• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಳ್ಳೆಸುದ್ದಿ: ಕೇರಳದಲ್ಲಿ ಹೀಗೊಂದು ಸೆಕ್ಯುಲರ್ ಮ್ಯಾರೇಜ್ ಮ್ಯಾಟ್ರಿಮೋನಿ

|
Google Oneindia Kannada News

ತಿರುವನಂತಪುರಂ,ಆಗಸ್ಟ್‌.4: ಧರ್ಮ ಮತ್ತು ನಿರ್ದಿಷ್ಟ ಜಾತಿ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳು ಪ್ರವರ್ಧಮಾನಕ್ಕೆ ಬರುತ್ತಿರುವ ಈ ಸಮಯದಲ್ಲಿ 'ಸೆಕ್ಯುಲರ್ ಮ್ಯಾರೇಜ್ ಮ್ಯಾಟ್ರಿಮೋನಿ' ಎಂಬ ಲಾಭರಹಿತ ಆನ್‌ಲೈನ್ ವೇದಿಕೆಯು ಕೇರಳದಲ್ಲಿ ಈಗ ಭಾರಿ ಸದ್ದು ಮಾಡುತ್ತಿದೆ.

ನಿಯೋಜಿತ ವಿವಾಹದ ಸಾಂಪ್ರದಾಯಿಕ ರೂಢಿಗಳನ್ನು ಉಲ್ಲಂಘಿಸಲು ಬಯಸುವ ಯುವಕರ ಪ್ರೊಫೈಲ್‌ಗಳು ಮತ್ತು ಪ್ರಸ್ತಾಪಗಳೊಂದಿಗೆ ಈಗ ಇದು ಸದ್ದು ಮಾಡುತ್ತಿದೆ. ಈ ಆನ್‌ಲೈನ್‌ ವೇದಿಕೆಯನ್ನು ಮನು ಮನುಷ್ಯಜಾತಿ ಎಂಬುವವರು ಪ್ರಾರಂಭಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಸಾಂಕ್ರಾಮಿಕ ರೋಗದ ನಂತರ ಇದು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಸೆಕ್ಯುಲರ್ ಮ್ಯಾರೇಜ್ ಮ್ಯಾಟ್ರಿಮೋನಿಯ ಫೇಸ್‌ಬುಕ್ ಪುಟವು 50,000 ಫಾಲೋವರ್‌ಗಳನ್ನು ದಾಟಿದೆ. ಪ್ರೊಫೈಲ್‌ಗಳನ್ನು ಪೋಸ್ಟ್ ಮಾಡುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

2014 ರಲ್ಲೇ ನಾನು ಪಿತೃಪ್ರಭುತ್ವ, ಜಾತಿ ಮತ್ತು ಧರ್ಮವನ್ನು ಒಡೆಯಲು ಹೋರಾಡಿದ ದಂಪತಿ ಮತ್ತು ವ್ಯಕ್ತಿಗಳ ಸ್ಫೂರ್ತಿದಾಯಕ ಕಥೆಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದ ಪುಟವನ್ನು ಪ್ರಾರಂಭಿಸಿದೆ. ಇದಕ್ಕೆ ಪ್ರತಿಕ್ರಿಯೆಯು ಅಗಾಧವಾಗಿತ್ತು. ವ್ಯವಸ್ಥೆಯಿಂದ ಹೊರಬರಲು ಮತ್ತು ಸಾಮಾಜಿಕ ರೂಢಿಗಳನ್ನು ಮೀರಿ ಬದುಕಲು ಪ್ರಯತ್ನಿಸುವ ಅನೇಕ ಜನರಿದ್ದಾರೆ ಎಂದು ನಾನು ಅರಿತುಕೊಂಡೆ. ನಂತರ, ಜನರು ನನಗೆ ಪ್ರೊಫೈಲ್ ಕಳುಹಿಸಲು ಪ್ರಾರಂಭಿಸಿದಾಗ, ನಾನು ಸೆಕ್ಯುಲರ್ ಮ್ಯಾರೇಜ್ ಮ್ಯಾಟ್ರಿಮೋನಿಯನ್ನು ಪ್ರಾರಂಭಿಸಿದೆ ಎಂದು 33 ವರ್ಷದ ಗಣಿತ ಶಿಕ್ಷಕ ಮನು ಮನುಷ್ಯಜಾತಿ ಹೇಳಿದರು.

