ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಯನಾಡಿನಲ್ಲಿ ಮರು ಮತದಾನಕ್ಕೆ ಆಗ್ರಹಿಸಿದ ಎನ್ಡಿಎ ಅಭ್ಯರ್ಥಿ

|
Google Oneindia Kannada News

ವಯನಾಡು, ಏಪ್ರಿಲ್ 23: ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಇಂದು ಮತದಾನ ಪ್ರಕ್ರಿಯೆಲ್ಲಿ ಗೊಂದಲ, ವಿಳಂಬ ಉಂಟಾಗಿ ಮತದಾರರು ಗಂಟೆಗಟ್ಟಲೇ ಕ್ಯೂನಲ್ಲಿ ಕಾಯಬೇಕಾಯಿತು. ಇವಿಎಂ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಮರು ಮತದಾನಕ್ಕೆ ಎನ್ಡಿಎ ಅಭ್ಯರ್ಥಿ ತುಷಾರ್ ವೆಲ್ಲಪಲ್ಲಿ ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ವಯನಾಡು ಬಿಜೆಪಿ ಅಭ್ಯರ್ಥಿ ತುಷಾರ್ ಅವರು ಅರಪ್ಪಟ್ಟಾದ ಮೂಪ್ಪನಾಡ್ ಪಂಚಾಯಿತಿ ವ್ಯಾಪ್ತಿಯ ಸಿಎಂಎಸ್ ಹೈಯರ್ ಸೆಕಂಡರಿ ಶಾಲೆಯ ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರ ಹಾಳಾಗಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಎರಡೆರಡು ಬಾರಿ ಬಟನ್ ಒತ್ತಿದರೂ ವೋಟ್ ಬೀಳುತ್ತಿಲ್ಲ, ಇವಿಎಂ ಸಂಪೂರ್ಣ ಹಾಳಾಗಿದೆ ಎಂದು ದೂರಿದ್ದಾರೆ.

ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದ ಹಲವು ಬೂತ್ ಗಳಲ್ಲಿ ಇವಿಎಂ ದೋಷ ಕಂಡು ಬಂದಿದ್ದು, ಚುನಾವಣಾ ಆಯೋಗ ಈ ಬಗ್ಗೆ ಗಮನಿಸುತ್ತಿದೆ ಎಂಬ ನಂಬಿಕೆ ಇದೆ ಎಂದಿದಾರೆ.

Thushar Vellappally, NDA candidate from Wayanad demands re-polling after EVM malfunction

ಕೇರಳದಲ್ಲಿ 2.61 ಕೋಟಿ ಮತದಾರರಿದ್ದು, ಈ ಪೈಕಿ 1.34 ಕೋಟಿ ಮಹಿಳೆಯರು ಹಾಗೂ 1.26 ಕೋಟಿ ಪುರುಷ ಮತದಾರರಿದ್ದಾರೆ. 174 ತೃತೀಯಲಿಂಗಿಗಳಿದ್ದಾರೆ. 227 ಅಭ್ಯರ್ಥಿಗಳ ಪೈಕಿ 25 ಮಂದಿ ಮಹಿಳೆಯರಿದ್ದಾರೆ.

English summary
Thushar Vellappally, NDA candidate from Wayanad Lok Sabha constituency has demanded re-polling after an electronic voting machine (EVM) malfunctioned at a polling booth here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X