ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ದರ್ಶನಕ್ಕೆ ಹೊರಟ ಭಕ್ತರ ಗಮನಕ್ಕೆ

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 29: ಕೋವಿಡ್ ಭೀತಿಯ ನಡುವೆಯೇ ಕೇರಳದ ಶಬರಿಮಲೆ ದೇವಾಲಯ ಭಕ್ತರಿಗಾಗಿ ಬಾಗಿಲು ತೆರೆಯಲಿದೆ. ಮಕರ ಸಂಕ್ರಾಂತಿ ಮಂಡಲ ಪೂಜೆ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಾರೆ.

ನವೆಂಬರ್ 16ರಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ ಎಂದು ತಿರುವಂಕೂರು ದೇವಸ್ಥಾನ ಮಂಡಳಿ ಹೇಳಿದೆ. ಮೊದಲ ಒಂದು ವಾರಗಳ ಕಾಲ ದಿನಕ್ಕೆ 1000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ವಿಶೇಷ ಪೂಜೆಗಾಗಿ ಬಾಗಿಲು ತೆರೆದ ಶಬರಿಮಲೆ; ಭಕ್ತರಿಗೆ ಪ್ರವೇಶವಿಲ್ಲ ವಿಶೇಷ ಪೂಜೆಗಾಗಿ ಬಾಗಿಲು ತೆರೆದ ಶಬರಿಮಲೆ; ಭಕ್ತರಿಗೆ ಪ್ರವೇಶವಿಲ್ಲ

ಆದರೆ, ವಾರಾಂತ್ಯದಲ್ಲಿ 1000ಕ್ಕಿಂತ ಹೆಚ್ಚಿನ ಭಕ್ತರು ದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ. ಮಕರ ವಿಳಕ್ಕು, ಮಂಡಳ ವಿಳಕ್ಕು ಸಂದರ್ಭದಲ್ಲಿ 5000 ಭಕ್ತರಿಗೆ ಪ್ರವೇಶ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ಹೇಳಿದೆ.

ಮತ್ತೆ ಶಬರಿಮಲೆ ಓಪನ್, ದೇಗುಲಕ್ಕೆ ದಾರಿ ಹೀಗಿದೆಮತ್ತೆ ಶಬರಿಮಲೆ ಓಪನ್, ದೇಗುಲಕ್ಕೆ ದಾರಿ ಹೀಗಿದೆ

 Sabarimala Temple Open Pilgrims Limited To 1000 Per Day

ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ದೇವಾಲಯಕ್ಕೆ ಬರುವ ಭಕ್ತರು 24 ಗಂಟೆ ಹಿಂದಿನ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ತರಬೇಕು. ಸನ್ನಿಧಾನದಲ್ಲಿ ರಾತ್ರಿ ವಾಸ್ತವ್ಯ ಹೂಡುವುದನ್ನು ನಿಷೇಧಿಸಲಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಾಲೆ ಏಕೆ ಧರಿಸಬೇಕು? ಶಬರಿಮಲೆಯ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಮಾಲೆ ಏಕೆ ಧರಿಸಬೇಕು?

ಗುರುವಾರ ಕೇರಳದಲ್ಲಿ 7020 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 4,18,485ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 91,786.

English summary
Travancore Devaswom Board said that pilgrim season starts on November 16 and number of pilgrims limited on 1000 per day during initial days of the week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X