ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಪ್ರವೇಶಿಸಲು ಹೋದ 'ಕಿಸ್ ಆಫ್ ಲವ್' ಫಾತಿಮಾ ರೆಹನಾ ಹಿನ್ನಲೆ

|
Google Oneindia Kannada News

ಪ್ರಶಾಂತವಾದ ಶಬರಿಮಲೆ ವಾತಾವರಣ ಕಳೆದ ಎರಡು ದಿನಗಳಿಂದ ಅಕ್ಷರಸ: ಕದಡಿದೆ. ಶತಮಾನಗಳ ಇತಿಹಾಸವನ್ನು ಹೊಂದಿರುವ, ಹಿಂದೂಗಳ ಪುರಾಣಪ್ರಸಿದ್ದ ದೇವಾಲಯದ ಸಂಪ್ರದಾಯವನ್ನು ಉದ್ದೇಶಪೂರ್ವಕವಾಗಿ ಮುರಿಯಲೇ ಬೇಕು ಎಂದು ಹೊರಟವರ ಹಠ, ಅಯ್ಯಪ್ಪ ಭಕ್ತರ ಮುಂದೆ ನಡೆಯಲಿಲ್ಲ.

ತುಲಾ ಮಾಸದ ಪೂಜೆಗಾಗಿ ಬುಧವಾರ (ಅ 17) ಸಂಜೆ ಶಬರಿಮಲೆ ದೇವಾಲಯದ ಗರ್ಭಗುಡಿಯನ್ನು ತೆರೆಯಲಾಗಿತ್ತು. ಮರುದಿನ ಹರಿವಾಸರಂ ಪೂಜೆಯ ನಂತರ, ಭಕ್ತರಿಗೆ ದೇವಾಲಯ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿತ್ತು. ಆರು ದಿನಗಳ ಪೂಜೆಯ ನಂತರ (ಅ 22) ದೇವಾಲಯವನ್ನು ಮತ್ತೆ ಮುಚ್ಚಲಾಗುವುದು. ಮೊದಲ ದಿನ ಹಲವು ಮಹಿಳಾ ಭಕ್ತರು ದೇವಾಲಯ ಪ್ರವೇಶಿಸಲು ಪ್ರಯತ್ನಿಸಿದರೂ ಅದು ಕೈಗೂಡಿರಲಿಲ್ಲ.

ಪುಣೆ: ಮೋದಿ ಬೆಂಗಾವಲು ಪಡೆಗೆ ಮುತ್ತಿಗೆ ಹಾಕಲು ಹೊರಟ ತೃಪ್ತಿ ದೇಸಾಯಿ ಬಂಧನಪುಣೆ: ಮೋದಿ ಬೆಂಗಾವಲು ಪಡೆಗೆ ಮುತ್ತಿಗೆ ಹಾಕಲು ಹೊರಟ ತೃಪ್ತಿ ದೇಸಾಯಿ ಬಂಧನ

ಆದರೆ, ಮಹಿಳೆ ದೇವಾಲಯ ಪ್ರವೇಶಿಸುವ ವಿಚಾರದಲ್ಲಿ, ವಿಜಯದಶಮಿಯ ದಿನ ಶಬರಿಮಲೆ ಸುತ್ತಮುತ್ತ ನಡೆದ ಘಟನೆ ಹಿಂದೂಗಳು ನಂಬಿಕೊಂಡು ಬರುತ್ತಿರುವ ಸಂಪ್ರದಾಯಕ್ಕೆ ಸೆಡ್ಡು ಹೊಡೆಯುವಂತಿತ್ತು. ದೇವಾಲಯ ಪ್ರವೇಶಿಸಲು ಹೊರಟಿದ್ದ ಮೂವರು ಮಹಿಳೆಯರು ಅನ್ಯಕೋಮಿನವರು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ.

