ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕ್ರಾತಿ ಸಂಭ್ರಮದ ನಡುವೆ ಭಣಗುಡುತ್ತಿದೆ ಶಬರಿಮಲೆ

|
Google Oneindia Kannada News

ತಿರುವನಂತಪುರಂ, ಜನವರಿ 13: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಯಲ್ಲಿ ಅತ್ಯಂತ ಮಹತ್ವದ ಗಳಿಗೆಗೆ ಕ್ಷಣಗಣನೆ ಆರಂಭವಾಗಿದೆ. ಮಕರ ಸಂಕ್ರಾಂತಿ ದಿನವಾದ ಗುರುವಾರ ಪವಿತ್ರ ಮಕರ ಜ್ಯೋತಿ ದರ್ಶನ ಹಾಗೂ ಅಯ್ಯಪ್ಪ ಸ್ವಾಮಿಯ ವಿಶೇಷ ಪೂಜೆಯ ಸಂಪ್ರದಾಯಗಳನ್ನು ಕಾಣಲು ಭಕ್ತರು ಕಾತರದಿಂದ ಕಾದಿದ್ದರು. ಆದರೆ ಈ ಬಾರಿ ಅವರ ಉತ್ಸಾಹ ಮತ್ತು ಬಯಕೆಗಳನ್ನು ಕೋವಿಡ್ 19 ಕಿತ್ತುಕೊಂಡಿದೆ.

ಪ್ರತಿ ವರ್ಷ ಮಕರ ಸಂಕ್ರಮಣ ಸಂದರ್ಭದಲ್ಲಿ ಶಬರಿಮಲೆಯ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚುತ್ತಿತ್ತು. ಆದರೆ ಈ ಬಾರಿ ಶಬರಿಮಲೆ ಭಾಗಶಃ ಭಣಗುಡುತ್ತಿದೆ. ಬೆರಳೆಣಿಕೆಯಷ್ಟು ಭಕ್ತರು ಹಾಗೂ ಪೊಲೀಸರು ಮತ್ತು ದೇವಾಲಯದ ಸಿಬ್ಬಂದಿಯ ಸಮ್ಮುಖದಲ್ಲಿ ಪೂಜೆ ಹಾಗೂ ಇತರೆ ಆಚರಣೆಗಳು ನಡೆಯುತ್ತಿವೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ: ತಿರುವಾಭರಣಂ ಮೆರವಣಿಗೆ ಆರಂಭಶಬರಿಮಲೆ ಅಯ್ಯಪ್ಪ ಸ್ವಾಮಿ: ತಿರುವಾಭರಣಂ ಮೆರವಣಿಗೆ ಆರಂಭ

ಮಂಡಲಂ ದೇವಾಲಯದಿಂದ ಮೆರವಣಿಗೆ ಹೊರಟ ತಿರುವಾಭರಣಂ ಮೂರು ದಿನಗಳ ಬಳಿಕ ನಾಳೆ ಸಂಜೆ ಶಬರಿಮಲೆಯ ಪವಿತ್ರ ಸನ್ನಿಧಿಗೆ ತಲುಪಲಿದೆ. ಕೋವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿ ವಿಧಿ ವಿಧಾನಗಳು ಜರುಗುತ್ತಿವೆ. ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಹೊಂದಿರುವ ಭಕ್ತರಿಗೆ ಮಾತ್ರವೇ ಪ್ರವೇಶ ನೀಡಲಾಗುತ್ತಿದೆ.

 Thiruvabharanam Procession To Reach Sabarimala Tomorrow

ವಿಶೇಷ ಅಧಿಕಾರಿ ಅಜಿತ್ ಕುಮಾರ್ ಮೇಲ್ವಿಚಾರಣೆಯಲ್ಲಿ 15 ಸದಸ್ಯರ ದೇವಸ್ವಂ ತಂಡ ತಿರುವಾಭರಣಂ ಮೆರವಣಿಗೆ ನಿರ್ವಹಿಸುತ್ತಿದೆ. ಬುಧವಾರ ಈ ಮೆರವಣಿಗೆಯು ಬೆಳಿಗ್ಗೆ 4 ಗಂಟೆಗೆ ಅಯ್ರೂರ್ ದೇವಾಲಯದಿಂದ ಹೊರಟು ಎಡಪ್ಪವೂರ್ ದೇವಿ ದೇವಸ್ಥಾನ, ವಡಸ್ಸೆರಿಕರ ಪ್ರಯಾರ್ ಶ್ರೀ ಮಹಾವಿಷ್ಣು ದೇವಸ್ಥಾನ, ಮಡಮೊನ್ ರಿಶಿಕೆಶಾ ದೇವಸ್ಥಾನ ಮತ್ತು ರನ್ನಿ ಪೆರುನಾಡ್ ಶ್ರೀ ಧರ್ಮ ಸಸ್ಥಾ ದೇವಸ್ಥಾನಗಳನ್ನು ತಲುಪಲಿದೆ.

English summary
Thiruvabharanam to reach Sabarimala Thursday after three days procession.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X