ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ ಪೂಜೆಗಾಗಿ ಬಾಗಿಲು ತೆರೆದ ಶಬರಿಮಲೆ; ಭಕ್ತರಿಗೆ ಪ್ರವೇಶವಿಲ್ಲ

|
Google Oneindia Kannada News

ತಿರುವನಂತಪುರಂ, ಆಗಸ್ಟ್ 17 : ಕೇರಳದ ಪ್ರಸಿದ್ಧ ಶಬರಿಮಲೆ ದೇವಾಲಯದ ಬಾಗಿಲನ್ನು ತಿಂಗಳ ವಿಶೇಷ ಪೂಜೆಗಾಗಿ ತೆರೆಯಲಾಗಿದೆ. ಐದು ದಿನಗಳ ಕಾಲ ಪೂಜೆ ನಡೆಯಲಿದ್ದು, ಕೋವಿಡ್ ಭೀತಿ ಹಿನ್ನಲೆಯಲ್ಲಿ ಭಕ್ತರಿಗೆ ಪ್ರವೇಶ ನಿರಾಕರಿಸಲಾಗಿದೆ.

ಮಲಯಾಳಂ ಪಂಚಾಂಗದ ಪ್ರಕಾರ ಮೊದಲ ತಿಂಗಳಾದ ಚಿಂಗಂನಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಐದು ದಿನಗಳ ಈ ವಿಶೇಷ ಪೂಜೆ ಸೋಮವಾರದಿಂದ ಆರಂಭವಾಗಿದೆ. ಅದಕ್ಕಾಗಿ ಭಾನುವಾರ ದೇವಾಲಯದ ಬಾಗಿಲು ತೆರೆಯಲಾಗಿದೆ.

ಶಬರಿಮಲೆ ಯಾತ್ರೆಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಶಬರಿಮಲೆ ಯಾತ್ರೆಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲವು ತಿಂಗಳಿನಿಂದ ಪೂಜೆಗಳು ಸ್ಥಗಿತಗೊಂಡಿತ್ತು. ತಿಂಗಳ ಪೂಜೆಗೆ ಮಾತ್ರ ದೇವಾಲಯ ಬಾಗಿಲು ತೆರೆಯಲಾಗುತ್ತಿತ್ತು. ಆದರೆ, ಭಕ್ತಾದಿಗಳಿಗೆ ದೇವಾಲಯಕ್ಕೆ ಇದುವರೆಗೂ ಪ್ರವೇಶ ನೀಡಿಲ್ಲ.

ಶಬರಿಮಲೆ ವಿಮಾನ ನಿಲ್ದಾಣಕ್ಕೆ ಕೇರಳ ಸರ್ಕಾರದ ಹಸಿರು ನಿಶಾನೆ ಶಬರಿಮಲೆ ವಿಮಾನ ನಿಲ್ದಾಣಕ್ಕೆ ಕೇರಳ ಸರ್ಕಾರದ ಹಸಿರು ನಿಶಾನೆ

Sabarimala Temple Reopens For 5 Day Monthly Puja, Devotees Barred Due To Coronavirus

ತಿರುವಾಂಕೂರು ದೇವಸ್ವಂ ಮಂಡಳಿ ಶುಕ್ರವಾರದ ತನಕ ದೇಗುಲ ತೆರೆದಿರಲಿದೆ. ಸಾಮಾನ್ಯ ಪೂಜೆಗಳು ನಡೆಯಲಿವೆ. ನಂತರ ಓಣಂ ಪೂಜೆಯ ಪ್ರಯುಕ್ತ ಆಗಸ್ಟ್ 21ರಿಂದ ಸೆಪ್ಟೆಂಬರ್ 2ರ ತನಕ ಪೂಜೆಗಳು ನಡೆಯಲಿವೆ. ಭಕ್ತರಿಗೆ ಮಾತ್ರ ಪ್ರವೇಶವಿಲ್ಲ ಎಂದು ಹೇಳಿದೆ.

ಶಬರಿಮಲೆ ಬಾಗಿಲು ತೆರೆಯಲ್ಲ; ಭಕ್ತರಿಗೆ ಇಲ್ಲ ಅಯ್ಯಪ್ಪನ ದರ್ಶನ ಶಬರಿಮಲೆ ಬಾಗಿಲು ತೆರೆಯಲ್ಲ; ಭಕ್ತರಿಗೆ ಇಲ್ಲ ಅಯ್ಯಪ್ಪನ ದರ್ಶನ

ನವೆಂಬರ್‌ನಿಂದ 16ರಿಂದ ಎರಡು ತಿಂಗಳ ಕಾಲ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆಗಲೂ ದೇವಾಲಯಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತರಬೇಕು ಎಂಬುದನ್ನು ಸೇರಿದಂತೆ ಹಲವು ಸೂಚನೆಗಳನ್ನು ನೀಡಲಾಗುತ್ತದೆ.

English summary
Kerala Sabarimala Ayyappa temple opened for Malayalam month of Chingam special pooja. Temple will hold holding the pooja on five-days. Devotes entry banned due to COVID 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X