ಹೈದರಾಬಾದ್ ಮೂಲದ ಪತ್ರಕರ್ತೆ ಕವಿತಾ ಕೋಶಿ ಜಕ್ಕಲ್, ಮಹಿಳಾ ಹೋರಾಟಗಾರರಾದ ಕೇರಳದ ಫಾತಿಮಾ ರೆಹಾನ ಸುಲೇಮಾನ್ ಮತ್ತು ಮೇರಿ ಸ್ವೀಟಿ, ಈ ಮೂವರು ದೇವಾಲಯವನ್ನು ಪ್ರವೇಶಿಸಲು ಹೊರಟಿದ್ದರು. ಇನ್ನೇನು ಇವರು ಆವರಣಕ್ಕೆ ಎಂಟ್ರಿಯಾದರು ಎನ್ನುವಷ್ಟರಲ್ಲಿ ಅಯ್ಯಪ್ಪ ಭಕ್ತರ ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ, ಬೆಟ್ಟದಿಂದ ಕೆಳಗಿಳಿದರು.

ಮಹಿಳಾ ಸಮಾನತೆ ಒಪ್ಪಿಕೊಳ್ಳಬೇಕಾದ ವಿಚಾರವಾದರೂ, ಈ ಮೂವರು ನಿಜವಾದ ಅಯ್ಯಪ್ಪ ಭಕ್ತರೋ ಅಥವಾ ಶಬರಿಮಲೆ ದೇವಾಲಯದ ಸಂಪ್ರದಾಯವನ್ನು ಅಣಕವಾಡಲು ಹೊರಟಿದ್ದಾರೋ ಎನ್ನುವುದೇ ಇಲ್ಲಿ ಕಾಡುವ ಪ್ರಶ್ನೆ. ನಿಜವಾದ ಅಯ್ಯಪ್ಪ ಭಕ್ತರು ದೇವಾಲಯದ ಸಂಪ್ರದಾಯವನ್ನು ಮುರಿಯಲು ಬಯಸುತ್ತಾರಾ ಎನ್ನುವ ಸಂದೇಹಕ್ಕೆ ಅಯ್ಯಪ್ಪನೇ ಉತ್ತರಿಸಬೇಕು. 'ಕಿಸ್ ಆಫ್ ಲವ್' ಖ್ಯಾ(ಕು)ತಿಯ ಫಾತಿಮಾ ರೆಹನಾ, ಸಂಕ್ಷಿಪ್ತ ಹಿನ್ನಲೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಸರ್ವೋಚ್ಚ ನ್ಯಾಯಾಲಯದ ಆದೇಶ

ಸರ್ವೋಚ್ಚ ನ್ಯಾಯಾಲಯದ ಆದೇಶ

10-50ವಯಸ್ಸಿನ ಮಹಿಳಾ ಭಕ್ತರಿಗೆ ಪ್ರವೇಶ ನೀಡಬೇಕೆಂದು ಈ ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ ನಂತರ, ಸುಪ್ರೀಂ ತೀರ್ಪಿನ ವಿರುದ್ದ ಭಾರೀ ಪ್ರತಿಭಟನೆಯೇ ಆರಂಭವಾಗಿತ್ತು. ಎರಡು ದಿನದ ಹಿಂದೆ ದೇವಾಲಯ ತೆರೆದ ನಂತರ, ತೀರ್ಪಿನ ವಿರುದ್ದ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಆಕ್ರೋಶ ವ್ಯಕ್ತವಾಗಲಾರಂಭಿಸಿತ್ತು. ಯಾವಾಗ, ವಿಜಯದಶಮಿಯ ದಿನದಂದು ದೇವಾಲಯದ ಪ್ರಧಾನ ಅರ್ಚಕರು (ತಂತ್ರಿಗಳು) ದೇವಸ್ಥಾನ ಬಂದ್ ಮಾಡಿ, ಅಯ್ಯಪ್ಪ ಭಕ್ತರ ಜೊತೆ ಪ್ರತಿಭಟನೆಗೆ ಕೂರುವುದಾಗಿ ಹೇಳಿದರೋ, ಹೋರಾಟದ ಹಾದಿ ಇನ್ನೊಂದು ಆಯಾಮಕ್ಕೆ ತಿರುಗಿತು.

ಶಬರಿಮಲೆ ಗರ್ಭಗುಡಿ ಮುಚ್ಚಲು ರಾಜಮನೆತನದ ಆದೇಶ? ಶಬರಿಮಲೆ ಗರ್ಭಗುಡಿ ಮುಚ್ಚಲು ರಾಜಮನೆತನದ ಆದೇಶ?