ಇದರಿಂದ ಮನು ಸೈಬರ್ ದಾಳಿಗಳನ್ನು ಎದುರಿಸಿದರು. ಆದರೆ ಅವರ ಸತತ ಪ್ರಯತ್ನದಿಂದ ಉಳಿಸಿಕೊಂಡರು. ನಾನು ಕೆಲವು ವರ್ಷಗಳವರೆಗೆ ನಿಷ್ಕ್ರಿಯನಾಗಿದ್ದೆ. ಏಕೆಂದರೆ, ನಾನು ನನ್ನ ಅಧ್ಯಯನದ ಮೇಲೆ ಕೇಂದ್ರೀಕರಿಸಬೇಕಾಗಿತ್ತು. ಕೋವಿಡ್‌ ಸಾಂಕ್ರಾಮಿಕದ ನಂತರ ಏಕಾಏಕಿ ಪುಟವು ಹೆಚ್ಚು ಸಕ್ರಿಯವಾಯಿತು. ನಾನು ಅದನ್ನು ನವೀಕರಿಸಿದೆ. ಬಳಿಕ ಅನುಯಾಯಿಗಳ ಸಂಖ್ಯೆ ಏರಲು ಪ್ರಾರಂಭಿಸಿತು. ಬಳಿಕ ಸೈಟ್‌ ಪ್ರೊಫೈಲ್‌ಗಳಿಂದ ತುಂಬಿದೆ ಎಂದರು.

ಜಾತ್ಯತೀತ ದೃಷ್ಟಿಕೋನಗಳೊಂದಿಗೆ ಸಂಗಾತಿಗಳನ್ನು ಹುಡುಕುತ್ತಿರುವ ತಿರುವನಂತಪುರಂ ಮೂಲದ ಅಭಿನ್ ಜಿ. ಅಶೋಕ್, ಜನರು ಧಾರ್ಮಿಕ ಸಂಕೋಲೆಯಿಂದ ಹೊರಬರುವ ಸಮಯ ಬಂದಿದೆ. ಮದುವೆಗಳ ಸುತ್ತ ದೊಡ್ಡ ಸಾಮಾಜಿಕ ಒತ್ತಡವಿದೆ. ಹೀಗಾಗಿ ಅನೇಕ ದಂಪತಿಗಳು ಬಲವಂತವಾಗಿ ಬೇರೆಯಾಗುತ್ತಾರೆ. ನಾನು ಸಮಾನ ಮನಸ್ಕ ಸಂಗಾತಿಯನ್ನು ಹುಡುಕುತ್ತಿದ್ದೇನೆ. ನನ್ನ ಹೆತ್ತವರು ತುಂಬಾ ಬೆಂಬಲ ನೀಡುತ್ತಿದ್ದಾರೆ ಎಂದು 29 ವರ್ಷದ ಅಕೌಂಟೆಂಟ್ ಹೇಳುತ್ತಾರೆ. ಪುಟದಲ್ಲಿ ತಮ್ಮ ಪ್ರೊಫೈಲ್‌ಗಳನ್ನು ಪೋಸ್ಟ್ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಮನು ಹೇಳಿದರು.

 ಹಿಂದೆ ಅನಾಮಧೇಯವಾಗಿ ಪೋಸ್ಟ್

ಹಿಂದೆ ಅನಾಮಧೇಯವಾಗಿ ಪೋಸ್ಟ್

ನಾನು ಪ್ರತಿ ತಿಂಗಳು ಕನಿಷ್ಠ 10 ಮಹಿಳಾ ಪ್ರೊಫೈಲ್‌ಗಳನ್ನು ಉಪ್‌ಲೋಡ್‌ ಮಾಡುತ್ತೇನೆ ಎಂದು ಅವರು ಹೇಳುತ್ತಾರೆ. ಈ ಹಿಂದೆ ಜನರು ಅನಾಮಧೇಯವಾಗಿ ಪೋಸ್ಟ್ ಮಾಡುತ್ತಿದ್ದರು. ಆದರೆ ಈಗ ಮಹಿಳೆಯರು ಸೇರಿದಂತೆ ಯುವಕರು ಯಾವುದೇ ನಿರ್ಬಂಧಗಳಿಲ್ಲದೆ ಪ್ರೊಫೈಲ್ ಪೋಸ್ಟ್ ಮಾಡುತ್ತಿದ್ದಾರೆ. ಕುತೂಹಲಕಾರಿಯಾಗಿ ಅನೇಕ ಪೋಷಕರೂ ತಮ್ಮ ಮಕ್ಕಳ ಪ್ರೊಫೈಲ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದರು.

