ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆಯಲ್ಲಿ ನ.18 ರಿಂದ ಸ್ಪಾಟ್ ಬುಕ್ಕಿಂಗ್ ಆರಂಭ: ಈ ದಾಖಲೆ ಅತ್ಯಗತ್ಯ

|
Google Oneindia Kannada News

ಕೊಚ್ಚಿ, ನವೆಂಬರ್ 17: ವಿಶ್ವವಿಖ್ಯಾತ ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಈಗಾಗಲೇ ವಾರ್ಷಿಕ ತೀರ್ಥಯಾತ್ರೆ ಆರಂಭವಾಗಿದೆ. ಎರಡು ತಿಂಗಳ ಕಾಲ ನಡೆಯುವ ಮಂಡಲ- ಮಕರವಿಳಕ್ಕು (ಮಕರ ಸಂಕ್ರಾಂತಿ) ಉತ್ಸವಕ್ಕಾಗಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ದೇವಸ್ಥಾನ ನವೆಂಬರ್‌ 15 ರಿಂದ ತೆರೆದಿದೆ. ಈ ನಡುವೆ ಭಕ್ತರಿಗೆ ಒಂದು ಸಿಹಿ ಸುದ್ದಿ ಇದೆ.

ಶಬರಿಮಲೆಯ ಅಯ್ಯಪ್ಪನ ದರ್ಶನ ಪಡೆಯಲು ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದ ಅದೆಷ್ಟೊ ಮಂದಿ ಭಕ್ತರು ಇದ್ದಾರೆ. ವರ್ಚುವಲ್ ಕ್ಯೂ ವೆಬ್‌ಸೈಟ್‌ನಲ್ಲಿ ಶಬರಿಮಲೆಯ ದರ್ಶನಕ್ಕೆ ಮುಂಚಿತವಾಗಿ ಬುಕ್ ಮಾಡಲಾಗದ ಭಕ್ತರು ನವೆಂಬರ್‌ 18 ರಿಂದ ಸ್ಪಾಟ್ ಬುಕ್ ಮಾಡಲು ಅವಕಾಶ ನೀಡಲಾಗಿದೆ.

ವಾರ್ಷಿಕ ತೀರ್ಥಯಾತ್ರೆಗೆ ಶಬರಿಮಲೆ ಸಜ್ಜು: ಇಲ್ಲಿದೆ ನೋಡಿ ಮಾರ್ಗಸೂಚಿವಾರ್ಷಿಕ ತೀರ್ಥಯಾತ್ರೆಗೆ ಶಬರಿಮಲೆ ಸಜ್ಜು: ಇಲ್ಲಿದೆ ನೋಡಿ ಮಾರ್ಗಸೂಚಿ

ರಾಜ್ಯ ಸರ್ಕಾರವು ಕೇರಳ ಹೈಕೋರ್ಟ್‌ಗೆ ಮಾಹಿತಿ ನೀಡಿರುವ ಪ್ರಕಾರವಾಗಿ ಶಬರಿಮಲೆ ವಾರ್ಷಿಕ ತೀರ್ಥಯಾತ್ರೆಗೆ ಹೋಗುವ ಭಕ್ತರು ಸ್ಪಾಟ್‌ ಬುಕ್‌ ಮಾಡಲು ಹತ್ತು ಕಡೆಗಳಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹಿಂದೆ ಭಕ್ತರಿಗೆ ಆನ್‌ಲೈನ್‌ ಬುಕ್ಕಿಂಗ್‌ ಮಾತ್ರವಲ್ಲದೇ ಸ್ಪಾಟ್‌ ಬುಕ್ಕಿಂಗ್‌ ವ್ಯವಸ್ಥೆಯನ್ನು ಕೂಡ ಮಾಡುವ ಬಗ್ಗೆ ಕೇರಳ ರಾಜ್ಯ ಸರ್ಕಾರ ಹಾಗೂ ದೇವಸ್ವಂ ಸಮಿತಿಯು ಒಂದು ನಿರ್ಧಾರಕ್ಕೆ ಬರಬೇಕು ಎಂದು ಕೇರಳ ಹೈಕೋರ್ಟ್ ನಿರ್ದೇಶನ ನೀಡಿತ್ತು.

