ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ ತಿಂಗಳಲ್ಲಿ ನಾಲ್ಕು ಗಂಟೆ ಶಬರಿಮಲೆ ದೇಗುಲ ಬಂದ್!

|
Google Oneindia Kannada News

ತಿರುವನಂತಪುರಂ, ನವೆಂಬರ್ 24: ಡಿಸೆಂಬರ್ ತಿಂಗಳಿನಲ್ಲಿ ನಾಲ್ಕು ಗಂಟೆಗಳ ಕಾಲ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲ ಬಂದ್ ಆಗಲಿವೆ ಎಂದು ದೇವಸ್ವ ಮಂಡಳಿ ಹೇಳಿದೆ.

ಈ ಕುರಿತಂತೆ ತಿರುವಾಂಕೂರು ದೇವಸ್ವಂ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಭಕ್ತಾದಿಗಳು ಸಹಕರಿಸಬೇಕಾಗಿ ಕೋರಿದ್ದಾರೆ. ಡಿಸೆಂಬರ್ 26ರಂದು ಸೂರ್ಯಗ್ರಹಣ ಇರುವುದರಿಂದ ನಾಲ್ಕು ಗಂಟೆಗಳ ಕಾಲ ದೇಗುಲದ ಬಾಗಿಲು ಬಂದ್ ಆಗಲಿದೆ ಎಂದು ಹೇಳಲಾಗಿದೆ.

Solar eclipse 2019: Keralas Sabarimala temple to be closed for four hours on Dec 26

ಆ ದಿನ ಬೆಳಗ್ಗೆ 7:30 ರಿಂದ 11:30 ಅವಧಿಯಲ್ಲಿ ಪೂಜೆ ಪುನಸ್ಕಾರ ನಡೆಯುವುದಿಲ್ಲ. ಡಿಸೆಂಬರ್ 26ರಂದು 8:06ರಿಂದ11:13 ರ ತನಕ ಸೂರ್ಯಗ್ರಹಣ ಇರಲಿದೆ. ಗ್ರಹಣ ವಿಮೋಚನೆ ನಂತರ ಪೂಜೆಗೆ ಅನುವು ಮಾಡಿಕೊಡಲಾಗುವುದು.

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ತೆರಳುವುದು ಹೇಗೆ?ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ತೆರಳುವುದು ಹೇಗೆ?

ಇದಕ್ಕೂ ಮುನ್ನ ಬೆಳಗ್ಗೆ ಸಾಂಪ್ರದಾಯಿಕ ಪೂಜೆ, ನೆಯ್ಯಾಭಿಷೇಕಂ ನೆರವೇರಲಿದೆ. ಗ್ರಹಣ ಬಳಿಕ ಪುಣ್ಯಃ ಮುಗಿಸಿ, ಸ್ವಚ್ಛತಾ ಕಾರ್ಯ ಮುಗಿಸಿದ ಬಳಿಕ ಎಲ್ಲರಿಗೂ ದರ್ಶನಕ್ಕೆ ವ್ಯವಸ್ಥೆ ಎಂದಿನಂತೆ ನಡೆಯಲಿದೆ ಎಂದು ಮುಖ್ಯ ತಂತ್ರಿಗಳಾದ ಮಹೆಶ್ ಮೋಹನಾರು ಹೇಳಿದ್ದಾರೆ.

ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ ಹೊರಟ ಶ್ವಾನಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಪಾದಯಾತ್ರೆ ಹೊರಟ ಶ್ವಾನ

ತಿರುವಾಂಕೂರು ಮಂಡಳಿ ಅಧೀನದಲ್ಲಿರುವ ಮಲಿಕಾಪ್ಪುರಂ ಹಾಗೂ ಪಂಬಾ ದೇಗುಲಗಳು ಕೂಡಾ ಈ ಸಂದರ್ಭದಲ್ಲಿ ಮುಚ್ಚಲಾಗುತ್ತದೆ. ನವೆಂಬರ್ 17ರಿಂದ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು,ಭಕ್ತಾದಿಗಳ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದೆ.

English summary
The Lord Ayyappa temple in Sabarimala, where the two-month-long annual pilgrim season is underway will remain closed for four hours on December 26 due to solar eclipse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X