ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೆ ಮುನ್ನವೇ ಬಿಜೆಪಿಗೆ ಶಾಕ್: ಅಭ್ಯರ್ಥಿ ಜೈಲುಪಾಲು

|
Google Oneindia Kannada News

ತಿರುವನಂತಪುರಂ, ಮಾರ್ಚ್ 29: ಲೋಕಸಭೆ ಚುನಾವಣೆಗೆ ಮುನ್ನವೇ ಕೇರಳದಲ್ಲಿ ಬಿಜೆಪಿಗೆ ಭಾರಿ ಆಘಾತ ಎದುರಾಗಿದೆ. ಪಕ್ಷದ ಲೋಕಸಭೆ ಚುನಾವಣೆ ಅಭ್ಯರ್ಥಿ ಜೈಲು ಪಾಲಾಗಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸಲು ಯತ್ನಿಸಿದ ಮಹಿಳಾ ಭಕ್ತರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕೋಯಿಕ್ಕೋಡ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಬಾಬು ಅವರನ್ನು ಜೈಲಿಗೆ ಕಳುಹಿಸಲಾಗಿದೆ.

ಶಬರಿಮಲೆ ವಿವಾದ ರಾಜಕೀಯ ಬಳಕೆಗಿಲ್ಲ: ಚುನಾವಣಾ ಆಯೋಗಶಬರಿಮಲೆ ವಿವಾದ ರಾಜಕೀಯ ಬಳಕೆಗಿಲ್ಲ: ಚುನಾವಣಾ ಆಯೋಗ

ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ರಣ್ಣಿಯ ನ್ಯಾಯಾಲಯವೊಂದು ಪ್ರಕಾಶ್ ಬಾಬು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

 shock to bjp kerala lok sabha elections kozhikode prakash babu sent jail sabarimala woman devotee attack

ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶಿಸಬಹುದು ಎಂದು ಸೆ. 28ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಜಾರಿಗೊಳಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಮಹಿಳೆಯರಲ್ಲಿ ಒಬ್ಬರ ಮೇಲೆ ಹಲ್ಲೆ ನಡೆದಿತ್ತು. ಈ ಸಂಬಂಧ ಪ್ರಕಾಶ್ ಬಾಬು ಅವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಬರಿಮಲೆ ತೀರ್ಪು: ಸುಪ್ರೀಂ ನಿಲುವಿಗೆ ಬದ್ಧ ಎಂದ ಅಯ್ಯಪ್ಪ ದೇಗುಲ ಶಬರಿಮಲೆ ತೀರ್ಪು: ಸುಪ್ರೀಂ ನಿಲುವಿಗೆ ಬದ್ಧ ಎಂದ ಅಯ್ಯಪ್ಪ ದೇಗುಲ

ಪ್ರಕಾಶ್ ಬಾಬು ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ಅವರನ್ನು ಕೊತ್ತರಕ್ಕರಾ ಉಪ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಅವರು ಕೂಡಲೇ ಮೇಲಿನ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

ಹಿಂದೂಗಳ ಭಾವನೆ ಪರಿಗಣಿಸದ ಕೋರ್ಟ್: ಆರೆಸ್ಸೆಸ್ ಆಕ್ರೋಶ ಹಿಂದೂಗಳ ಭಾವನೆ ಪರಿಗಣಿಸದ ಕೋರ್ಟ್: ಆರೆಸ್ಸೆಸ್ ಆಕ್ರೋಶ

ಬಾಬು ಅವರು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೇರಳದಲ್ಲಿ ಏಪ್ರಿಲ್ 23ರಂದು ಮತದಾನ ನಡೆಯಲಿದೆ.

English summary
Lok Sabha elections 2019: BJP candidate from Kozhikode Prakash Babu has sent to jail in a case of attacking a woman devotee in Sabarimala Temple last November.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X