Sabarimala darshan: Spot booking starts on Thursday Nov 18

ಸ್ಪಾಟ್‌ ಬುಕ್ಕಿಂಗ್‌ಗೆ ಬೇಕಾದ ದಾಖಲೆಗಳು ಯಾವುದು?

ಅಯ್ಯಪ್ಪನ ದರ್ಶನಕ್ಕಾಗಿ ವರ್ಚುವಲ್‌ (ಆನ್‌ಲೈನ್‌) ಮೂಲಕ ನೋಂದಣಿ ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಆನ್‌ಲೈನ್‌ ಮೂಲಕ ಬುಕ್‌ ಮಾಡಲು ಸಾಧ್ಯವಾಗದ ಭಕ್ತರಿಗೆ ಶಬರಿಮಲೆಯಲ್ಲಿ ಸ್ಪಾಟ್‌ ಬುಕ್ಕಿಂಗ್‌ ಅವಕಾಶ ಕೂಡಾ ಇದೆ. ಇದಕ್ಕಾಗಿ ಭಕ್ತರು ಕೆಲವು ಅಗತ್ಯ ದಾಖಲೆಗಳನ್ನು ಹೊಂದಿರಬೇಕಾಗು‌ತ್ತದೆ. ಆಧಾರ್‌ ಕಾರ್ಡ್ ಅಥವಾ ವೋಟರ್‌ ಐಡಿ ಅಥವಾ ಪಾಸ್‌ಪೋಟ್‌ ಅನ್ನು ಬಳಸಿಕೊಂಡು ನೀವು ಸ್ಪಾಟ್‌ ಬುಕ್ಕಿಂಗ್‌ ಮಾಡಬಹುದಾಗಿದೆ. ಈ ನಡುವೆ ಆನ್‌ಲೈನ್ ಬುಕಿಂಗ್‌ಗಾಗಿ ಪ್ಲಾಟ್‌ಫಾರ್ಮ್ ಅನ್ನು ಸಹ ನವೀಕರಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ಗೆ ಪಾಸ್‌ಪೋರ್ಟ್‌ಗಳನ್ನು ಕೂಡಾ ಬಳಸಬಹುದಾಗಿದೆ ಎಂದು ಹೇಳಿದೆ.

ಅಯ್ಯಪ್ಪನ ದರ್ಶನಕ್ಕಾಗಿ ವರ್ಚುವಲ್‌ (ಆನ್‌ಲೈನ್‌) ಮೂಲಕ ನೋಂದಣಿ ಮಾಡಿಕೊಂಡ ಭಕ್ತರ ದಾಖಲೆಗಳನ್ನು ಪರಿಶೀಲನೆ ಮಾಡಲು ಹತ್ತಕ್ಕೂ ಅಧಿಕ ಕೌಂಟರ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಭಕ್ತರು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವಾಗಲೇ ಅವರಿಗೆ ನೀಲಕಲ್ಲಿನಲ್ಲಿ ಯಾವ ಸಮಯಕ್ಕೆ, ಯಾವ ದಿನದಂದು ತಮ್ಮ ದಾಖಲೆಗಳನ್ನು ಪ್ರಸ್ತುತ ಪಡಿಸಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಇನ್ನು ವರ್ಚುವಲ್‌ ಮೂಲಕ ನೋಂದಣಿ ಮಾಡಿಕೊಂಡು ಬಳಿಕ ಸಮಯಕ್ಕೆ ಸರಿಯಾಗಿ ನೀಲಕಲ್ಲಿನಲ್ಲಿ ಹಾಜರು ಆಗದ ಭಕ್ತರ ಬದಲಿಗೆ ವರ್ಚುವಲ್‌ ಬುಕ್ಕಿಂಗ್‌ಗೆ ಅವಕಾಶ ದೊರೆಯದ ಭಕ್ತರಿಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಂಡು ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಈ ಭಕ್ತರು ದರ್ಶನ ಅವಕಾಶಕ್ಕಾಗಿ ಕಾಯಬೇಕಾಗಿ ಬರುತ್ತದೆ.

