ಧಾಮದಲ್ಲಿ ಬೈಕ್ ನಲ್ಲಿ ತೆರಳುವ ವೇಳೆ ವಿಡಿಯೋವೊಂದು ಸೆರೆ ಹಿಡಿದಿದ್ದು, ಅದೀಗ ಭಾರೀ ವೈರಲ್ ಆಗಿದೆ. ಅದಕ್ಕೆ ಕಾರಣ ಏನು ಗೊತ್ತೆ? ಆ ವಿಡಿಯೋದಲ್ಲಿ ಭಯ ಹುಟ್ಟಿಸುವಂಥ ದೃಶ್ಯ ಸೆರೆಯಾಗಿದೆ. ಅಂದ ಹಾಗೆ ಆ ವಿಡಿಯೋದಲ್ಲಿ ಏನಿದೆ ಗೊತ್ತೆ?

ವನ್ಯಜೀವಿ ಧಾಮದಲ್ಲಿ ಇಬ್ಬರು ಬೈಕ್ ನಲ್ಲಿ ತೆರಳುವಾಗ ‌ತಮ್ಮನ್ನು ಹುಲಿಯೊಂದು ಬೆನ್ನಟ್ಟಿ ಬರುತ್ತಿದೆ ಎಂಬುದನ್ನು ಒಬ್ಬಾತ ಗುರುತಿಸಿದ್ದಾರೆ. ಆ ಹುಲಿ ಕಾಡಿನೊಳಗೆ ಕಣ್ಮರೆಯಾಗುವ ಕೆಲವೇ ಕ್ಷಣಗಳ ಮುನ್ನ ಬೈಕ್ ಅನ್ನು ಬೆನ್ನಟ್ಟಿದೆ. ಅದರ ವಿಡಿಯೋ ಮಾಡಲಾಗಿದ್ದು, ಅರಣ್ಯ್ ಹಾಗೂ ವನ್ಯಜೀವಿ ಸಂರಕ್ಷಣಾ ಸೊಸೈಟಿಯಿಂದ ಈ ವಿಡಿಯೋ ಅನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳಲಾಗಿದೆ.

ಬಹಳ ಮಂದಿಗೆ ಈ ವಿಡಿಯೋದ ಹಿನ್ನೆಲೆ ಗೊತ್ತಿಲ್ಲ. ಆದರೆ ಮಾಧ್ಯಮವೊಂದರ ಜತೆಗೆ ಸೊಸೈಟಿಯವರು ಮಾತನಾಡಿದ್ದಾರೆ. ಅವರು ಹೇಳುವ ಪ್ರಕಾರ, ಬೈಕ್ ನಲ್ಲಿ ತೆರಳುತ್ತಿದ್ದವರು ಅರಣ್ಯ ಇಲಾಖೆ ಅಧಿಕಾರಿಗಳು. ಹುಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಸಿಕ್ಕಿದ್ದರಿಂದ ಆ ಪ್ರದೇಶದಲ್ಲಿ ಪಹರೆಗಾಗಿ ತೆರಳಿದ್ದರು ಎನ್ನಲಾಗಿದೆ.

Tiger

ಇತರ ಸಾಮಾಜಿಕ ಮಾಧ್ಯಮಗಳಲ್ಲೂ ಹುಲಿ ಬೆನ್ನಟ್ಟಿ ಬರುವ ವಿಡಿಯೋ ವೈರಲ್ ಆಗಿದೆ. ಕೆಲವರು ತಮ್ಮ ಆತಂಕ ವ್ಯಕ್ತಪಡಿಸಿದ್ದರೆ, ಮತ್ತೂ ಕೆಲವರು ತಮಾಷೆಯ ಕಾಮೆಂಟ್ ಹಾಕಿದ್ದಾರೆ.

English summary
Tiger chasing bike riders in Kerala state Wayanad Muthunga wild life sanctuary video viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X