ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಸ್ಟರ್ ಅಭಯಾ ಸಾವು ಪ್ರಕರಣ: ಪಾದ್ರಿ ಥಾಮಸ್, ಸೆಫಿಗೆ ಜೀವಾವಧಿ ಶಿಕ್ಷೆ

|
Google Oneindia Kannada News

ತಿರುವನಂತಪುರಂ, ಡಿ. 23: ಸಿಸ್ಟರ್ ಅಭಯಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುವನಂತಪುರಂನ ಸಿಬಿಐ ವಿಶೇಷ ನ್ಯಾಯಾಲಯವು ಡಿಸೆಂಬರ್ 23ರಂದು ತಪ್ಪಿತಸ್ಥರಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

ಪ್ರಮುಖ ಆರೋಪಿಗಳಾದ ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರೂ ತಪ್ಪಿತಸ್ಥರು ಎಂದು ಮಂಗಳವಾರದಂದು ತೀರ್ಪು ನೀಡಿದ್ದ ನ್ಯಾಯಾಲಯವು ಇಂದು ಇಬ್ಬರಿಗೂ ಜೀವಾವಧಿ ಶಿಕ್ಷೆ ವಿಧಿಸಿದೆ.
ಫಾದರ್ ಥಾಮಸ್, ಸಿಸ್ಟರ್ ಸೆಫಿ ಇಬ್ಬರಿಗೂ ಐಪಿಸಿ ಸೆಕ್ಷನ್ 302 ಅಡಿಯಲ್ಲಿ 5 ಲಕ್ಷ ರು ವಿಧಿಸಲಾಗಿದೆ ಹಾಗೂ ಸೆಕ್ಷನ್ 449 ಐಪಿಸಿಯಡಿಯಲ್ಲಿ ಹೆಚ್ಚುವರಿ 1 ಲಕ್ಷ ರು ದಂಡ ಹಾಕಲಾಗಿದೆ.

ಐಪಿಸಿ ಸೆಕ್ಷನ್ 201 ಯಡಿಯಲ್ಲಿ 7 ವರ್ಷ ಶಿಕ್ಷೆ, 50,000ರು ದಂಡ ಹಾಕಲಾಗಿದೆ. ಪಾದ್ರಿ ಕೊಟ್ಟೂರ್ ಅವರು ಕ್ಯಾನ್ಸರ್ ಪೀಡಿತರಾಗಿದ್ದು, 71ವರ್ಷವಾಗಿದೆ. ಸೆಫಿ ಅವರು ವಯೋವೃದ್ಧ ತಂದೆ ತಾಯಿ ನೋಡಿಕೊಳ್ಳಬೇಕ, ಹೀಗಾಗಿ ಜೀವಾವಧಿ ಶಿಕ್ಷೆ ವಿಧಿಸಬೇಡಿ ಎಂದು ಅವರ ಪರ ವಕೀಲರು ಮಾಡಿದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.

Sister Abhaya case: CBI Court sentences priest, nun to life imprisonment, imposes fine of Rs 5 lakh each

ಸಿಸ್ಟರ್ ಅಭಯಾ ಪಾಲಕರಾಗಿ ಕರ್ತವ್ಯ ನಿರ್ವಹಿಸಬೇಕಿದ್ದ ಪಾದ್ರಿ ಥಾಮಸ್ ಹಾಗೂ ಸೆಫಿ ಅವರು ಐಪಿಸಿ ಸೆಕ್ಷನ್ 302, 449, 201 ಅಡಿಯಲ್ಲಿ ಎದುರಿಸುತ್ತಿರುವ ದೋಷಾರೋಪಣ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣದಲ್ಲಿ ಬದಲಾವಣೆ ಸಾಧ್ಯವಿಲ್ಲ ಎಂದು ಜಡ್ಜ್ ಕೆ ಸನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಏನಿದು ಪ್ರಕರಣ?:
1992ರ ಮಾರ್ಚ್ 27ರಂದು ಕೊಟ್ಟಾಯಂ ಪಯಸ್ ಟೆನ್ತ್ ಕಾನ್ವೆಂಟ್‌ನ ಬಾವಿಯಲ್ಲಿ 19 ವರ್ಷ ವಯಸ್ಸಿನ ಸಿಸ್ಟರ್ ಅಭಯಾ ಶವ ಪತ್ತೆಯಾಗಿತ್ತು. ಇದು ಆತ್ಮಹತ್ಯೆ ಪ್ರಕರಣ ಎಂದು ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು.

