ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡಲ ಪೂಜೆಗಾಗಿ ಬಾಗಿಲು ತೆರೆದ ಶಬರಿಮಲೆ ದೇವಾಲಯ

|
Google Oneindia Kannada News

Recommended Video

Sabarimala Verdict:ಮಂಡಲ ಪೂಜೆಗಾಗಿ 62 ದಿನಗಳ ಕಾಲ ತೆರೆದಿರುತ್ತೆ ಅಯ್ಯಪ್ಪ ಸ್ವಾಮಿ ದೇವಸ್ಥಾನ|Oneindia Kannada

ತಿರುವನಂತಪುರಂ, ನವೆಂಬರ್ 16 : ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ನಡುವೆಯೇ 62 ದಿನಗಳ ಮಂಡಲ ಪೂಜೆ ಅಂಗವಾಗಿ ದೇವಾಲಯದ ಬಾಗಿಲು ತೆರಯಲಾಗಿದೆ.

ಶುಕ್ರವಾರ ಸಂಜೆ ಸಂಪ್ರದಾಯಿಕ ಪೂಜೆಗಳ ಬಳಿಕ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರಯಲಾಗಿದೆ. ಭಕ್ತಾದಿಗಳು ಶನಿವಾರದಿಂದ ದೇವರ ದರ್ಶನವನ್ನು ಪಡೆಯಬಹುದಾಗಿದೆ.

ಶಬರಿಮಲೆ ಬದಲು ಹಳ್ಳಿಗಳಿಗೆ ಹೋಗಿ: ಕಾರ್ಯಕರ್ತೆಯರಿಗೆ ತಸ್ಲೀಮಾ ಸಲಹೆಶಬರಿಮಲೆ ಬದಲು ಹಳ್ಳಿಗಳಿಗೆ ಹೋಗಿ: ಕಾರ್ಯಕರ್ತೆಯರಿಗೆ ತಸ್ಲೀಮಾ ಸಲಹೆ

ದೇವಾಲಯದಲ್ಲಿ 62 ದಿನಗಳ ಕಾಲ 'ಮಂಡಲ ಪೂಜೆ ಮಹೋತ್ಸವ' ನಡೆಯಲಿದ್ದು ಡಿಸೆಂಬರ್ 27ರ ತನಕ ದೇವಾಲಯದ ಬಾಗಿಲು ತೆರೆದಿರುತ್ತದೆ. ಮಹಿಳೆಯರಿಗೆ ದೇವಾಲಯ ಪ್ರವೇಶ ಮಾಡಲು ಅವಕಾಶ ಸಿಗಲಿದೆಯೇ? ಎಂದು ಕಾದು ನೋಡಬೇಕು.

ಅದೇನು ವಿಮಾನ ನಿಲ್ದಾಣನೋ, ದೇವಾಲಯವೋ: ಮುಗಿಲು ಮುಟ್ಟಿದ ಅಯ್ಯಪ್ಪನ ಭಜನೆಅದೇನು ವಿಮಾನ ನಿಲ್ದಾಣನೋ, ದೇವಾಲಯವೋ: ಮುಗಿಲು ಮುಟ್ಟಿದ ಅಯ್ಯಪ್ಪನ ಭಜನೆ

Sabarimala Temple

ಮಹಿಳೆಯರು ಶಬರಿಮಲೆ ದೇವಾಲಯಕ್ಕೆ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ 3ನೇ ಬಾರಿಗೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಎರಡೂ ಬಾರಿಯೂ ಮಹಿಳಾ ಭಕ್ತರು ದೇವಾಲಯ ಪ್ರವೇಶಿಸಲು ಭಾರಿ ವಿರೋಧ ವ್ಯಕ್ತವಾಗಿತ್ತು.

ಅಯ್ಯಪ್ಪನ ನೋಡದೆ ಹಿಂದಿರುಗುವುದಿಲ್ಲ : ತೃಪ್ತಿ ದೇಸಾಯಿ ಚಾಲೆಂಜ್ಅಯ್ಯಪ್ಪನ ನೋಡದೆ ಹಿಂದಿರುಗುವುದಿಲ್ಲ : ತೃಪ್ತಿ ದೇಸಾಯಿ ಚಾಲೆಂಜ್

ಶಬರಿಮಲೆ ದೇವಾಲಯದ ಬಾಗಿಲು ತೆರೆಯುವುದಕ್ಕೂ ಮುನ್ನ ದೇವಾಲಯದ ಸುತ್ತ-ಮುತ್ತಲೂ ಕೇರಳ ಪೊಲೀಸರು 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

English summary
Sabarimala Temple on Friday opened for 62-day long Mandala Pooja-Magaravilaku annual pilgrimage season. The portals will be opened for 'Mandala Pooja Mahotsavam' till 27 December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X