ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 14 ರಂದು ಶಬರಿಮಲೆ ದೇವಸ್ಥಾನದಲ್ಲಿ ಮಾಸಿಕ ಪೂಜೆ

|
Google Oneindia Kannada News

ತಿರುವನಂತಪುರಂ, ಜೂನ್ 10: ಶಬರಿಮಲೆ ದೇವಸ್ಥಾನದಲ್ಲಿ ಜೂನ್ 14 ರಂದು ವಿಶೇಷ ಪೂಜೆ ಆರಂಭಗೊಳ್ಳಲಿದ್ದು, ಭಕ್ತರಿಗೆ ಪ್ರವೇಶ ನೀಡಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಘೋಷಿಸಿದೆ.

Recommended Video

Man writes his property to these elephants | Kerala | Oneindia Kannada

"ನಾವು ದೇವಾಲಯದ 'ತಂತ್ರಿ'ಗಳ ಜೊತೆ ಚರ್ಚಿಸಿದ್ದೇವೆ. ಜೂನ್ 19 ರಿಂದ ಮಾಸಿಕ ಪೂಜೆ ಮತ್ತು ದೇವಾಲಯ ಉತ್ಸವಕ್ಕೆ ನಾವು ಮುಂದಾಗಿದ್ದೇವೆ" ಎಂದು ದೇವಸ್ವಂ ಮಂಡಳಿ ಹೇಳಿದೆ.

ಸ್ವಾಮಿಯೇ ಶರಣಂ ಅಯ್ಯಪ್ಪ: ಮುಂದಿನ ವಾರದಿಂದ ಭಕ್ತರಿಗಾಗಿ ತೆರೆಯಲಿದೆ ಶಬರಿಮಲೆಸ್ವಾಮಿಯೇ ಶರಣಂ ಅಯ್ಯಪ್ಪ: ಮುಂದಿನ ವಾರದಿಂದ ಭಕ್ತರಿಗಾಗಿ ತೆರೆಯಲಿದೆ ಶಬರಿಮಲೆ

'ಪ್ರಸ್ತುತ ವೇಳಾಪಟ್ಟಿಯ ಪ್ರಕಾರ, ದೇವಾಲಯದ ಉತ್ಸವ ಜೂನ್ 19 ರಂದು ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಜೂನ್ 14 ರಿಂದ ಮಾಸಿಕ ಪೂಜೆ ನಡೆಯಲಿದೆ. ಅರತ್ ಸಮಾರಂಭವನ್ನು ಜೂನ್ 20 ರಂದು ಪಂಪಾ ನದಿಯಲ್ಲಿ ನಡೆಸಲಾಗುವುದು'' ಎಂದು ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷ ಎನ್ ವಾಸು ತಿಳಿಸಿದ್ದಾರೆ.

Sabarimala temple to open on 14 June evening

ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡ ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸಬಹುದು. ಒಂದು ವೇಳೆ ಹೊರರಾಜ್ಯಗಳಿಂದ ಭಕ್ತಾದಿಗಳು ಬರುವುದಾದರೇ ನೋಂದಣಿ ಸಮಯದಲ್ಲಿ, ಅವರು ಕೊರೊನಾ ಪರೀಕ್ಷೆಗೆ ಒಳಪಟ್ಟಿರುವ ಪ್ರಮಾಣಪತ್ರವನ್ನು ಅಪ್‌ಲೌಡ್ ಮಾಡಬೇಕು. ಅದು

ಐಸಿಎಂಆರ್ ಅನುಮೋದಿತ ಪ್ರಯೋಗಾಲಯದಿಂದ ಪ್ರಮಾಣಪತ್ರ ಆಗಿರಬೇಕು ಎಂದು ಮಾಹಿತಿ ನೀಡಿದ್ದಾರೆ.

ಇದರ ನಡುವೆ ದೇವಸ್ಥಾನದ ಪ್ರಧಾನ ಅರ್ಚಕ ಕಂಡರರ್ ಮಹೇಶ್ ಮೋಹನರ್ ದೇವಸ್ಥಾನ ತೆರೆಯುತ್ತಿರುವುದನ್ನು ಖಂಡಿಸಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ. ಇಂತಹ ಸಮಯದಲ್ಲಿ ದೇವಸ್ಥಾನ ತೆರೆಯವುದು ಒಳ್ಳೆಯದಲ್ಲ ಎಂದು ವಿರೋಧಿಸಿದ್ದಾರೆ.

English summary
Sabarimala temple opens on June 14 evening for monthly puja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X