ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಕಾಂಗ್ರೆಸ್ ಮುಖಂಡ, ಹಾಲಿ ಶಾಸಕ ನಿಧನ

|
Google Oneindia Kannada News

ತಿರುವನಂತಪುರಂ, ಸೆ. 27: ಕೇರಳದ ಹಿರಿಯ ಕಾಂಗ್ರೆಸ್ ಮುಖಂಡ, ಹಾಲಿ ಶಾಸಕ ಸಿ.ಎಫ್ ಥಾಮಸ್ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಚಂಗನಚ್ಚೇರಿ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಥಾಮಸ್ ಅವರು ಕೆಲ ಕಾಲದಿಂದ ವಯೋಸಹಜ ಅನಾರೋಗ್ಯ ಪೀಡಿತರಾಗಿದ್ದರು. ಮೃತರು ಪತ್ನಿ ಹಾಗೂ ಮೂವರು ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕಳೆದ ಕೆಲ ದಿನಗಳಿಂದ ತಿರುವಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತಕ್ಕೊಳಗಾಗಿ ಭಾನುವಾರ ಬೆಳಗ್ಗೆ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

1980ರಿಂದ ಕೊಟ್ಟಾಯಂ ಜಿಲ್ಲೆಯ ಚಂಗನಚ್ಚೇರಿ ವಿಧಾನಸಭಾ ಕ್ಷೇತ್ರವನ್ನು ಸತತವಾಗಿ ಪ್ರತಿನಿಧಿಸುತ್ತಿದ್ದರು. 2001 ರಿಂದ 2006 ಅವಧಿಯಲ್ಲಿ ಕಾಂಗ್ರೆಸ್ ನೇತೃತ್ವದ ಯು ಡಿಎಫ್ ಸರ್ಕಾರದಲ್ಲಿ ಥಾಮಸ್ ಅವರು ಗ್ರಾಮೀಣಾಭಿವೃದ್ಧಿ, ಖಾದಿ, ಗುಡಿ ಕೈಗಾರಿಕೆ ಖಾತೆ ಸಚಿವರಾಗಿದ್ದರು. ಕೇರಳ ಕಾಂಗ್ರೆಸ್(ಎಂ) ಕೆಎಂ ಮಣಿ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು.

Senior Kerala Congress leader CF Thomas passes away

ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ಮಣಿ ನಿಧನರಾದ ಬಳಿಕ ಕೇರಳ ಕಾಂಗ್ರೆಸ್ (ಎಂ) ನಲ್ಲಿ ಉಂಟಾದ ಬಂಡಾಯದಲ್ಲಿ ಪಿಜೆ ಜೋಸೆಫ್ ಬಣದಲ್ಲಿ ಥಾಮಸ್ ಗುರುತಿಸಿಕೊಂಡಿದ್ದರು.

Recommended Video

ಈವತ್ತಿನ ಪ್ರತಿಭಟನೆಗೆ ಕಾರಣವಾಯಿತಾ BJP government !! | Oneindia Kannada

ವಿದ್ಯಾರ್ಥಿ ಜೀವನದಿಂದಲೂ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಥಾಮಸ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸೇರಿ ಚಂಗನಚ್ಚೆರಿ ಜಿಲ್ಲಾ ಉಪಾಧ್ಯಕ್ಷರಾದರು. ಕೆಲ ಕಾಲ ಚಂಗನಚ್ಚೇರಿ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರು. ಕೇರಳ ಕಾಂಗ್ರೆಸ್ ಸ್ಥಾಪನೆಯಾದ ಬಳಿಕ ಆ ಪಕ್ಷ ಸೇರಿ ಉನ್ನತ ಸ್ಥಾನ ಪಡೆದಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿ, ಚೇರ್ಮನ್ ಆಗಿದ್ದರು.

English summary
Senior Kerala Congress leader and Changanassery MLA C F Thomas died at a private hospital in Thiruvalla on Sunday, party sources said here. He was 81. He had been undergoing treatment for some ailments, they said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X