ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ 96 ವರ್ಷದ ಈ 'ಹುಡುಗಿ' ಪಡೆದದ್ದು 98 ಪರ್ಸೆಂಟ್

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 31: 96 ವರ್ಷದ ಈ 'ಹುಡುಗಿ' ಕೇರಳದ ಸಾಕ್ಷರತೆ ಪರೀಕ್ಷೆಯಲ್ಲಿ ತನ್ನ ವಯಸ್ಸಿಗಿಂತ ಎರಡು ಪರ್ಸೆಂಟ್, ಅಂದರೆ 98 ಪರ್ಸೆಂಟ್ ಪಡೆದುಕೊಂಡು, ಅದ್ಭುತ ಫಲಿತಾಂಶ ಗಳಿಸಿದ್ದಾರೆ. ಈ ಕಾರ್ಯಕ್ರಮದ ಅಡಿಯಲ್ಲಿ ಪರೀಕ್ಷೆ ತೆಗೆದುಕೊಂಡು ಅತ್ಯಂತ ಹಿರಿಯ ವ್ಯಕ್ತಿ ಇವರು.

ದೇಶದಲ್ಲೇ ಅತಿ ಹೆಚ್ಚು, 90 ಪರ್ಸೆಂಟ್ ಗೂ ಹೆಚ್ಚು ಸಾಕ್ಷರತಾ ಪ್ರಮಾಣ ಇರುವ ಕೇರಳದಲ್ಲಿ ಅನಕ್ಷರತೆ ಹೋಗಲಾಡಿಸಲು ಕೈಗೆತ್ತಿಕೊಂಡಿರುವ ಕಾರ್ಯಕ್ರಮ ಇದು. ಅಲಪ್ಪುಳದ ಕಾರ್ತಿಯಾನಿ ಅಮ್ಮ 'ಅಕ್ಷರಲಕ್ಷಮ್' ಸಾಕ್ಷರತೆ ಕಾರ್ಯಕ್ರಮದಡಿ ಕೈಗೊಂಡಿರುವ ಈ ಪರೀಕ್ಷೆಯಲ್ಲಿ 100ಕ್ಕೆ 98 ಅಂಕಗಳನ್ನು ಪಡೆದಿದ್ದಾರೆ.

ಕಾರ್ತಿಯಾನಿ ಅಮ್ಮ ಅವರ ಓದುವ, ಬರೆಯುವ ಹಾಗೂ ಪ್ರಾಥಮಿಕ ಗಣಿತ ಕೌಶಲವನ್ನು ಪರೀಕ್ಷೆ ಮಾಡಲಾಗಿದೆ. ಅಂದಾಜು 42,933 ಮಂದಿ ಈ ವರ್ಷ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಆ ಮೂಲಕ ಕೇರಳದಲ್ಲಿ 100ರಷ್ಟು ಸಾಕ್ಷರತೆ ಸಾಧಿಸುವ ಕಡೆ ಹೆಜ್ಜೆ ಹಾಕಲಾಗುತ್ತಿದೆ.

This 96 year old woman scored 98 percent in Kerala literacy exam

ಏಪ್ರಿಲ್ 18,1991ರಲ್ಲಿ ಕೇರಳವನ್ನು ಸಂಪೂರ್ಣ ಸಾಕ್ಷರ ರಾಜ್ಯ ಎಂದು ಘೋಷಿಸಲಾಯಿತು. ಯುನೆಸ್ಕೋದ ನಿಯಮದ ಅನುಸಾರ ಅದರರ್ಥ ಶೇ 90ರಷ್ಟು ಸಾಕ್ಷರತೆ ಹೊಂದಿದೆ. 2011ರ ಗಣತಿ ಪ್ರಕಾರ 18 ಲಕ್ಷ ಮಂದಿ ಅನಕ್ಷರಸ್ಥರಿದ್ದರು. ಆ ಕಾರಣಕ್ಕೆ ಅಕ್ಷರಲಕ್ಷಮ್ ಕಾರ್ಯಕ್ರಮವನ್ನು ಈ ವರ್ಷದ ಜನವರಿ 26ರಲ್ಲಿ ಆರಂಭಿಸಲಾಯಿತು.

ಮನುಷ್ಯತ್ವವನ್ನೇ ಗೆಲ್ಲಿಸಿದ ಈ ಇಬ್ಬರ ವಿಡಿಯೋ ಈಗ ವೈರಲ್ಮನುಷ್ಯತ್ವವನ್ನೇ ಗೆಲ್ಲಿಸಿದ ಈ ಇಬ್ಬರ ವಿಡಿಯೋ ಈಗ ವೈರಲ್

ಬುಡಕಟ್ಟು ಜನಾಂಗ, ಮೀನುಗಾರರು ಹಾಗೂ ಕೊಳೆಗೇರಿಯಲ್ಲಿ ವಾಸಿಸುವಂಥವರಲ್ಲಿ ಸಾಕ್ಷರತೆ ಹೆಚ್ಚಾಗಲಿ ಎಂಬುದೇ ಈ ಯೋಜನೆಯ ಉದ್ದೇಶವಾಗಿದೆ. "ಸಂಪೂರ್ಣವಾಗಿ ಅನಕ್ಷರತೆ ತೊಲಗಿಸಿ, ಸಾಕ್ಷರತೆ ಸಾಧಿಸಬೇಕು" ಎಂದು ಸಾಕ್ಷರತೆ ಯೋಜನೆ ನಿರ್ದೇಶಕಿ ಪಿ.ಎಸ್.ಶ್ರೀಕಲಾ ಕಾರ್ಯಕ್ರಮದ ಆರಂಭದ ವೇಳೆ ಹೇಳಿದ್ದರು.

2011ರ ಗಣತಿ ಪ್ರಕಾರ, ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಶೇ 94 ಇತ್ತು. 2001ರ ಗಣತಿ ಪ್ರಕಾರ ಆ ಪ್ರಮಾಣ ಶೇ 90.86 ಇತ್ತು.

English summary
A 96-year-old woman has cleared a test under Kerala's literacy programme with flying colours, scoring 98 per cent marks. She was the oldest candidate to take the test under the programme, launched to eliminate illiteracy in the state that boasts of over 90 per cent literacy, the highest in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X