ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಯಲ್ಲಿ ದಿನಕ್ಕೆ 25 ಸಾವಿರ ಭಕ್ತರಿಗೆ ಅವಕಾಶ; ಲಸಿಕೆ, ಪರೀಕ್ಷೆ ಕಡ್ಡಾಯ

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 08: ಶಬರಿಮಲೆ ವಾರ್ಷಿಕ ತಿರ್ಥಯಾತ್ರೆ ಆರಂಭವಾಗಲು ಇನ್ನು ಒಂದು ತಿಂಗಳು ಬಾಕಿಯಿದ್ದು, ಭಕ್ತರಿಗೆಂದು ದೇಗುಲದಲ್ಲಿ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಈ ಬಾರಿ ಅಯ್ಯಪ್ಪನ ದರ್ಶನಕ್ಕೆ ದಿನಕ್ಕೆ 25 ಸಾವಿರ ಭಕ್ತರಿಗೆ ಅವಕಾಶ ನೀಡುವುದಾಗಿ ತಿಳಿಸಿದೆ.

ಈ ಬಾರಿ ದಿನದಲ್ಲಿ 25 ಸಾವಿರ ಭಕ್ತರಿಗೆ ದರ್ಶನ ಪಡೆಯಲು ಅವಕಾಶ ನೀಡಲಾಗುವುದು. ಆರಂಭಿಕ ಹಂತದಲ್ಲಿ ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ಎರಡು ಡೋಸ್‌ಗಳ ಕೊರೊನಾ ಲಸಿಕೆಯನ್ನು ಪಡೆದಿರಬೇಕು ಹಾಗೂ ಆರ್‌ಟಿಪಿಸಿಆರ್ ಕೊರೊನಾ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ ಎಂದು ನಿಯಮ ಹೇರಲಾಗಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಬಾಗಿಲು ಮತ್ತೆ ಓಪನ್ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಬಾಗಿಲು ಮತ್ತೆ ಓಪನ್

ಭಕ್ತರಿಗೆ ಸ್ನಾನಕ್ಕೆ ಪಂಪಾ ನದಿಯಲ್ಲಿ ಅವಕಾಶ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

Sabarimala To Allow 25 Thousand Pilgrims A Day

ದರ್ಶನಕ್ಕೆ 65 ಮೇಲ್ಪಟ್ಟವರಿಗೆ ಅವಕಾಶ:
10 ವರ್ಷದೊಳಗಿನ ಹಾಗೂ 65 ವರ್ಷ ಮೇಲ್ಪಟ್ಟವರಿಗೂ ಅಯ್ಯಪ್ಪನ ದರ್ಶನಕ್ಕೆ ಅನುಮತಿ ನೀಡಲಾಗುತ್ತದೆ ಎಂದು ಸಚಿವ ಕೆ ರಾಧಾಕೃಷ್ಣನ್ ತಿಳಿಸಿದ್ದಾರೆ.

ಆದರೆ ಭಕ್ತರು ದೇವಸ್ಥಾನಕ್ಕೆ ಬರಲು ಕಾಡು ಹಾದಿಯನ್ನು ಬಳಸುವಂತಿಲ್ಲ. ದರ್ಶನ ಪಡೆದ ನಂತರ ಸನ್ನಿಧಾನದಲ್ಲಿ ಉಳಿಯುವಂತಿಲ್ಲ. ದೇವರಿಗೆ ಅಭಿಷೇಕ ಮಾಡಿದ ತುಪ್ಪವನ್ನು ಎಲ್ಲಾ ಭಕ್ತರಿಗೂ ನೀಡಲಾಗುತ್ತದೆ ಎಂದು ತಿಳಿಸಿದರು.

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಓಪನ್: 5 ಸಾವಿರ ಭಕ್ತರಿಗಷ್ಟೇ ಅವಕಾಶಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ ಓಪನ್: 5 ಸಾವಿರ ಭಕ್ತರಿಗಷ್ಟೇ ಅವಕಾಶ

ಕೊರೊನಾ ಸಾಂಕ್ರಾಮಿಕದ ನಡುವೆ ಭಕ್ತರಿಗೆ ದೇವರ ದರ್ಶನ ಪಡೆಯಲು ಅವಶ್ಯಕವಾದ ಎಲ್ಲಾ ಸುರಕ್ಷಾ ಕ್ರಮಗಳ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದಿ ರಾಜ್ಯ ಸರ್ಕಾರ ತಿಳಿಸಿದೆ.

Sabarimala To Allow 25 Thousand Pilgrims A Day

ಈ ವರ್ಷ ನವೆಂಬರ್ 16ರಿಂದ ಶಬರಿಮಲೆ ಯಾತ್ರೆ ಆರಂಭವಾಗಲಿದೆ. ಅಯ್ಯಪ್ಪ ಸ್ವಾಮಿ ದೇಗುಲ ಹಾಗೂ ಆವರಣದಲ್ಲಿ ಭಕ್ತರಿಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಸಲಾಗುತ್ತಿದೆ ಎಂದು ರಾಜ್ಯ ವಿಧಾನಸಭೆಯಲ್ಲಿ ರಾಧಾಕೃಷ್ಣನ್ ಮಾಹಿತಿ ನೀಡಿದ್ದರು.

