ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸೋದ್ಯಮಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿದ ಕೇರಳ

|
Google Oneindia Kannada News

ತಿರುವನಂತಪುರಂ, ಆಗಸ್ಟ್ 19 : ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ತಂದು ಕೊಡುವ ಕ್ಷೇತ್ರ ಪ್ರವಾಸೋದ್ಯಮ. ಈ ವರ್ಷ ಕೋವಿಡ್ ಭೀತಿಯ ಕಾರಣದಿಂದಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಪಾರವಾದ ನಷ್ಟ ಉಂಟಾಗಿದೆ. ರಾಜ್ಯ ಸರ್ಕಾರ ಪ್ರವಾಸೋದ್ಯಮ ವಲಯಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

Recommended Video

Rahul Gandhi ಮಾತಿಗೆ ಸಮ್ಮತ ಸೂಚಿಸಿದ Priyanka Gandhi ವಾದ್ರಾ | Oneindia Kannada

ಕೇರಳದ ಪ್ರವಾಸೋದ್ಯಮ ಸಚಿವ ಕಡಂಪಲ್ಲಿ ಸುರೇಂದ್ರನ್ ಅವರು, "ಕೋವಿಡ್ ಪರಿಸ್ಥಿತಿಯ ಕಾರಣದಿಂದಾಗಿ ಪ್ರವಾಸೋದ್ಯಮಕ್ಕೆ ಸುಮಾರು 25,000 ಕೋಟಿ ನಷ್ಟ ಉಂಟಾಗಿದೆ" ಎಂದು ಹೇಳಿದ್ದಾರೆ.

ಕೊರೊನಾ ಭೀತಿಯಲ್ಲೂ ಪ್ರವಾಸೋದ್ಯಮ ಪುನರಾರಂಭಿಸಿದ ಗೋವಾಕೊರೊನಾ ಭೀತಿಯಲ್ಲೂ ಪ್ರವಾಸೋದ್ಯಮ ಪುನರಾರಂಭಿಸಿದ ಗೋವಾ

ಪ್ರವಾಸೋದ್ಯಮ ಕ್ಷೇತ್ರಕ್ಕೆ ನಷ್ಟ ಉಂಟಾಗಿರುವುದರಿಂದ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ಸಾವಿರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ, ಸರ್ಕಾರ ಪ್ರವಾಸೋದ್ಯಮ ಕ್ಷೇತ್ರಕ್ಕೆ 455 ಕೋಟಿ ರೂ. ವೆಚ್ಚದ ಪ್ಯಾಕೇಜ್ ಘೋಷಣೆ ಮಾಡಿದೆ.

ಜೋಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿ.ಟಿ.ರವಿ ಭರವಸೆಜೋಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿ.ಟಿ.ರವಿ ಭರವಸೆ

Special Package For Kerala Tourism Sector

ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನಃ ಆರಂಭಿಸಲು ಕೇರಳದ ಬ್ಯಾಂಕ್‌ಗಳು ಸಾಲವನ್ನು ನೀಡಲಿವೆ. ಇದರ ಬಡ್ಡಿ ದರ ಕೇವಲ ಶೇ 3ರಷ್ಟು ಆಗಿರುತ್ತದೆ. ಸಾಲ ಮರುಪಾವತಿ ಅವಧಿ 6 ತಿಂಗಳ ಬಳಿಕ ಆರಂಭವಾಗಲಿದೆ.

ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ; ಪ್ರಯಾಣಿಕರಿಗೆ ಸೂಚನೆ ಕೇರಳ-ಕರ್ನಾಟಕ ನಡುವೆ ಬಸ್ ಸಂಚಾರ; ಪ್ರಯಾಣಿಕರಿಗೆ ಸೂಚನೆ

ಕೊಟ್ಟಾಯಂನಲ್ಲಿ ಸುಮಾರು 2,300 ಬೋಟ್ ಹೌಸ್‌ಗಳಿವೆ. ಆದರೆ, ಕೆಲವು ತಿಂಗಳುಗಳಿಂದ ಪ್ರವಾಸಿಗರು ಇಲ್ಲದೇ ಇವುಗಳಿಗೆ ನಷ್ಟವಾಗಿದೆ. ಇದರಿಂದಾಗಿ ಸುಮಾರು 20 ಸಾವಿರ ಕುಟುಂಬಗಳಿಗೆ ಜೀವನಾಧಾರಕ್ಕೆ ತೊಂದರೆಯಾಗಿದೆ.

2019ರಲ್ಲಿ ಕೇರಳ ರಾಜ್ಯಕ್ಕೆ 1.96 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಇವರಲ್ಲಿ ದೇಶಿಯ ಮತ್ತು ವಿದೇಶಿ ಪ್ರವಾಸಿಗರು ಸೇರಿದ್ದರು. 2018ಕ್ಕೆ ಹೋಲಿಕೆ ಮಾಡಿದರೆ ಕಳೆದ ವರ್ಷ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶೇ 17.2ರಷ್ಟು ಹೆಚ್ಚು ಆದಾಯ ಬಂದಿತ್ತು.

ಕೇರಳದಲ್ಲಿ ಪ್ರಸ್ತುತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 47,898. ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರವಾಸಿಗರ ಭೇಟಿಯೂ ಕಡಿಮೆಯಾಗಿದೆ.

English summary
Kerala tourism sector has suffered a loss of around Rs 25,000 crore due to the COVID-19 pandemic. Government has announced a relief package for the sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X