ಇಂದಿನಿಂದ (ನ.15) ಶಬರಿಮಲೆ ದೇವಸ್ಥಾನ ಓಪನ್; ಷರತ್ತು ಅನ್ವಯ!ಇಂದಿನಿಂದ (ನ.15) ಶಬರಿಮಲೆ ದೇವಸ್ಥಾನ ಓಪನ್; ಷರತ್ತು ಅನ್ವಯ!

ಕೋವಿಡ್‌ ನೆಗೆಟಿವ್‌ ವರದಿ
ನೀವು ಈ ತೀರ್ಥಯಾತ್ರೆಗೆ ಹೋಗುವ ಸಂದರ್ಭದಲ್ಲಿ ಆಧಾರ್‌ ಕಾರ್ಡ್ ಹಾಗೂ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿಯನ್ನು ಹೊಂದಿರಬೇಕು. 72 ಗಂಟೆಗಳ ಒಳಗೆ ನೀವು ಕೋವಿಡ್‌ ಪರೀಕ್ಷೆಗೆ ಒಳಗಾಗಿ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಹೊಂದಿರಬೇಕು. ಎರಡೂ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆದುಕೊಂಡವರು, ಲಸಿಕೆ ಪ್ರಮಾಣ ಪತ್ರವನ್ನು ಹೊಂದಿರಬೇಕು. ಆರ್‌ಟಿ-ಲ್ಯಾಂಪ್ ಹಾಗೂ ಆಂಟಿಜೆನ್‌ ಪರೀಕ್ಷೆಯು ನೀಲಕಲ್ಲಿನಲ್ಲಿ ಮಾಡಲಾಗುತ್ತದೆ. ಮೂರು ಗಂಟೆಯ ಒಳಗೆ ಪರೀಕ್ಷೆಯ ವರದಿಯನ್ನು ನೀಡಲಾಗುತ್ತದೆ. ಯಾರಲ್ಲಿ ಲಸಿಕೆ ಪಡೆದ ಪ್ರಮಾಣ ಪತ್ರ ಇರುವುದಿಲ್ಲವೋ ಅಥವಾ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡ ಪ್ರಮಾಣ ಪತ್ರ ಇರುವುದಿಲ್ಲವೋ ಅವರು ಇಲ್ಲಿಯೇ ಕೋವಿಡ್‌ ಪರೀಕ್ಷೆಗೆ ಒಳಗಾಗಬಹುದು. ಇನ್ನು ಆರೋಗ್ಯ ಇಲಾಖೆಯು ಅದಕ್ಕಾಗಿ ಕೇಂದ್ರವನ್ನು ಸ್ಥಾಪನೆ ಮಾಡಿದೆ. ಚೆನ್ನಗುನ್ನೂರು, ತಿರುವಳ್ಳಿ ಹಾಗೂ ಕೋಟಯಂ ರೈಲ್ವೇ ನಿಲ್ದಾಣದಲ್ಲಿ ಹಾಗೂ ತೀರ್ಥಯಾತ್ರೆಯ ಕೇಂದ್ರಗಳಲ್ಲಿ ಈ ವ್ಯವಸ್ಥೆ ಇರುತ್ತದೆ.

(ಒನ್‌ಇಂಡಿಯಾ ಸುದ್ದಿ)

Recommended Video

Rohit Sharma 9 ವರ್ಷಗಳ ಮುಂಚೆಯೇ ಈ ಬಗ್ಗೆ ಹೇಳಿದ್ದರು | Oneindia Kannada

English summary
Sabarimala darshan: Spot booking starts on Thursday Nov 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X