• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ರಿಟನ್ ನಿಂದ ಕೇರಳಕ್ಕೆ ಮರಳಿದ್ದ 6 ಜನರಲ್ಲಿ ರೂಪಾಂತರ ಸೋಂಕು ಪತ್ತೆ

|

ತಿರುವನಂತಪುರಂ, ಜನವರಿ 04: ಈಚೆಗೆ ಬ್ರಿಟನ್ ನಿಂದ ಕೇರಳಕ್ಕೆ ಮರಳಿದ್ದ ಆರು ಮಂದಿಯಲ್ಲಿ ಹೊಸ ರೂಪಾಂತರದ ಕೊರೊನಾ ಸೋಂಕು ಪತ್ತೆಯಾಗಿರುವುದಾಗಿ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಮಾಹಿತಿ ನೀಡಿದ್ದಾರೆ.

"ಬ್ರಿಟನ್ ನಿಂದ ಕೇರಳಕ್ಕೆ ಹಿಂದಿರುಗಿದ್ದ ಆರು ಮಂದಿಯಲ್ಲಿ ಕೊರೊನಾ ರೂಪಾಂತರ ವೈರಸ್ ಪತ್ತೆಯಾಗಿದೆ. ಅವರನ್ನು ಐಸೊಲೇಷನ್ ನಲ್ಲಿಡಲಾಗಿದೆ. ಬ್ರಿಟನ್ ನಿಂದ ಈಚೆಗೆ ಮರಳಿದ್ದವರ ಪರೀಕ್ಷೆ ನಡೆಸಿ, ಮಾದರಿಗಳನ್ನು ಪುಣೆಯ ಎನ್ ಐವಿಗೆ ಕಳುಹಿಸಲಾಗಿತ್ತು. ಫಲಿತಾಂಶ ಬಂದಿದ್ದು, ಆರು ಮಂದಿಗೆ ಸೋಂಕು ತಗುಲಿದೆ" ಎಂದು ತಿಳಿಸಿದರು.

ಬ್ರಿಟನ್‌ನಲ್ಲಿ ಹೊಸ ಕೊರೊನಾ ಸೋಂಕು ಹೆಚ್ಚಳ: ಕಠಿಣ ಲಾಕ್‌ಡೌನ್ ಸಾಧ್ಯತೆಯಿದೆ ಎಂದ ಪ್ರಧಾನಿ

ಇನ್ನಷ್ಟು ಜನರಿಗೆ ರೂಪಾಂತರ ಸೋಂಕು ತಗುಲಿರುವ ಶಂಕೆ ಇದೆ. ಹೀಗಾಗಿ ಹೆಚ್ಚು ಲ್ಯಾಬ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಆರು ಮಂದಿಯಲ್ಲಿ ಅಲಪ್ಪುಳದಿಂದ ಇಬ್ಬರು ಹಾಗೂ ಕೋಯಿಕ್ಕೋಡ್ ನಿಂದ ಇಬ್ಬರಲ್ಲಿ ಸೋಂಕು ಕಂಡುಬಂದಿದೆ. ಕೊಟ್ಟಾಯಂ ಹಾಗೂ ಕಣ್ಣೂರಿನಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.

ಒಂಬತ್ತು ತಿಂಗಳ ನಂತರ ಕೇರಳದಲ್ಲಿ ಸೋಮವಾರದಿಂದ ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳು ಪುನರಾರಂಭಗೊಂಡಿದ್ದವು. ರಾಜ್ಯದಲ್ಲಿನ 1350 ಉನ್ನತ ಶಿಕ್ಷಣ ಸಂಸ್ಥೆಗಳು ತೆರೆದಿದ್ದವು. ಆದರೆ ರಾಜ್ಯದಲ್ಲಿ ಕೊರೊನಾ ರೂಪಾಂತರ ಸೋಂಕು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಕೇರಳದಲ್ಲಿ ಆರು ಪ್ರಕರಣಗಳ ಪತ್ತೆ ನಂತರ ಭಾರತದಲ್ಲಿ ಕೊರೊನಾ ರೂಪಾಂತರ ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ.

ಕೇರಳದಲ್ಲಿ ಜ.4ರ ವರದಿಯಂತೆ 3,021 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 7,78,873ಕ್ಕೆ ಏರಿದೆ. ಸೋಮವಾರ 19 ಮಂದಿ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಇದುವರೆಗೂ 3160 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

English summary
Six UK returnees from Kerala have tested positive for the new strain of the virus, Health Minister K K Shailaja said on Monday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X