ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವನಂತಪುರಂ: ಸಂವಿಧಾನ ವಿರೋಧಿ ಹೇಳಿಕೆ- ಸಚಿವ ಸಾಜಿ ಚೆರಿಯನ್ ರಾಜೀನಾಮೆ

|
Google Oneindia Kannada News

ತಿರುವನಂತಪುರಂ ಜುಲೈ 6: ಭಾರತ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದ ಸಚಿವ ಸಾಜಿ ಚೆರಿಯನ್ ರಾಜೀನಾಮೆ ನೀಡಿದ್ದಾರೆ. ಕೇರಳದ ಮೀನುಗಾರಿಕೆ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಾಜಿ ಚೆರಿಯನ್ ರಾಜ್ಯ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ವರದಿಗಳ ಪ್ರಕಾರ, ಸಿಪಿಎಂ ಹಿರಿಯ ನಾಯಕರ ನಿರ್ದೇಶನದಂತೆ ಇಂದು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಸಾಜಿ ಚೆರಿಯನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಕುತೂಹಲಕಾರಿ ಅಂದರೆ ಪಿಣರಾಯಿ ವಿಜಯನ್ ಸರ್ಕಾರಕ್ಕೆ ರಾಜೀನಾಮೆ ನೀಡಿದ ಮೊದಲ ಸಚಿವರು.

ವರದಿಗಳ ಪ್ರಕಾರ, ಸಾಜಿ ಚೆರಿಯನ್ ಅವರ ರಾಜೀನಾಮೆಯಲ್ಲಿ ಸಿಪಿಎಂ ರಾಷ್ಟ್ರೀಯ ನಾಯಕತ್ವದ ನಿಲುವು ನಿರ್ಣಾಯಕವಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ ಎಲ್‌ಡಿಎಫ್‌ನಲ್ಲಿರುವ ಎಲ್ಲಾ ಮಿತ್ರಪಕ್ಷಗಳೂ ಚೆರಿಯನ್‌ಗೆ ಬೆಂಬಲ ನೀಡಲು ನಿರಾಕರಿಸಿದವು ಎಂದು ತಿಳಿದುಬಂದಿದೆ.

 Thiruvananthapuram: Anti-constitution remark- Minister Saji Cherian resigns

ಅಧಿಕೃತವಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಜಿ ಚೆರಿಯನ್ ಅವರು ''ಭಾರತೀಯ ಸಂವಿಧಾನದ ಬಗ್ಗೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ ಬಗ್ಗೆ ಅಸಹ್ಯ ವ್ಯಕ್ತಪಡಿಸಿದರು. ಪತ್ತನಂತಿಟ್ಟದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ತಮ್ಮ ಭಾಷಣದಲ್ಲಿ ಸಂವಿಧಾನವನ್ನು ಅವಮಾನಿಸಿಲ್ಲ'' ಎಂದು ಪುನರುಚ್ಚರಿಸಿದರು.

ಸಾಜಿ ಚೆರಿಯನ್ ಅವರ ವಿವಾದಾತ್ಮಕ ಭಾಷಣದ ಕುರಿತು ಮಾತೃಭೂಮಿ ಡಾಟ್ ಕಾಮ್ ಮಂಗಳವಾರ ಸುದ್ದಿ ಪ್ರಕಟಿಸಿತು. ಇದರ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ಸಜಿ ಚೆರಿಯನ್ ಅವರನ್ನು ಟೀಕಿಸಲು ಮುಂದಾದವು. ಅವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

 Thiruvananthapuram: Anti-constitution remark- Minister Saji Cherian resigns

ಸ್ಥಳೀಯ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದ ದೃಶ್ಯಗಳಲ್ಲಿ, ಸಚಿವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ದೇಶದ ಸಂವಿಧಾನವು ಶೋಷಣೆಯನ್ನು ಮನ್ನಿಸುತ್ತದೆ ಎಂದು ಹೇಳುವುದನ್ನು ಕಾಣಬಹುದು ಮತ್ತು ಅದರಲ್ಲಿ ದೇಶದ ಜನರನ್ನು "ಲೂಟಿ" ಮಾಡಲು ಸಹಾಯ ಮಾಡುವ ರೀತಿಯಲ್ಲಿ ಬರೆಯಲಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ LDF ಕ್ಯಾಬಿನೆಟ್‌ನಿಂದ ಅವರನ್ನು ತಕ್ಷಣವೇ ತೆಗೆದುಹಾಕಲು ಕೋರಿದ ವಿರೋಧ ಪಕ್ಷಗಳು ಒತ್ತಾಯಿಸಿವೆ.

English summary
Kerala fisheries and cultural affairs minister Saji Cheriyan has resigned from the state cabinet amid the row over his Constitution of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X