ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ದೇಗುಲ ಆದಾಯ ಗಳಿಕೆಯಲ್ಲಿ ಗಣನೀಯ ಇಳಿಕೆ

|
Google Oneindia Kannada News

ಶಬರಿಮಲೆ, ಡಿ. 27: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ಬರುವ ಭಕ್ತರ ಸಂಖ್ಯೆಗೆ ವಿಧಿಸಲಾಗಿರುವ ಗರಿಷ್ಠ ಮಿತಿಯನ್ನು ಹೆಚ್ಚಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದ್ದು, ತಿಳಿದಿರಬಹುದು. ಡಿಸೆಂಬರ್ 27ರಿಂದ ಹೊಸ ನಿಯಮ ಜಾರಿಗೆ ಬರಲಿದೆ. ಇದರ ಜೊತೆಗೆ ಡಿ.26ಕ್ಕೆ ಮೊದಲ ಹಂತದ ಶಬರಿಮಲೆ ಯಾತ್ರೆಯ ಮಂಡಲ ಪೂಜೆ ಸಂಪನ್ನಗೊಂಡಿದೆ. ಹೀಗಾಗಿ, ಮೊದಲ ಹಂತದಲ್ಲಿ ಬಂದಿರುವ ಆದಾಯದ ವಿವರಗಳನ್ನು ದೇವಸ್ವಂ ಮಂಡಳಿ ಹಂಚಿಕೊಂಡಿದೆ.

ಡಿಸೆಂಬರ್ 26ರ ಮಂಡಲ ಪೂಜೆ ನಂತರ ದೇವಸ್ಥಾನವನ್ನು ಮುಚ್ಚಲಿದ್ದು, ಡಿಸೆಂಬರ್ 31 ರಿಂದ ಜನವರಿ 19ರ ತನಕ ಮಕರವಿಳಕ್ಕು ಹಬ್ಬದ ಋತು ಆರಂಭವಾಗಲಿದೆ. ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿ, ಕೊವಿಡ್ 19 ನೆಗಟಿವ್ ಇದ್ದ ಭಕ್ತರು ಮಾತ್ರ ಶಬರಿ ಬೆಟ್ಟವನ್ನೇರಬಹುದಾಗಿದೆ. ಈ ಮುಂಚೆ ಆಂಟಿಜನ್ ಪರೀಕ್ಷೆ ವರದಿಯಲ್ಲಿ ನೆಗಟಿವ್ ಎಂದರೆ ಬಂದರೆ ಸಾಕಿತ್ತು. ಆದರೆ, ಈಗ ಹೊಸ ನಿಬಂಧನೆ ಹಾಕಲಾಗಿದೆ.

ಸ್ವಾಮಿ ಅಯ್ಯಪ್ಪನಿಗೆ ಪತ್ರ ತಲುಪಿಸುವ ವಿಶಿಷ್ಟ ಅಂಚೆ ಕಚೇರಿ ಸ್ವಾಮಿ ಅಯ್ಯಪ್ಪನಿಗೆ ಪತ್ರ ತಲುಪಿಸುವ ವಿಶಿಷ್ಟ ಅಂಚೆ ಕಚೇರಿ

ಕೇರಳದಲ್ಲಿ ಶನಿವಾರ, ಡಿ.26ರ ವರದಿಯಂತೆ, 1061ಹೊಸ ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಒಟ್ಟು 735611 ಪ್ರಕರಣಗಳು ದಾಖಲಾಗಿದ್ದು, 668733 ಮಂದಿ ಬಿಡುಗಡೆಯಾಗಿದ್ದಾರೆ. 2951 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ಮೊದಲ ಹಂತದ ದೇಗುಲ ಆದಾಯ ಗಳಿಕೆ ಎಷ್ಟು?

ಮೊದಲ ಹಂತದ ದೇಗುಲ ಆದಾಯ ಗಳಿಕೆ ಎಷ್ಟು?

ಡಿಸೆಂಬರ್ 26ಕ್ಕೆ ಮೊದಲ ಹಂತದ ಮಂಡಲ ಪೂಜೆ ಮುಕ್ತಾಯವಾಗಿದ್ದು, ದೇಗುಲದ ಆದಾಯದಲ್ಲಿ 146 ಕೋಟಿ ರು ಕುಸಿತ ಕಂಡು ಬಂದಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 156 ಕೋಟಿ ರು ಗಳಿಕೆಯಾಗಿತ್ತು. ಈ ವರ್ಷ ಕೊರೊನಾ ದೆಸೆಯಿಂದ ಕೇವಲ 9.09 ಕೋಟಿ ರು ಗಳಿಕೆಯಾಗಿದೆ. ದೇಗುಲದ ದೈನಂದಿನ ಖರ್ಚು ವೆಚ್ಚವೇ 50 ಲಕ್ಷ ರು ಮೀರುತ್ತದೆ. ಹೀಗಾಗಿ, ತಿರುವಾಂಕೂರು ದೇವಸ್ವಂ ಮಂಡಳಿಗೆ ಭಾರಿ ಹೊಡೆತ ಬಿದ್ದಿದೆ.