 ಜನರಿಗೆ ಸಹಾಯ ಮಾಡುವ ವೆಬ್‌ಸೈಟ್

ಜನರಿಗೆ ಸಹಾಯ ಮಾಡುವ ವೆಬ್‌ಸೈಟ್

ನಾನು ಇದುವರೆಗೆ ಮನು 30 ಜಾತ್ಯತೀತ ವಿವಾಹಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾನೆ. ಲಿಂಗವನ್ನು ಲೆಕ್ಕಿಸದೆ ಸಂಗಾತಿಯನ್ನು ಹುಡುಕಲು ಜನರಿಗೆ ಸಹಾಯ ಮಾಡುವ ವೆಬ್‌ಸೈಟ್ ಅನ್ನು ಪ್ರಾರಂಭಿಸಲು ನಾನು ಯೋಜಿಸುತ್ತಿದ್ದೇನೆ ಎಂದು ಅವರು ಹೇಳಿದರು.

 ಕುಟುಂಬಗಳಿಂದಲೂ ಸಹ ಬೆಂಬಲ

ಕುಟುಂಬಗಳಿಂದಲೂ ಸಹ ಬೆಂಬಲ

ತೂತುಕುಡಿಯ ಸೇಂಟ್ ಮೇರಿಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಕೊಲ್ಲಂ ಮೂಲದ ಕೀರ್ತನಾ ಸಂತೋಷ್ ಅವರು ಸೆಕ್ಯುಲರ್ ಮ್ಯಾರೇಜ್ ಮ್ಯಾಟ್ರಿಮೋನಿ ಮೂಲಕ ಚೇರ್ತಲಾ ಮೂಲದ ಕೆ ಬಿ ಶರತ್ ಚಂದ್ರನ್ ಅವರನ್ನು ವರಿಸಿದ್ದಾರೆ. 'ನಾವು ಕಳೆದ ಡಿಸೆಂಬರ್‌ನಲ್ಲಿ ಧಾರ್ಮಿಕೇತರ ವಿವಾಹ ಮಾಡಿಕೊಂಡಿದ್ದೇವೆ. ನಮ್ಮ ಕುಟುಂಬಗಳು ಸಹ ನಮಗೆ ಬೆಂಬಲ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ.

 ಧಾರ್ಮಿಕ ಹಿನ್ನೆಲೆಯ ವಿವಾಹ ಬೇಡವೆಂದು ನಿರ್ಧಾರ

ಧಾರ್ಮಿಕ ಹಿನ್ನೆಲೆಯ ವಿವಾಹ ಬೇಡವೆಂದು ನಿರ್ಧಾರ

ಮದುವೆಯ ವಿಷಯಕ್ಕೆ ಬಂದಾಗ ಆಧುನಿಕ ಕುಟುಂಬಗಳು ಸೇರಿದಂತೆ ಹೆಚ್ಚಿನ ಕುಟುಂಬಗಳು ಹಳೆಯ ರೂಢಿಗಳನ್ನು ಅನುಸರಿಸಲು ಬಯಸುತ್ತವೆ. ನಾನು ಧಾರ್ಮಿಕ ಹಿನ್ನೆಲೆಯ ವಿವಾಹ ಬೇಡ ಎಂದು ನಿರ್ಧರಿಸಿದ್ದೆ. ಅದೇ ಸಮಯದಲ್ಲಿ, ನಾನು ಕುಟುಂಬ ಆಧಾರಿತ ವ್ಯಕ್ತಿಯಾಗಿದ್ದೆ. ಆದ್ದರಿಂದ ಎರಡೂ ಕುಟುಂಬಗಳು ಮದುವೆಯೊಂದಿಗೆ ಸಂಪೂರ್ಣವಾಗಿ ಆರಾಮದಾಯಕವಾಗಿರಬೇಕು ಎಂದು ನಾನು ನಿರ್ದಿಷ್ಟವಾಗಿ ಹೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.

English summary
At a time when religion and caste-specific matrimony websites are booming, a non-profit online platform called 'Secular Marriage Matrimony' is now making a big splash in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X