ಹೆಲ್ಮೆಟ್ ಹಾಕಿಕೊಂಡು, ಪೊಲೀಸ್ ಸಮವಸ್ತ್ರದಲ್ಲಿ ತೆರಳಿದ್ದ ಫಾತಿಮಾ

ಹೆಲ್ಮೆಟ್ ಹಾಕಿಕೊಂಡು, ಪೊಲೀಸ್ ಸಮವಸ್ತ್ರದಲ್ಲಿ ತೆರಳಿದ್ದ ಫಾತಿಮಾ

ಪಂಪಾದಿಂದ ಹೆಲ್ಮೆಟ್ ಹಾಕಿಕೊಂಡು, ಸಮವಸ್ತ್ರದಲ್ಲಿ ತೆರಳಿದ್ದ ಫಾತಿಮಾ, ಕೇಂದ್ರ ಸರಕಾರದ ಸ್ವಾಮ್ಯದ ಬಿಎಸ್ಎನ್ಎಲ್ (BSNL) ನಲ್ಲಿ ಟೆಲಿಕಾಂ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೇರಳದ ಕೊಚ್ಚಿನ್ ಮೂಲದ ಈಕೆ, ಇಂಟರ್ ಸೆಕ್ಸ್ ಕಥೆಯಾದಾರಿತ 'ಏಕಾ' ಎನ್ನುವ ಸಿನಿಮಾದಲ್ಲೂ ನಟಿಸಿದ್ದರು. 31ವರ್ಷದ ಫಾತಿಮಾಗೆ ಇಬ್ಬರು ಮಕ್ಕಳು. ಎಲ್ಲಕ್ಕಿಂತ ಹೆಚ್ಚು ಗಮನಿಸಬೇಕಾಗಿರುವುದು, ಫಾತಿಮಾ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಲ್ಲಿ ಜನಿಸಿದವರು/ಬೆಳೆದವರು.

ಹೆಲ್ಮೆಟ್ ಧರಿಸಿ ಇಬ್ಬರು ಮಹಿಳೆಯರ ಶಬರಿಮಲೆ ಪ್ರವೇಶ ಕೊನೇ ಕ್ಷಣದಲ್ಲಿ ವಿಫಲ ಹೆಲ್ಮೆಟ್ ಧರಿಸಿ ಇಬ್ಬರು ಮಹಿಳೆಯರ ಶಬರಿಮಲೆ ಪ್ರವೇಶ ಕೊನೇ ಕ್ಷಣದಲ್ಲಿ ವಿಫಲ

ವಿವಾದದ ಜೊತೆಗೇ ಸುತ್ತುತ್ತಿರುವ ಫಾತಿಮಾ ರೆಹಾನ

ವಿವಾದದ ಜೊತೆಗೇ ಸುತ್ತುತ್ತಿರುವ ಫಾತಿಮಾ ರೆಹಾನ

ವಿವಾದದ ಜೊತೆಗೇ ಸುತ್ತುತ್ತಿರುವ ಫಾತಿಮಾ ರೆಹಾನ, ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಭಾರೀ ಸುದ್ದಿಯಲ್ಲಿದ್ದರು. ಕೇರಳದ, ಕೋಝಿಕೋಡಿನ ಉಪನ್ಯಾಸಕರೊಬ್ಬರು, ಮಹಿಳೆಯರು ತಮ್ಮ ಎದೆಯ ಭಾಗವನ್ನು ಕಲ್ಲಂಗಡಿ ಹಣ್ಣಿನ ಹಾಗೇ ಮುಚ್ಚಿಕೊಂಡು ಇರಬೇಕು ಎನ್ನುವ ವಿವಾದಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಲು ಫಾತಿಮಾ, ತನ್ನ ಎದೆಯ ಭಾಗವನ್ನು ಕಲ್ಲಂಗಡಿಯಲ್ಲಿ ಮುಚ್ಚಿ, ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ನಂತರ, ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದರು.