ಭಕ್ತಾದಿಗಳ ಸಂಖ್ಯೆಯಲ್ಲಿ ಇಳಿಮುಖ

ಭಕ್ತಾದಿಗಳ ಸಂಖ್ಯೆಯಲ್ಲಿ ಇಳಿಮುಖ

ಕೊವಿಡ್ 19 ಕಾರಣದಿಂದ ಈ ಬಾರಿ ಭಕ್ತರ ಸಂಖ್ಯೆ ಭಾರಿ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಜೊತೆಗೆ ದೇಗುಲ ಪ್ರವೇಶವನ್ನು ನಿರ್ಬಂಧಿಸಿ, ಕಡಿಮೆ ಸಂಖ್ಯೆಯಲ್ಲಿ ಭಕ್ತಾದಿಗಳಿಗೆ ಅವಕಾಶ ನೀಡಲಾಗಿತ್ತು.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ ಬರುವ ಭಕ್ತರ ಸಂಖ್ಯೆಗೆ ವಿಧಿಸಲಾಗಿರುವ ಗರಿಷ್ಠ ಮಿತಿಯನ್ನು ಹೆಚ್ಚಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದ ಮೇಲೆ ಆದಾಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.

ಶಬರಿಮಲೆ: ಮಾರ್ಗಸೂಚಿ ಪರಿಷ್ಕರಣೆ, ಭಕ್ತರು ಪಾಲಿಸಬೇಕಾಗಿದ್ದಿಷ್ಟುಶಬರಿಮಲೆ: ಮಾರ್ಗಸೂಚಿ ಪರಿಷ್ಕರಣೆ, ಭಕ್ತರು ಪಾಲಿಸಬೇಕಾಗಿದ್ದಿಷ್ಟು

ದಿನಕ್ಕೆ 1000 ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು

ದಿನಕ್ಕೆ 1000 ಭಕ್ತರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ಸನ್ನಿಧಿಗೆ 1000 ಮಂದಿ ಭಕ್ತರಿಗೆ ಮಾತ್ರ ಬರಲು ಅವಕಾಶ ನೀಡಲಾಗಿತ್ತು. ಈ ಸಂಖ್ಯೆಯನ್ನು ವಾರಾಂತ್ಯದಲ್ಲಿ 2,000ಕ್ಕೇರಿಸಲಾಯಿತು. ಆದರೆ, ಆದಾಯ ಕುಸಿತ ಕಂಡಿದ್ದರಿಂದ 2000 ದಿಂದ 3,000ಕ್ಕೇರಿಸಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿತು. ಕೇರಳ ಹೈಕೋರ್ಟ್ ಕೂಡಾ ಭಕ್ತರ ಸಂಖ್ಯೆಯನ್ನು 5,000ಕ್ಕೇರಿಸಲು ಅನುಮತಿ ನೀಡಿ ಆದೇಶ ಹೊರಡಿಸಿತು.

ಕೇರಳ ಸರ್ಕಾರದ ಆಕ್ಷೇಪ

ಕೇರಳ ಸರ್ಕಾರದ ಆಕ್ಷೇಪ

ಪ್ರತಿದಿನ 5000ಕ್ಕೂ ಅಧಿಕ ಭಕ್ತರ ಪ್ರವೇಶ, ದರ್ಶನಕ್ಕೆ ಅನುಮತಿ ನೀಡಿರುವ ಹೈಕೋರ್ಟ್ ಆದೇಶವನ್ನು ಕೇರಳ ಸರ್ಕಾರ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದೆ. 5000ಕ್ಕೂ ಅಧಿಕ ಭಕ್ತರು ದರ್ಶನ ಪಡೆಯುವುದರಿಂದ ದೇಗುಲದ ಆದಾಯದಲ್ಲಿ ಅಂದಾಜು 50 ಲಕ್ಷ ರು ನಷ್ಟು ಏರಿಕೆ ಕಂಡು ಬಂದಿದೆ ಎಂದು ಮಂಡಳಿ ಅಧ್ಯಕ್ಷ ಎನ್ ವಾಸು ಹೇಳಿದ್ದಾರೆ.

ಕೊವಿಡ್ 19 ನಡುವೆ ದೇಗುಲ ಬಾಗಿಲು ತೆರೆದಿದ್ದು, 289 ಮಂದಿ ವಿವಿಧ ವಿಭಾಗದ ಸಿಬ್ಬಂದಿ ಸೇರಿದಂತೆ 390ಕ್ಕೂ ಅಧಿಕ ಮಂದಿಗೆ ಈ ಋತುವಿನಲ್ಲಿ ಕೊವಿಡ್ 19 ಪಾಸಿಟಿವ್ ಕಂಡು ಬಂದಿದೆ.

ಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆಮನೆಮನೆ ಮಾತಾದ ಗೋಲ್ಡ್ ವಿನ್ನರ್‌ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ

English summary
After the end of first phase of the Sabarimala pilgrimage, the hill temple registered a revenue loss of Rs 146 core compare to previous year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X