ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ: ಮಹಿಳೆಯರಿಗೆ ಪ್ರತ್ಯೇಕ ದಿನದ ವ್ಯವಸ್ಥೆ ಮಾಡಲು ಕೇರಳ ಚಿಂತನೆ

|
Google Oneindia Kannada News

ತಿರುವನಂತಪುರಂ, ನವೆಂಬರ್ 15: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವ ಸಲುವಾಗಿ ಅಲ್ಲಿನ ಸರ್ಕಾರ ಹೊಸ ಚಿಂತನೆ ರೂಪಿಸಿದೆ.

ನ.17ಕ್ಕೆ ತೃಪ್ತಿ ದೇಸಾಯಿ ಜತೆ ಆರು ಮಹಿಳೆಯರು ಶಬರಿಮಲೆ ದೇಗುಲಕ್ಕೆ, ರಕ್ಷಣೆಗಾಗಿ ಮನವಿನ.17ಕ್ಕೆ ತೃಪ್ತಿ ದೇಸಾಯಿ ಜತೆ ಆರು ಮಹಿಳೆಯರು ಶಬರಿಮಲೆ ದೇಗುಲಕ್ಕೆ, ರಕ್ಷಣೆಗಾಗಿ ಮನವಿ

ಮಹಿಳೆಯರ ಪ್ರವೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವುದರಿಂದ, ಅವರಿಗಾಗಿಯೇ ನಿರ್ದಿಷ್ಟ ದಿನವನ್ನು ನಿಗದಿಪಡಿಸುವ ಬಗ್ಗೆ ಚರ್ಚಿಸಬೇಕಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

'ಶಬರಿಮಲೆ ವಿಚಾರದಲ್ಲಿ ಕೇರಳ ಸರ್ಕಾರದ ಕಮ್ಯುನಿಸ್ಟರು ಗೋಸುಂಬೆತನ ತೋರಿಸುತ್ತಿದ್ದಾರೆ''ಶಬರಿಮಲೆ ವಿಚಾರದಲ್ಲಿ ಕೇರಳ ಸರ್ಕಾರದ ಕಮ್ಯುನಿಸ್ಟರು ಗೋಸುಂಬೆತನ ತೋರಿಸುತ್ತಿದ್ದಾರೆ'

ನವೆಂಬರ್ 17ರಂದು ಮಂಡಲ ಮಕ್ಕರವಿಳಕ್ಕು ಆರಂಭವಾಗಲಿದ್ದು, ಅಂದು ಎಲ್ಲ ವಯಸ್ಸಿನ ಮಹಿಳೆಯರಿಗೂ ದೇವಸ್ಥಾನದ ಒಳಗೆ ಪ್ರವೇಶ ಕಲ್ಪಿಸುವ ಕುರಿತಾಗಿ ಚರ್ಚಿಸಲು ಬುಧವಾರ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು.

sabarimala temple kerala government separate days for women devotees all party meeting

ಆದರೆ, ಸಭೆಯಲ್ಲಿ ವಿವಿಧ ವಿಚಾರಗಳಲ್ಲಿ ಸಹಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಭೆಯನ್ನು ಬಹಿಷ್ಕರಿಸಿ ಹೊರನಡೆದವು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿಲುವು ಒಪ್ಪಿತವಲ್ಲ. ಅವರು ಸ್ಟಾಲಿನ್‌ನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಧಾರ್ಮಿಕ ಆಚರಣೆ ಮಧ್ಯೆ ಪ್ರವೇಶಿಸುವುದಿಲ್ಲ: ಕೇರಳ ಸರ್ಕಾರ ಧಾರ್ಮಿಕ ಆಚರಣೆ ಮಧ್ಯೆ ಪ್ರವೇಶಿಸುವುದಿಲ್ಲ: ಕೇರಳ ಸರ್ಕಾರ

'ಇದು ತುಂಬಾ ದುರದೃಷ್ಟಕರ. ಇದೇ ಮೊದಲ ಬಾರಿಗೆ ವಿರೋಧಪಕ್ಷಗಳ ಸಲಹೆಯನ್ನು ಸ್ವೀಕರಿಸಿಲ್ಲ' ಎಂದು ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.

ಸರ್ಕಾರದಿಂದ ಪ್ರತಿಕ್ರಿಯೆ ಬಂದಿಲ್ಲ

ನ.17ರಂದು ಆರು ಮಹಿಳೆಯರ ಜತೆ ಶಬರಿಮಲೆ ದೇವಸ್ಥಾನಕ್ಕೆ ತೆರಳುವುದಾಗಿ ಕೇರಳ ಸರ್ಕಾರಕ್ಕೆ ಪತ್ರಬರೆದಿದ್ದೇನೆ. ಆದರೆ, ಇದುವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಅದಕ್ಕೆ ಕೇರಳ ಮುಖ್ಯಮಂತ್ರಿ ಮತ್ತು ಡಿಜಿಪಿ ಹೊಣೆಗಾರರು ಎಂದು ಭೂಮಾತಾ ಬ್ರಿಗೇಡ್ ಸಂಸ್ಥಾಪಕಿ ತೃಪ್ತಿ ದೇಸಾಯಿ ಹೇಳಿದ್ದಾರೆ.

English summary
The Kerala government is thinking about to fix separate days for women devotess to enter Sabarimala Temple. BJP and Congress walked out in the All party meeting which was called to discuss Sabarimala issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X