Sister Abhaya case: CBI Court sentences priest, nun to life imprisonment, imposes fine of Rs 5 lakh each

ಆದರೆ ಅಂದಿನ ಕೊಟ್ಟಾಯಂ ನಗರಸಭೆ ಚೇರ್ಮನ್ ಪಿಸಿ ಚೆರಿಯನ್ ಮಡುಕ್ಕನಿ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಜೋಮೋನ್ ಪುತ್ತನ್ ಪುರಕಲ್ ಅವರು ಈ ಪ್ರಕರಣವನ್ನು ಕೋರ್ಟಿಗೆ ಮನವಿ ಮಾಡಿದ್ದರು. ನಂತರ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿತ್ತು. ಆದರೆ ಕ್ರೈಂ ಬ್ರಾಂಚ್‌ ಪೊಲೀಸರು ಕೂಡಾ ಅಭಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಷರಾ ಹಾಕಿದರು. 1993 ಮಾರ್ಚ್ 29ಕ್ಕೆ ತನಿಖೆಯನ್ನು ಸಿಬಿಐ ವಹಿಸಿಕೊಂಡಿತು.

ಫಾದರ್ ಥಾಮಸ್ ಎಂ.ಕೊಟ್ಟೂರ್( ಆರೋಪಿ 1), ಫಾದರ್ ಜೋಸ್ ಪೂತೃಕ್ಕಯಿಲ್, ಸಿಸ್ಟರ್ ಸೆಫಿ ಬಂಧಿಸಲಾಯಿತು. ಆದರೆ, ಎಲ್ಲರಿಗೂ ಜಾಮೀನು ಸಿಕ್ಕಿತ್ತು. 2018ರಲ್ಲಿ ಫಾದರ್ ಜೋಸ್ ಪೂತೃಕ್ಕಯಿಲ್ ಪ್ರಕರಣದಿಂದ ಖುಲಾಸೆಗೊಂಡಿದ್ದರು.

Sister Abhaya case: CBI Court sentences priest, nun to life imprisonment, imposes fine of Rs 5 lakh each

1992ರ ಮಾರ್ಚ್ 27ರಂದು ಕಾನ್ವೆಂಟ್ ರೂಮೊಂದರಲ್ಲಿ ಸಿಸ್ಟರ್ ಸೆಫಿ ಹಾಗೂ ಥಾಮಸ್ ಎಂ.ಕೊಟ್ಟೂರ್ ಇಬ್ಬರು ಅಪ್ಪಿಕೊಂಡು ಮುದ್ದಾಡುತ್ತಿದ್ದನ್ನು ಸಿಸ್ಟರ್ ಅಭಯಾ ಅಕಸ್ಮಾತ್ ನೋಡಿದ್ದಾರೆ. ನಂತರ ಕೊಟ್ಟೂರ್, ಜೋಸ್ ಹಾಗೂ ಸೆಫಿ ಸೇರಿಕೊಂಡು ಅಭಯಾರನ್ನು ಕೊಚ್ಚಿ ಕೊಂದು, ಬಾವಿಗೆ ಎಸೆಯಲಾಗಿತ್ತು ಎಂದು ಸಿಬಿಐ ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿತ್ತು.

English summary
After 28 Years of Sister Abhaya’s Murder CBI Special Court sentences priest, nun to life imprisonment, imposes fine of Rs 5 lakh each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X