ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ, ಸುಪ್ರೀಂ ತೀರ್ಪು: ಹೆಚ್ಚುತ್ತಿರುವ ಒತ್ತಡ, ಅಡಕತ್ತರಿಯಲ್ಲಿ ಪಿಣರಾಯಿ ಸರಕಾರ

|
Google Oneindia Kannada News

Recommended Video

Sabarimala Verdict : ಪಿಣರಾಯಿ ವಿಜಯನ್ ಸರ್ಕಾರಕ್ಕೆ ಹೆಚ್ಚಿದ ಒತ್ತಡ, ಕಾವೇರಿದ ಪ್ರತಿಭಟನೆ | Oneindia Kannada

ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಿರುವ ವಿಚಾರದಲ್ಲಿ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ದ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ತೀರ್ಪಿನ ವಿರುದ್ದ ಮೇಲ್ಮನವಿ ಸಲ್ಲಿಸಲು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಒತ್ತಡ ಹೆಚ್ಚಾಗುತ್ತಿದ್ದು, ಬಿಜೆಪಿ ಅಧಿಕೃತವಾಗಿ ಆಖಾಡಕ್ಕಿಳಿಯುವ ಮೂಲಕ, ಧಾರ್ಮಿಕ ವಿಚಾರದ ಹೋರಾಟವೊಂದು ರಾಜಕೀಯ ಆಯಾಮ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಶಬರಿಮಲೆ ಮಹಿಳೆಯರಿಗೆ ಪ್ರವೇಶ: ಇದು ವಿವಾದದ ಅಂತ್ಯವಲ್ಲ, ಆರಂಭ!ಶಬರಿಮಲೆ ಮಹಿಳೆಯರಿಗೆ ಪ್ರವೇಶ: ಇದು ವಿವಾದದ ಅಂತ್ಯವಲ್ಲ, ಆರಂಭ!

ಶಬರಿಮಲೆ ವಿವಾದ, ಕೇರಳದ ಸಮಸ್ತ ಹಿಂದೂಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗುತ್ತಿದೆ ಎನ್ನುವ ಸಾಮಾಜಿಕ ತಾಣದಲ್ಲಿನ ಪ್ರಚಾರದ ನಡುವೆ, ಕೇರಳದ ನಾಯರ್ ಸೊಸೈಟಿ, ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬೇಕೆಂದು ಆಗ್ರಹಿಸಿದೆ.

ಈಗಾಗಲೇ, ಹಿಂದೂಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಮಂಚೂಣಿಯಲ್ಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಕೂಡಾ, ಮೇಲ್ಮನವಿ ಸಲ್ಲಿಸದೇ ಇರುವ ಕೇರಳ ಸರಕಾರದ ಕ್ರಮದ ವಿರುದ್ದ ಹರಿಹಾಯ್ದಿದಿದೆ. ಭಕ್ತರ ಭಾವನೆಗೆ ಮೊದಲು ಬೆಲೆಕೊಡಿ ಎಂದು ಪಿಣರಾಯಿ ಸರಕಾರವನ್ನು ಆಗ್ರಹಿಸಿದೆ.

ಅಯ್ಯಪ್ಪ ಭಕ್ತರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದ ಸುಪ್ರೀಂ ತೀರ್ಪು ?ಅಯ್ಯಪ್ಪ ಭಕ್ತರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದ ಸುಪ್ರೀಂ ತೀರ್ಪು ?

ಹಿಂದೂಗಳ ಭಾವನೆಗೆ ಅಡ್ಡಿ ಆಗುವಂತಿದ್ದರೆ, ಅದರ ವಿರುದ್ದ ನಾವು ಹೋರಾಡುತ್ತೇವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಹೇಳಿದೆ. ತಿರುವನಂತಪುರದಲ್ಲಿರುವ ದೇವಸ್ವಂ ಮಂಡಳಿಯ ಕಚೇರಿ ಎದುರು ಬಿಜೆಪಿ ಮಹಿಳಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನಾಯರ್ ಸರ್ವಿಸ್ ಸೊಸೈಟಿ

ನಾಯರ್ ಸರ್ವಿಸ್ ಸೊಸೈಟಿ

ನಾಯರ್ ಸರ್ವಿಸ್ ಸೊಸೈಟಿ ಶಬರಿಮಲೆ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇರಳದ ಪ್ರಭಾವಿ ನಾಯರ್ ಸಮುದಾಯ, ತೀರ್ಪು ಒಂದು ದುರದೃಷ್ಟಕರ ಎಂದು ಹೇಳಿದೆ. ಪಿಣರಾಯಿ ಸರಕಾರ, ಮೇಲ್ಮನವಿ ಸಲ್ಲಿಸಬೇಕೆಂದು ಒತ್ತಡ ಹೇರಿರುವುದು, ಸರಕಾರಕ್ಕೆ ನುಂಗಲಾರದ ತುತ್ತಾಗಿದೆ.

