ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ಆದಾಯ 78.92 ಕೋಟಿಗೆ ಏರಿಕೆ: ತೀರ್ಥ ಯಾತ್ರಿಕರ ಸಂಖ್ಯೆ 10.35 ಲಕ್ಷಕ್ಕೂ ಅಧಿಕ

|
Google Oneindia Kannada News

ತಿರುವನಂತಪುರಂ, ಡಿಸೆಂಬರ್‌ 26: ಈ ಬಾರಿ ಶುಕ್ರವಾರ ನಡೆದ ಮಂಡಲ ಪೂಜೆಯವರೆಗೆ ಸುಮಾರು 10.35 ಲಕ್ಷ ತೀರ್ಥ ಯಾತ್ರಿಕರು ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. "ಈ ವರ್ಷದ ಶಬರಿಮಲೆ ತೀರ್ಥ ಯಾತ್ರೆಯ ಸಂದರ್ಭದಲ್ಲಿ ಬೋರ್ಡ್ ಸುಮಾರು 78.92 ಕೋಟಿ ರೂಪಾಯಿ ಆದಾಯವನ್ನು ಗಳಿಸಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ ಆನಂದ ಗೋಪಾನ್‌ ತಿಳಿಸಿದ್ದಾರೆ.

2019 ರಲ್ಲಿ ಕೊರೊನಾ ವೈರಸ್‌ ಸೋಂಕು ದೇಶದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲು ಶಬರಿಮಲೆಯ ಆದಾಯವು 156 ಕೋಟಿ ರೂಪಾಯಿ ಆಗಿದೆ. ಆದರೆ ಕೊರೊನಾ ವೈರಸ್‌ ಸೋಂಕಿನ ಸಂದರ್ಭದಲ್ಲಿದ್ದ ನಿರ್ಬಂಧದ ಹಿನ್ನೆಲೆ ಆದಾಯವು 8.39 ಕೋಟಿಗೆ ಇಳಿಕೆ ಕಂಡಿದೆ. ಆದರೆ ಬಳಿಕ ನಿರ್ಬಂಧವನ್ನು ಸಡಿಲಿಕೆ ಮಾಡಿದ್ದು ಈ ಬಾರಿ 10.35 ಲಕ್ಷ ತೀರ್ಥಯಾತ್ರಿಕರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಹಾಗೆಯೇ ಆದಾಯವು 78.92 ಕೋಟಿ ರೂಪಾಯಿ ಏರಿಕೆ ಆಗಿದೆ.

ಶಬರಿಮಲೆ ಯಾತ್ರಿಕರಿಕೆ ಖುಷಿ ಸುದ್ದಿ: ನಿಯಮ ಸಡಿಲಿಕೆಶಬರಿಮಲೆ ಯಾತ್ರಿಕರಿಕೆ ಖುಷಿ ಸುದ್ದಿ: ನಿಯಮ ಸಡಿಲಿಕೆ

ಅರ್ವಾಣ (ಪ್ರಸಾದ) ವನ್ನು ಮಾರಾಟ ಮಾಡುವ ಮೂಲಕ ಟಿಡಿಬಿ ಸುಮಾರು 31.25 ಕೋಟಿ ರೂಪಾಯಿ ಪಡೆದುಕೊಂಡಿದೆ. ಅಪ್ಪಮ್‌ (ಪ್ರಸಾದ) ಮಾರಾಟ ಮಾಡುವ ಮೂಲಕ 3.52 ಕೋಟಿ ರೂಪಾಯಿಯನ್ನು ಟಿಡಿಬಿ ಸಂಗ್ರಹ ಮಾಡಿದೆ. ಕನ್ನಿಕ ಸಮರ್ಪನೆ ಮೂಲಕ ಸುಮಾರು 29.30 ಕೋಟಿ ರೂಪಾಯಿಯನ್ನು ಸಂಗ್ರಹ ಮಾಡಿದೆ. ಇನ್ನು ಕಾಣಿಕೆಯ ಮೂಲಕ ಬಂದ ಹಣದ ಒಂದು ಭಾಗದ ಎಣಿಕೆ ಇನ್ನೂ ಉಳಿದಿರುವ ಕಾರಣ ದೇವಾಲಯದ ಆದಾಯವು ಇನ್ನಷ್ಟು ಹೆಚ್ಚು ಆಗಲಿದೆ.