ಶಬರಿಮಲೆ ಅಯ್ಯಪ್ಪ ನೈತಿಕ ಬ್ರಹ್ಮಚಾರಿ, ಹೀಗಾಗಿ ಮಹಿಳೆಯರಿಗೆ ಪ್ರವೇಶವಿಲ್ಲ:ಪ್ರತಾಪ್ ಸಿಂಹ ಶಬರಿಮಲೆ ಅಯ್ಯಪ್ಪ ನೈತಿಕ ಬ್ರಹ್ಮಚಾರಿ, ಹೀಗಾಗಿ ಮಹಿಳೆಯರಿಗೆ ಪ್ರವೇಶವಿಲ್ಲ:ಪ್ರತಾಪ್ ಸಿಂಹ

2014ರಲ್ಲಿ ಕಿಸ್ ಆಫ್ ಲವ್ ಆಂದೋಲನ

2014ರಲ್ಲಿ ಕಿಸ್ ಆಫ್ ಲವ್ ಆಂದೋಲನ

2014ರಲ್ಲಿ ಕಿಸ್ ಆಫ್ ಲವ್ ಆಂದೋಲನದಲ್ಲಿ ಫಾತಿಮಾ ತಮ್ಮನ್ನು ತೊಡಗಿಸಿಕೊಂಡವರು. ನೈತಿಕ ಪೊಲೀಸ್ ಗಿರಿ ವಿರುದ್ದ ಚಿತ್ರ ನಿರ್ಮಾಪಕ ಮನೋಜ್ ಶ್ರೀಧರ್ ಆರಂಭಿಸಿದ್ದ ಕ್ಯಾಂಪೇನ್ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಫಾತಿಮಾ, ಓಣಂ ಹುಲಿವೇಷದಲ್ಲೂ ಭಾಗವಹಿಸಿದ್ದರು. ಪುರುಷರಿಗೆ ಮಾತ್ರ ಪ್ರಾತಿನಿಧ್ಯವಿರುವ ವಿಚಾರದಲ್ಲಿ, ಮಹಿಳೆಯರೂ ಮೇಲ್ಪಂಕ್ತಿಗೆ ಬರಬೇಕು ಎನ್ನುವುದು ನನ್ನ ಉದ್ದೇಶ ಎನ್ನುವುದು ಫಾತಿಮಾ ನಿಲುವು.

ತಂದೆಯ ಸಾವಿನ ನಂತರ ಕುಟುಂಬದಿಂದ ದೂರವಿರುವ ಫಾತಿಮಾ

ತಂದೆಯ ಸಾವಿನ ನಂತರ ಕುಟುಂಬದಿಂದ ದೂರವಿರುವ ಫಾತಿಮಾ

ತಮ್ಮ ಸಂಪ್ರದಾಯಕ್ಕೆ ವಿರುದ್ದವಾಗಿರುವುದರಿಂದ ಮತ್ತು ತನ್ನ ತಂದೆಯ ಸಾವಿನ ನಂತರ ಕುಟುಂಬದಿಂದ ದೂರವಿರುವ ಫಾತಿಮಾ, ಪುರುಷ ಪ್ರಧಾನ ಸಮಾಜ, ಧಾರ್ಮಿಕ ನಂಬಿಕೆಯ ವಿರುದ್ದವೇ ತಮ್ಮ ಧ್ವನಿ ಎತ್ತಿದ್ದವರು. ಶುಕ್ರವಾರ (ಅ 19) ಶಬರಿಮಲೆಗೆ ಹೋಗಿದ್ದಾಗಗ, ಧಾರ್ಮಿಕ ಸಂಪ್ರದಾಯದ ಪ್ರಕಾರ, ತಲೆಯಮೇಲೆ ಹೊತ್ತುಕೊಂಡು ಹೋಗುವ ಇರುಮುಡಿಯಲ್ಲಿ ನ್ಯಾಪ್ಕಿನ್ ಹಾಕಿಕೊಂಡು ಫಾತಿಮಾ ಹೋಗಿದ್ದರು ಎನ್ನುವ ಸುದ್ದಿ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

English summary
Activist Rehana Fathima climbs down from Sabarimala, but this was another bid to break the glass ceiling
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X