ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಚಿನ್ನ ಸಾಗಣೆ ಪ್ರಕರಣ; 3 ಮಹತ್ವದ ಬೆಳವಣಿಗೆಗಳು

|
Google Oneindia Kannada News

ತಿರುವನಂತಪುರಂ, ಜುಲೈ 22 : ಕೇರಳದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಮೂರು ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಕೇರಳ ಹೈಕೋರ್ಟ್ ಒಪ್ಪಿಗೆ ನೀಡಿಲ್ಲ.

ಬುಧವಾರ ಕೇರಳದ ಎನ್‌ಐಎ ವಿಶೇಷ ನ್ಯಾಯಾಲಯ ಕಸ್ಟಮ್ಸ್ ಅಧಿಕಾರಿಗಳಿಗೆ ಸ್ವಪ್ನಾ ಸುರೇಶ್, ಸಂದೀಪ್ ನಾಯರ್ ವಿಚಾರಣೆ ನಡೆಸಲು ಒಪ್ಪಿಗೆ ನೀಡಿದೆ. ಇವರಿಬ್ಬರೂ ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು.

ಚಿನ್ನದ ಸ್ಮಗಲಿಂಗ್ ಕೇಸ್: ಫಜೀಲ್ ವಿರುದ್ಧ ಜಾಮೀನು ರಹಿತ ವಾರೆಂಟ್ಚಿನ್ನದ ಸ್ಮಗಲಿಂಗ್ ಕೇಸ್: ಫಜೀಲ್ ವಿರುದ್ಧ ಜಾಮೀನು ರಹಿತ ವಾರೆಂಟ್

ಚಿನ್ನ ಕಳ್ಳ ಸಾಗಣೆ ಪ್ರಕರಣ ಬೆಳಕಿಗೆ ಬಂದ ಬಳಿಕ ಇಬ್ಬರು ತಲೆಮರೆಸಿಕೊಂಡಿದ್ದರು. ಎನ್‌ಐಎ ಬೆಂಗಳೂರಿನಲ್ಲಿ ಇಬ್ಬರನ್ನು ಬಂಧಿಸಿತ್ತು. ಎನ್‌ಐಎ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಕಸ್ಟಮ್ಸ್ ಅಧಿಕಾರಿಗಳು ಸಹ ಆರೋಪಿಗಳ ವಿಚಾರಣೆ ನಡೆಸಲಿದ್ದಾರೆ.

ಚಿನ್ನದ ಸ್ಮಗಲಿಂಗ್ ಜೊತೆ ಸ್ವಪ್ನ ಸುರೇಶ್ ಮೇಲೆ ಮತ್ತೊಂದು ಕೇಸ್ಚಿನ್ನದ ಸ್ಮಗಲಿಂಗ್ ಜೊತೆ ಸ್ವಪ್ನ ಸುರೇಶ್ ಮೇಲೆ ಮತ್ತೊಂದು ಕೇಸ್

Three Developments In Kerala Gold Smuggling Case

ಕೇರಳದಲ್ಲಿ ಬೆಳಕಿಗೆ ಬಂದ ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಎನ್‌ಐಎ ತನಿಖೆ ನಡೆಯುತ್ತಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವುದು ಬೇಡ ಎಂದು ಹೇಳಿದೆ.

ಚಿನ್ನದ ಸ್ಮಗಲಿಂಗ್ ಕೇಸಲ್ಲಿ 20ಕ್ಕೂ ಅಧಿಕ ಹವಾಲ ಗ್ಯಾಂಗ್!ಚಿನ್ನದ ಸ್ಮಗಲಿಂಗ್ ಕೇಸಲ್ಲಿ 20ಕ್ಕೂ ಅಧಿಕ ಹವಾಲ ಗ್ಯಾಂಗ್!

ನೋಟಿಸ್ ಅಂಟಿಸಿದ ಎನ್‌ಐಎ : ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ತ್ರಿಶೂರ್ ಜಿಲ್ಲೆಯಲ್ಲಿರುವ ಫೈಸಲ್ ಫರೀದ್ ನಿವಾಸಕ್ಕೆ ವಾರೆಂಟ್ ಅಂಟಿಸಿದೆ.

ಕೊಚ್ಚಿಯಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯ ಫೈಸಲ್ ಫರೀದ್ ಬಂಧನಕ್ಕೆ ವಾರೆಂಟ್ ಹೊರಡಿಸಿದೆ. ಸದ್ಯ ಫೈಸಲ್ ದುಬೈನಲ್ಲಿ ಇದ್ದು, ಅಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಇದೆ.

English summary
Kerala high court dismissed the petition seek CBI probe on gold smuggling case. NIA court granted permission to the customs for interrogating Swapna Suresh and Sandeep Nair.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X