ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್ ಧರಿಸಲು ಇನ್ನೇಕೆ ಚಿಂತೆ, ಬಂದಿವೆ ಮುಖ ಕಾಣುವ ಮಾಸ್ಕ್!

|
Google Oneindia Kannada News

ತಿರುವನಂತಪುರಂ, ಮೇ 25: ಸದ್ಯ ಕೊರೊನಾ ಅಟ್ಟಹಾಸಕ್ಕೆ ಅಂಕುಶ ಸಿಗುತ್ತಿಲ್ಲ. ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು, ವೈದ್ಯರು ಶತಪ್ರಯತ್ನ ನಡೆಸಿದ್ದಾರೆ.

Recommended Video

ಸ್ವದೇಶಕ್ಕೆ ವಾಪಸಾದ ಪೃಥ್ವಿರಾಜ್ ಮತ್ತು ಚಿತ್ರತಂಡ | Prutviraj | Oneindia Kannada

ಇನ್ನು, ವಿಶ್ವ ಆರೋಗ್ಯ ಸಂಸ್ಥೆ ಆದಿಯಾಗಿ ಅನೇಕ ವಿಜ್ಞಾನಿಗಳು ಕೊರೊನಾದ ಜೊತೆ ಹೊಂದಿಕೊಂಡು ಬಾಳಲು ಮನುಷ್ಯ ಕಲಿಯಬೇಕು ಎಂದು ಸಾರಿಯಾಗಿದೆ. ಹೀಗಾಗಿ ಕೊರೊನಾ ತಡೆಯಲು ಮುಖಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ದೊಡ್ಡ ಲಸಿಕೆ ಎನ್ನುವಂತಾಗಿದೆ ಪರಿಸ್ಥಿತಿ.

ಕೊರೊನಾ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 216 ಪ್ರಕರಣ ಕೊರೊನಾ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 216 ಪ್ರಕರಣ

ಕೊರೊನಾದ ಸಲುವಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಕೆಲವರು ಮಾಸ್ಕ್ ಧರಿಸುವುದಕ್ಕೆ ಇಷ್ಟಪಡುವುದಿಲ್ಲ. ಮಾರುಕಟ್ಟೆಯಲ್ಲಿ ಥರಾವರಿ ಮಾಸ್ಕ್ ಗಳು ಬರುತ್ತಿವೆ. ಮಾಸ್ಕ್‌ಗಳು ಮನುಷ್ಯ ಜೀವನದ ಅವಿಭಾಜ್ಯ ಅಂಗವಾಗಿ ಮಾರ್ಪಡುತ್ತಿವೆ. ಈ ಹಿನ್ನೆಲೆಯಲ್ಲಿ ಕೇರಳದ ಫೋಟೊಗ್ರಾಫರ್ ಒಬ್ಬರು ಜನರು ಮಾಸ್ಕ್ ಇಷ್ಟಪಡಲಿ ಎಂದು ವಿಶೇಷ ಪ್ರಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ. ಮುಂದೆ ಓದಿ...

ನಿಮ್ಮ ಮುಖವೇ ಮಾಸ್ಕ್ ಆಗುತ್ತೆ!

ನಿಮ್ಮ ಮುಖವೇ ಮಾಸ್ಕ್ ಆಗುತ್ತೆ!

ಕೇರಳದ ಕೊಟ್ಟಾಯಂನ ಎಡುಮರ್ನೂರ್‌ನಲ್ಲಿ ಡಿಜಿಟಲ್ ಫೋಟೊಗ್ರಾಫರ್ ಬಿನೇಶ್ ಜಿ ಪಾಲ್ ಎಂಬುವರು ವಿಶಿಷ್ಟ ಮುಖವಾಡವನ್ನು ಅಭಿವೃದ್ಧಿಪಡಿಸಿದ್ದಾರೆ. ಮಾಸ್ಕ್ ಧರಿಸಬೇಕು ಎನ್ನುವ ವ್ಯಕ್ತಿಯ ಫೋಟೊವನ್ನು ಮಾಸ್ಕ್‌ನಲ್ಲಿ (ಮುಚ್ಚಿದ ಭಾಗವಷ್ಟೇ) ಪ್ರಿಂಟ್ ಮಾಡಲಾಗುತ್ತದೆ. ಇದನ್ನು ಧರಿಸಿದಾಗ ಮಾಸ್ಕ್‌ನಿಂದ ವ್ಯಕ್ತಿ ಮುಖ ಮುಚ್ಚಿಕೊಂಡಿದ್ದಾರೆ ಎನಿಸುವುದಿಲ್ಲ.