ಸರ್ಕಾರದ ಮಾರ್ಗಸೂಚಿಯ ಪ್ರಕಾರವಾಗಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಭಕ್ತರಿಗೆ ಕೊರೊನಾ ನಿಯಮಗಳ ಪಾಲನೆಗೆ ಸೂಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಪಂಪಾದಲ್ಲಿ ಆಸ್ಪತ್ರೆ ವ್ಯವಸ್ಥೆ, ಕೊರೊನಾ ಆರ್‌ಟಿಪಿಸಿಆರ್ ಪರೀಕ್ಷೆ ಹೀಗೆ ಹಲವು ವ್ಯವಸ್ಥೆಗಳನ್ನು ಆರೋಗ್ಯ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಮಾಡಿದೆ. ಆದರೆ ದೇವಸ್ಥಾನಕ್ಕೆ ಭೇಟಿ ನೀಡಬಹುದಾದ ಭಕ್ತರ ಸಂಖ್ಯೆ ಕುರಿತು ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಈಗಿರುವ ಮಾರ್ಗಸೂಚಿಯಲ್ಲಿ ಏನು ಸಡಿಲ ಮಾಡಬೇಕು ಎಂಬ ಕುರಿತು ಕಾದುನೋಡಬೇಕಿದೆ ಎಂದು ತಿಳಿಸಿದ್ದಾರೆ.

ಎರಡು ತಿಂಗಳ ಅವಧಿಯ ಈ ಯಾತ್ರೆಯಲ್ಲಿ ಭಕ್ತರಿಗೆ ಸಾರಿಗೆ ವ್ಯವಸ್ಥೆ ಸಂಬಂಧ ಸಭೆ ನಡೆಸಲಾಗಿದೆ. ಕುಡಿಯುವ ನೀರು, ಆಹಾರ ಹಾಗೂ ಶೌಚಾಲಯ ವ್ಯವಸ್ಥೆಗಳ ಪರಿಶೀಲನೆ ನಡೆಸಲಾಗಿದೆ.

ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದಂತೆ ಹಲವು ನಿರ್ಬಂಧಗಳನ್ನು ಹೇರಲಾಗಿತ್ತು. ಕಳೆದ ವರ್ಷ ಭಕ್ತರ ಸಂಖ್ಯೆಯನ್ನು ತಗ್ಗಿಸಲಾಗಿತ್ತು.

ಇದೇ ಜುಲೈನಲ್ಲಿ ಅಯ್ಯಪ್ಪನ ದೇಗುಲವನ್ನು ತೆರೆದು ಒಂದು ದಿನದಲ್ಲಿ ಐದು ಸಾವಿರ ಮಂದಿಗೆ ಅವಕಾಶ ಕಲ್ಪಿಸಲಾಗಿತ್ತು, ಮಾಸಿಕ ಧಾರ್ಮಿಕ ಆಚರಣೆ ನಂತರ ಮತ್ತೆ ದೇಗುಲ ಮುಚ್ಚಲಾಗಿತ್ತು. ಮತ್ತೆ ಸೆಪ್ಟೆಂಬರ್ ತಿಂಗಳಿನಲ್ಲಿ ದೇಗುಲದ ವಾರ್ಷಿಕ ಪಂಚಾಂಗದ ರೀತ್ಯ ಕನ್ನಿ ಮಾಸದ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು. ಲಾಕ್‌ಡೌನ್ ಅವಧಿಯಲ್ಲಿ ತನ್ನ ಅಧೀನದಲ್ಲಿರುವ 1,200 ದೇವಾಲಯಗಳಿಗೆ ಭಕ್ತರು ಪ್ರವೇಶಿಸದಂತೆ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ನಿರ್ಬಂಧ ವಿಧಿಸಿತ್ತು.

ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೆಲವು ವಾರದಿಂದ ಇಳಿಕೆಯಾಗಿದೆ. ಇದಾಗ್ಯೂ ದೇಶದಲ್ಲಿ ದಾಖಲಾಗುತ್ತಿರುವ ಹೊಸ ಕೊರೊನಾ ಪ್ರಕರಣಗಳ ಪೈಕಿ ಕೇರಳ ರಾಜ್ಯದ ಪಾಲು ಹೆಚ್ಚಿದೆ. ಕೊರೊನಾ ಮೂರನೇ ಅಲೆ ಆತಂಕವೂ ಇದ್ದು, ಹಲವು ನಿರ್ಬಂಧಗಳೊಂದಿಗೆ ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

English summary
Kerala government on Thursday informed that 25,000 pilgrims will be permitted to visit Sabarimala temple
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X