 Sabarimala revenue touches Rs 78.92 crore, 10.35 lakh pilgrims visited Temple

ಮಕರವಿಳಕ್ಕು ಹಬ್ಬಕ್ಕಾಗಿ ಡಿಸೆಂಬರ್‌ 30 ರ ಸಂಜೆ ಐದು ಗಂಟೆಯಿಂದ ದೇವಾಲಯ ತೆರೆದಿರಲಿದೆ. ಆ ದಿನ ಯಾತ್ರಾರ್ಥಿಗಳಿಗೆ ಪ್ರವೇಶ ನೀಡಲಾಗುವುದಿಲ್ಲ. ಆದರೆ ಯಾತ್ರಾರ್ಥಿಗಳಿಗೆ ಡಿಸೆಂಬರ್ 31 ರಿಂದ ಜನವರಿ 19 ರವರೆಗೆ "ದರ್ಶನ" ಕ್ಕೆ ಅವಕಾಶ ನೀಡಲಾಗುತ್ತದೆ. ಜನವರಿ 11ರಂದು ಎರುಮೇಲಿ ಪೆಟ್ಟ ತುಳ್ಳಲ್ ನಡೆಯಲಿದ್ದು, ಅಂಬಲಪುಳ ಸಂಘದಿಂದ ಬೆಳಗ್ಗೆ ಪೆಟ್ಟ ತುಳ್ಳಲ್ ಹಾಗೂ ಮಧ್ಯಾಹ್ನ ಅಲಂಗಾಡು ತಂಡದಿಂದ ಪೆಟ್ಟ ತುಳ್ಳಲ್ ನಡೆಯಲಿದೆ. ಜನವರಿ 12 ರಂದು ಪಂದಳಂನಿಂದ ತಿರುವಾಭರಣ ಮೆರವಣಿಗೆ ಆರಂಭವಾಗಲಿದೆ. ಜನವರಿ 14 ರಂದು ಸನ್ನಿಧಾನಂ ತಲುಪಲಿದೆ. ಮಕರ ಸಂಕ್ರಮಣ ಪೂಜೆ ಹಾಗೂ ಮಕರ ಜ್ಯೋತಿ ದರ್ಶನ ಜನವರಿ 14 ರ ಸಂಜೆ 6.30 ಯಿಂದ ಆರಂಭ ಆಗಲಿದೆ. ಜನವರಿ 20 ಸಂಜೆ 7 ರಿಂದ ದೇವಾಲಯವು ಮುಚ್ಚಲಿದೆ.

ಭಾರಿ ಮಳೆ ಸಂದರ್ಭದಲ್ಲಿ ಭಕ್ತರಿಗೆ ಪಂಪಾದಿಂದ ತೆರಳಲು ಅವಕಾಶ: ಎಡಿಎಂಭಾರಿ ಮಳೆ ಸಂದರ್ಭದಲ್ಲಿ ಭಕ್ತರಿಗೆ ಪಂಪಾದಿಂದ ತೆರಳಲು ಅವಕಾಶ: ಎಡಿಎಂ

ಪುಲ್ಲುಮೇಡು ಮಾರ್ಗ ತೆರೆಯಲು ಮನವಿ

ಶಬರಿಮಲೆ ಯಾತ್ರಾರ್ಥಿಗಳಿಗೆ ಪುಲ್ಲುಮೇಡು ಟ್ರೆಕ್ಕಿಂಗ್ ಮಾರ್ಗವನ್ನು ಪುನಃ ತೆರೆಯುವಂತೆ ಟಿಡಿಬಿ ರಾಜ್ಯ ಸರ್ಕಾರವನ್ನು ಕೋರಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ ಆನಂದ ಗೋಪಾನ್‌ ಹೇಳಿದ್ದಾರೆ. ಟ್ರೆಕ್ಕಿಂಗ್‌ಗೆ ಯೋಗ್ಯವಾದ ಮಾರ್ಗವನ್ನು ಮಾಡದಿದ್ದರೆ, ಅದು ಶಾಶ್ವತವಾಗಿ ಮುಚ್ಚಿಹೋಗುತ್ತದೆ ಎಂದು ಹೇಳಿದರು. ಜನವರಿ 5 ರಂದು ತಿರುವನಂತಪುರದಲ್ಲಿ ಉನ್ನತಾಧಿಕಾರ ಸಮಿತಿ ಸಭೆ ನಡೆಯಲಿದ್ದು, ಶಬರಿಮಲೆ ಮಾಸ್ಟರ್ ಪ್ಲಾನ್ ಶೀಘ್ರ ಅನುಷ್ಠಾನಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಲಾಗುವುದು. ಕೆಐಐಎಫ್‌ಬಿ ನಿಧಿ 9 ಕೋಟಿ ರೂಪಾಯಿ ಬಳಸಿಕೊಂಡು ಎರುಮೇಲಿಯಲ್ಲಿ ಸ್ಥಾಪಿಸಲಿರುವ ನೂತನ ಯಾತ್ರಿಗಳ ಆಶ್ರಯ ಕೇಂದ್ರದ ಕಾಮಗಾರಿಯನ್ನು ಜನವರಿ 6 ರಂದು ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್ ಉದ್ಘಾಟಿಸಲಿದ್ದಾರೆ. ಶಬರಿಮಲೆ ದೇಗುಲದಲ್ಲಿ ಹೆಚ್ಚಿನ ಸಡಿಲಿಕೆಯನ್ನು ಘೋಷಿಸಿದ ರಾಜ್ಯ ಸರ್ಕಾರ, ಬೆಟ್ಟದ ದೇಗುಲಕ್ಕೆ ಪ್ರತಿದಿನ 45,000 ಭಕ್ತಾದಿಗಳನ್ನು ಅನುಮತಿಸುವ ದೈನಂದಿನ ಸಂಖ್ಯೆಯನ್ನು 60,000 ಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಆರಾಧಕರ ಸಂಖ್ಯೆ ಹೆಚ್ಚಿದ್ದರೂ ವರ್ಚುವಲ್ ಕ್ಯೂ ವ್ಯವಸ್ಥೆ ಜಾರಿಯಲ್ಲಿರುತ್ತದೆ. (ಒನ್‌ಇಂಡಿಯಾ ಸುದ್ದಿ)

English summary
Sabarimala revenue touches Rs 78.92 crore, 10.35 lakh pilgrims visited Temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X