ಮೊದಲು ಫೋಟೊ ನಂತರ ಮಾಸ್ಕ್

ಮೊದಲು ಫೋಟೊ ನಂತರ ಮಾಸ್ಕ್

"ಮೊದಲು ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಫೋಟೋ ತೆಗೆಯುತ್ತೇವೆ. ನಂತರ ನಾವು ಚಿತ್ರವನ್ನು ನಿರ್ದಿಷ್ಟ ಕಾಗದಕ್ಕೆ ವರ್ಗಾಯಿಸುತ್ತೇವೆ. ಆಗ ಚಿತ್ರವು ದೊಡ್ಡದಾಗುತ್ತದೆ. ಅದನ್ನು ಒಂದು ನಿರ್ದಿಷ್ಟ ಮಟ್ಟಕ್ಕೆ ಕತ್ತರಿಸಿ ಹೆಚ್ಚಿನ ಪ್ರಮಾಣದ ತಾಪಮಾನದೊಂದಿಗೆ, ಬಟ್ಟೆಯ ಮಾಸ್ಕ್‌ ಮೇಲೆ ಅದನ್ನು ಅಂಟಿಸುತ್ತೇವೆ'' ಎಂದು ಬಿನೇಶ್ ಜಿ ಪಾಲ್ ಹೊಸ ರೀತಿಯ ಮಾಸ್ಕ್ ತಯಾರಿಸುವ ಬಗ್ಗೆ ಮಾಧ್ಯಮಗಳಿಗೆ ಹೇಳುತ್ತಾರೆ.

20 ನಿಮಿಷಗಳಲ್ಲಿ ತಯಾರಿಸಬಹುದು

20 ನಿಮಿಷಗಳಲ್ಲಿ ತಯಾರಿಸಬಹುದು

''ಫೋಟೋ ಪ್ರಿಂಟ್ ಮಾಸ್ಕ್‌ನ್ನು 20 ನಿಮಿಷಗಳಲ್ಲಿ ತಯಾರಿಸಬಹುದು. ಒಂದು ಮಾಸ್ಕ್‌ ಗೆ 60 ರುಪಾಯಿ ದರ ವಿಧಿಸಲಾಗುತ್ತದೆ. ನಾನು ಕಳೆದ ಎರಡು ದಿನಗಳಲ್ಲಿ 1000 ಮುಖವಾಡಗಳನ್ನು ತಯಾರಿಸಿದ್ದೇನೆ. ಇನ್ನೂ 5000 ಕ್ಕೆ ಆರ್ಡರ್‌ಗಳನ್ನು ಪಡೆದುಕೊಂಡಿದ್ದೇನೆ. ಈ ರೀತಿಯ ಮಾಸ್ಕ್‌ಗಳನ್ನು ಯಾರೂ ಈ ಮೊದಲು ಮಾಡಿಲ್ಲ ಎಂದು ನಾನು ಭಾವಿಸುತ್ತೇನೆ'' ಎಂದು ಹೇಳುತ್ತಾರೆ ಹತ್ತು ವರ್ಷಗಳಿಂದ ವೃತ್ತಿಯಲ್ಲಿ ಇರುವ ಬಿನೇಶ್ ಜಿ ಪಾಲ್.

ಬೇರೆ ಬೇರೆಯವರ ಚಿತ್ರ ಮಾಸ್ಕ್‌ಗಳ ಮೇಲೆಕೆ?

ಬೇರೆ ಬೇರೆಯವರ ಚಿತ್ರ ಮಾಸ್ಕ್‌ಗಳ ಮೇಲೆಕೆ?

''ಮಿಕ್ಕಿ ಮೌಸ್, ಟಾಮ್ ಮತ್ತು ಜೆರ್ರಿ, ಡೋರಾ, ಚೊಟಾ ಭೀಮ್, ಟೆಡ್ಡಿ ಬಿರ್, ಚಲನಚಿತ್ರ ನಟರು ಮತ್ತು ಪ್ರಾಣಿಗಳ ಚಿತ್ರಗಳನ್ನು ಹೊತ್ತ ವಿವಿಧ ಮುಖವಾಡಗಳನ್ನು ನಾನು ನೋಡಿದ್ದೆ. ಆದರೆ, ಮಾಸ್ಕ್ ಧರಿಸುವ ವ್ಯಕ್ತಿಯ ಚಿತ್ರವೇ ಮಾಸ್ಕ್ ಆದರೆ ಹೇಗೆ ಎಂದು ವಿಚಾರಿಸಿ ನಾನು ಈ ಕೆಲಸ ಮಾಡಿದೆ'' ಎನ್ನುತ್ತಾರೆ ಬಿನೇಶ್ ಅವರು. ಬಿನೇಶ್ ಅವರ ಇ ಹೊಸ ಪ್ರಯತ್ನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.

English summary
Special Corona Mask Developed By A Digital Photographer In Kerala. these masks are look like man face (mask covered face). kottayam Photographer Binesh Pal Developed these types of masks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X