ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಆರೋಪಿಗಳಿಂದ 1.04 ಕೋಟಿ ಮೌಲ್ಯದ ಅಕ್ರಮ ಚಿನ್ನ ವಶ

|
Google Oneindia Kannada News

ತಿರುವನಂತಪುರಂ, ನವೆಂಬರ್ 18: ತಮಿಳುನಾಡಿನ ಚೆನ್ನೈನಿಂದ ಕೇರಳದ ಆಲೆಪ್ಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರಿಂದ 1.989 ಕಿಲೋಗ್ರಾಂಗಳಷ್ಟು ಕಳ್ಳಸಾಗಣೆ ಮಾಡುತ್ತಿದ್ದ ಚಿನ್ನದ ಸರಳು ಹಾಗೂ ಕತ್ತರಿಸಿದ ತುಂಡುಗಳನ್ನು ಕಸ್ಟಮ್ಸ್ ಪ್ರಿವೆಂಟಿವ್ ಯುನಿಟ್ ಮಂಗಳವಾರ ವಶಪಡಿಸಿಕೊಂಡಿದೆ.

ಚೆನ್ನೈನಿಂದ ಕೇರಳದ ಆಲೆಪ್ಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ರೈಲು ಪ್ರಯಾಣಿಕರಿಂದ ಕಸ್ಟಮ್ಸ್ ಅಧಿಕಾರಿಗಳು ವಶಪಡಸಿಕೊಂಡಿರುವ ಚಿನ್ನದ ಮೌಲ್ಯವು ಸುಮಾರು 1.04 ಕೋಟಿ ರುಪಾಯಿಗಳಷ್ಟಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.

ಕೊಚ್ಚಿಯ ಕಸ್ಟಮ್ಸ್ (ಕಳ್ಳಸಾಗಣೆ ತಡೆಗಟ್ಟುವ) ಆಯುಕ್ತರ ಪ್ರಕಾರ, ಅಕ್ರಮ ಚಿನ್ನವನ್ನು ಇಬ್ಬರು ಆರೋಪಿಗಳು ತಮ್ಮ ಸೊಂಟದ ಪಟ್ಟಿಗಳಲ್ಲಿ ರಹಸ್ಯವಾಗಿ ಮರೆಮಾಡಿಕೊಂಡು ಸಾಗಿಸುತ್ತಿದ್ದರು ಎನ್ನಲಾಗಿದೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Smuggled Gold Worth Rs 1.04 Cr Seized From Two Train Passengers

ಇದೇ ವಾರದ ಆರಂಭದಲ್ಲಿ ಈ ರೀತಿಯ ಘಟನೆಯೊಂದು ಕೇರಳದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬಳಿಯಿದ್ದ 674 ಗ್ರಾಂ ಚಿನ್ನದ ಸಂಯುಕ್ತದ ನಾಲ್ಕು ಕ್ಯಾಪ್ಸುಲ್‌ಗಳನ್ನು ವಾಯು ಗುಪ್ತಚರ ಘಟಕ ಪತ್ತೆ ಮಾಡಿತ್ತು.

English summary
The value of the gold seized by the customs officials from the two train passengers was worth about Rs 1.04 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X