• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಮಾಡಿ ಪುನೀತರಾದ ಭಕ್ತರು

|

ಶಬರಿಮಲೆ, ಜನವರಿ 14: ಕೊರೊನಾ ಸಾಂಕ್ರಾಮಿಕದ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಬೆಟ್ಟಗಳ ಒಡೆಯನಾಗಿ ನೆಲೆಸಿರುವ ಪಂದಳರಾಜ ಕುಮಾರ ಅಯ್ಯಪ್ಪ ಸ್ವಾಮಿಯ ಮಕರಜ್ಯೋತಿ ಇಂದು ಸಂಜೆ ದೇವಾಲಯದ ಎದುರಿನ ಬೆಟ್ಟದಲ್ಲಿ ಪ್ರಜ್ವಲಿಸಿದೆ.

ಲಕ್ಷಾಂತರ ಭಕ್ತಾದಿಗಳಿಗೆ ಇದು ಅತ್ಯಂತ ಮತ್ತು ಅಭೂತಪೂರ್ವ ಸನ್ನಿವೇಶವಾಗಿದೆ. ಪಂದಳಂ ವಾಲಿಯಕೋಕಲ್ ಶ್ರೀ ಧರ್ಮ ಸಾಸ್ತಾ ದೇವಸ್ಥಾನದಿಂದ ಪವಿತ್ರ ಚಿನ್ನದ ಆಭರಣಗಳು ದೇವಾಲಯವನ್ನು ಸೇರಿದೆ..

ಸ್ವಾಮಿಯ ವಿಗ್ರಹವನ್ನು ತಿರುವಭರಣಂನೊಂದಿಗೆ ಅಲಂಕರಿಸಿದ ನಂತರ ನಡೆಯಲಿರುವ ವಾರ್ಷಿಕ ತೀರ್ಥಯಾತ್ರೆಯ ಅತ್ಯಂತ ಶುಭ ಆಚರಣೆ ಮಕರವಿಳಕ್ಕು ಸಮಾರಂಭಕ್ಕೆ ಅಯ್ಯಪ್ಪ ಬೆಟ್ಟ ವಾಸಸ್ಥಾನ ಸಿದ್ಧಗೊಂಡಿತ್ತು.

ಮೆಲಸಂತಿಜಯರಾಜ್ ಪೊಟ್ಟಿ ಅವರ ಸಮ್ಮುಖದಲ್ಲಿ ತಂತ್ರಿಕಂದರಾರು ರಾಜಿವಾರು ಸಂಜೆ 6.40ಕ್ಕೆ ದೀಪಾರಾಧನೆ ನೆರವೇರಿಸಲಿದ್ದಾರೆ.

ಇದಕ್ಕೆ ಮುನ್ನ ಸಂಜೆ 5.30ಕ್ಕೆ ತಿರುವಾಭರಣದ ಉತ್ಸವ ಆರಂಭಗೊಂಡಿದ್ದು, ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ದೇವಸ್ವ ಮಂಡಳಿಯವರು ತಿರುವಾಭರಣವನ್ನು ಸನ್ನಿಧಿವರಗೆ ಕೊಂಡೊಯ್ಯಲಿದ್ದಾರೆ. ಜ.16ರಿಂದ 18 ವರೆಗೆ ಮೂರು ದಿನಗಳು ಅಯ್ಯಪ್ಪ ಸ್ವಾಮಿ ಪಡಿ ಪೂಜ ಕಾರ್ಯಕ್ರಮಗಳು ನಡೆದಿವೆ.

ದೀಪಾರಾಧನೆ ನಂತರ ಅಯ್ಯಪ್ಪ ಸ್ವಾಮಿಗುಡಿಯ ಪೂರ್ವ ದಿಕ್ಕಿನ ನೀಲಾಕಾಶದಲ್ಲಿ ನಕ್ಷತ್ರವೊಂದು ಕಂಡುಬರಲಿದೆ. ಆ ಸಮಯ ಸೂರ್ಯದೇವನ ಶುಭ ಸಮಯ, ಸೂರ್ಯನು ದಕ್ಷಿಣಾಯನದಿಂದಉತ್ತರಾಯಣಕ್ಕೆ ಪಥ ಬದಲಿಸುವ ಸಮಯವನ್ನು ಇದು ಸೂಚಿಸುತ್ತದೆ.

English summary
Holy Makara jyothi seen in Sabarimala. devotees seen jyothi and worshiped the Ayyappa. lakhs of devotees gathered in Sabarimala to see holy makara jyothi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X