ಪಿಣರಾಯಿ ಸರಕಾರದ ವಿರುದ್ದ ಕಿಡಿಕಾರಿರುವ ನಾಯರ್ ಸೊಸೈಟಿ

ಪಿಣರಾಯಿ ಸರಕಾರದ ವಿರುದ್ದ ಕಿಡಿಕಾರಿರುವ ನಾಯರ್ ಸೊಸೈಟಿ

ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಪಿಣರಾಯಿ ಸರಕಾರದ ವಿರುದ್ದ ಕಿಡಿಕಾರಿರುವ ನಾಯರ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ನಾಯರ್, ನಾವು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಸಮಾನತೆ ಬೇಕು ಎನ್ನುವುದಕ್ಕೂ ನಮ್ಮ ಸಹಮತವಿದೆ, ಆದರೆ ಈ ವಿಚಾರದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವನ್ನು ರದ್ದುಗೊಳಿಸುವುದು ತಪ್ಪು ಎಂದು ನಾಯರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಬರಿಮಲೆ ತೀರ್ಪು: ಕೇರಳ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ ಇಲ್ಲ!ಶಬರಿಮಲೆ ತೀರ್ಪು: ಕೇರಳ ಸರ್ಕಾರದಿಂದ ಮರುಪರಿಶೀಲನಾ ಅರ್ಜಿ ಇಲ್ಲ!

ಕೇರಳ ಕಾಂಗ್ರೆಸ್ ಘಟಕದ ನಿಯೋಗ

ಕೇರಳ ಕಾಂಗ್ರೆಸ್ ಘಟಕದ ನಿಯೋಗ

ತಿರುವಾಂಕೂರು ದೇವಸ್ವಂ ಮಂಡಳಿಯ ಸದಸ್ಯರ ಜೊತೆ ಮಾತುಕತೆ ನಡೆಸಿದ ಕೇರಳ ಕಾಂಗ್ರೆಸ್ ಘಟಕದ ನಿಯೋಗ, ಹಿಂದೂಗಳ ಭಾವನೆಯ ಪರವಾಗಿ ನಾವು ನಿಲ್ಲುತ್ತೇವೆ. ಬಿಜೆಪಿಗೆ ನಿಜವಾಗಿಯೂ ಹಿಂದೂಗಳ ಭಾವನೆಯ ಮೇಲೆ ನಂಬಿಕೆಯಿದ್ದರೆ, ಸುಪ್ರೀಂಕೋರ್ಟ್ ತೀರ್ಪನ್ನು ಬದಿಗೆ ಸರಿಸಲು ಕಾನೂನು ರೂಪಿಸುವಂತೆ ಕೇಂದ್ರಕ್ಕೆ ಒತ್ತಡ ತರಲಿ ಎಂದು ಆಗ್ರಹಿಸಿದೆ.

ಶಬರಿಮಲೆ ದೇವಾಲಯದ ಮೇಲೆ ಗೌರವವಿಲ್ಲ

ಶಬರಿಮಲೆ ದೇವಾಲಯದ ಮೇಲೆ ಗೌರವವಿಲ್ಲ

ಭಕ್ತರು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಎಲ್ಡಿಎಫ್ ಸರಕಾರಕ್ಕೆ ಶಬರಿಮಲೆ ದೇವಾಲಯದ ಮೇಲೆ ಗೌರವವಿಲ್ಲ. ಹಿಂದೂಗಳ ಸಂಪ್ರದಾಯಕ್ಕೆ ಬೆಲೆಕೊಡಬೇಕು ಎನ್ನುವ ಕನಿಷ್ಠ ಜ್ಞಾನ ಪಿಣರಾಯಿ ಸರಕಾರಕ್ಕೆ ಇಲ್ಲ. ದೇವಸ್ಥಾನದ ಮಹತ್ವಕ್ಕೆ ಧಕ್ಕೆ ತರಬೇಕು ಎನ್ನುವ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ ಹೇಳಿದ್ದಾರೆ.

ಶಬರಿಮಲೆ ದೇವಸ್ಥಾನದ ವಿವಾದ: ಕಾನೂನು ಹೋರಾಟದ ಟೈಮ್‌ಲೈನ್ಶಬರಿಮಲೆ ದೇವಸ್ಥಾನದ ವಿವಾದ: ಕಾನೂನು ಹೋರಾಟದ ಟೈಮ್‌ಲೈನ್

ಹೆಚ್ಚುತ್ತಿರುವ ಒತ್ತಡ, ಅಡಕತ್ತರಿಯಲ್ಲಿ ಪಿಣರಾಯಿ ಸರಕಾರ

ಹೆಚ್ಚುತ್ತಿರುವ ಒತ್ತಡ, ಅಡಕತ್ತರಿಯಲ್ಲಿ ಪಿಣರಾಯಿ ಸರಕಾರ

ಈ ನಡುವೆ, ವಿವಿಧ ಸಂಘಟನೆಗಳು ಶಬರಿಮಲೆ ಹೋರಾಟಕ್ಕೆ ಧುಮುಕುತ್ತಿದ್ದಾರೆ. ಪ್ರಮುಖವಾಗಿ ಮಹಿಳೆಯೆರೇ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳುತ್ತಿದ್ದಾರೆ. ಸಮಾನತೆ ನಮಗೆ ಬೇಕಾದರೂ, ನಮ್ಮ ಧಾರ್ಮಿಕ ನಂಬಿಕೆಯೂ ನಮಗೆ ಅಷ್ಟೇ ಮುಖ್ಯ. ಕೇರಳ ಸರಕಾರ ಮೇಲ್ಮನವಿ ಸಲ್ಲಿಸಬೇಕೆನ್ನುವ ಸಾರ್ವಜನಿಕರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ, ಇದೊಂದು ರಾಜಕೀಯ ವಿಚಾರವಾಗಿ ತಿರುಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು?ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು?

English summary
Sabarimala Supreme Court verdict: BJP and Congress trying to encash the SC ruling. BJP Gears Up to Fight the Sabarimala Verdict and even Kerala Congress leaders met devaswam board officials and said, Congress is always favor of people's sentiments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X