ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ: ಮಕರ ಸಂಕ್ರಾಂತಿಗಾಗಿ ಶಬರಿಮಲೆ ದೇಗುಲ ಮತ್ತೆ ಓಪನ್

|
Google Oneindia Kannada News

ತಿರುವನಂತಪುರಂ, ಜನವರಿ 4: ಮಕರವಿಳಕ್ಕು (ಮಕರ ಸಂಕ್ರಾಂತಿ) ಹಬ್ಬಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲ ಶುಕ್ರವಾರದಿಂದ (ಡಿ.31) ಮತ್ತೆ ತೆರೆಯಲಾಗಿದೆ. ಶಬರಿಮಲೆ ದೇವಸ್ಥಾನದ ದೇವಸ್ವಂ ಮಂಡಳಿಯ ವಕ್ತಾರರು, "ಮಕರವಿಳಕ್ಕು ಹಬ್ಬದ ಕಾರಣ ಶಬರಿಮಲೆಯಲ್ಲಿ ಇಂದು ಭಾರೀ ಜನದಟ್ಟಣೆ ಕಂಡುಬಂದಿದೆ,'' ಎಂದು ಹೇಳಿದರು.

ಮಕರವಿಳಕ್ಕು ಎಂಬುದು ಶಬರಿಮಲೆಯ ದೇಗುಲದಲ್ಲಿ ಮಕರ ಸಂಕ್ರಾಂತಿಯಂದು ನಡೆಯುವ ವಾರ್ಷಿಕ ಹಬ್ಬವಾಗಿದೆ. ಉತ್ಸವವು ತಿರುವಾಭರಣಂ ಮೆರವಣಿಗೆ ಮತ್ತು ಶಬರಿಮಲೆಯ ಬೆಟ್ಟದ ದೇವಾಲಯದಲ್ಲಿ ಒಂದು ಸಭೆಯನ್ನು ಒಳಗೊಂಡಿದೆ.

ಶಬರಿಮಲೆ ದೇವಾಲಯದ ಮೂಲಗಳ ಪ್ರಕಾರ, ದೇವಾಲಯವು ಡಿಸೆಂಬರ್ 30ರಂದು ಸಂಜೆ ತೆರೆಯಲ್ಪಟ್ಟಿದೆ. ಶಬರಿಮಲೆ ದೇವಸ್ಥಾನವನ್ನು ಈ ಹಿಂದೆ ಡಿಸೆಂಬರ್ 26, 2021 ರಂದು ಮಂಡಲ ಪೂಜೆಯ ನಂತರ ಮುಚ್ಚಲಾಗಿತ್ತು. ಜನವರಿ 19 ರಂದು ಮಕರವಿಳಕ್ಕು ಕಾರ್ಯಕ್ರಮದ ನಂತರ ಅದನ್ನು ಮುಚ್ಚಲಾಗುತ್ತದೆ.

Sabarimala Ayyappa Swamy Shrine Reopens for Makaravilakku

ಕರಿಮಲ ಮೂಲಕ ಹಾದು ಹೋಗುವ ಐತಿಹಾಸಿಕ ಎರುಮೇಲಿಯಿಂದ ಶಬರಿಮಲೆ ಅರಣ್ಯದ ಹಾದಿ ಇಂದು ಬೆಳಗ್ಗೆಯಿಂದ ಯಾತ್ರಾರ್ಥಿಗಳಿಗೆ ಮತ್ತೆ ತೆರೆಯಲಾಗಿದೆ. ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಸುಮಾರು 18 ಕಿಲೋಮೀಟರ್‌ಗಳವರೆಗೆ ಯಾತ್ರಾರ್ಥಿಗಳನ್ನು ಕಾಡಿನ ಹಾದಿಯ ಮೂಲಕ ಗುಂಪುಗಳಾಗಿ ಹೋಗಲು ಅನುಮತಿಸಲಾಗಿದೆ.

ಶಬರಿಮಲೆ ಪ್ರವೇಶಿಸಲು ಷರತ್ತುಗಳೇನು?
ದೇವಸ್ಥಾನ ಪ್ರವೇಶಿಸುವವರಿಗೆ 2 ಡೋಸ್ ಲಸಿಕೆ ಕಡ್ಡಾಯ ಜನರು ದೇಗುಲಕ್ಕೆ ಭೇಟಿ ನೀಡಲು ಬಯಸಿದರೆ ಪೂರ್ಣ ವ್ಯಾಕ್ಸಿನೇಷನ್ ಪ್ರಮಾಣಪತ್ರ ಅಥವಾ 72 ಗಂಟೆಗಳಿಗಿಂತ ಹಳೆಯದಾದ ಋಣಾತ್ಮಕ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಎಲ್ಲಾ ಭಕ್ತರು ತಮ್ಮ ಆಧಾರ್ ಕಾರ್ಡ್‌ಗಳನ್ನು ಸಹ ಹಾಜರುಪಡಿಸಬೇಕು ಎಂದು ತಿಳಿಸಿದ್ದಾರೆ.

Sabarimala Ayyappa Swamy Shrine Reopens for Makaravilakku

ಮಂಡಲ ಮತ್ತು ಮಕರವಿಳಕ್ಕು ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆ ಮತ್ತು ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. "ಕೇರಳ ರಾಜ್ಯ ಮಟ್ಟದಲ್ಲಿ ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಚಟುವಟಿಕೆಗಳನ್ನು ಸಂಘಟಿಸಲು ವಿಶೇಷ ಸಭೆಗಳನ್ನು ಕರೆಯಲಾಗಿದೆ. ಪಂಪಾದಿಂದ ಸನ್ನಿಧಾನಂವರೆಗಿನ ಚಿಕಿತ್ಸಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ,'' ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಹಿಂದೆ ಹೇಳಿದ್ದಾರೆ.

"ಅಯ್ಯಪ್ಪ ದೇವಸ್ಥಾನಕ್ಕೆ ಪ್ರಯಾಣಿಸುವಾಗ ಯಾರಿಗಾದರೂ ಅತಿಯಾದ ಹೃದಯ ಬಡಿತ, ಉಸಿರಾಟದ ತೊಂದರೆ ಅಥವಾ ಎದೆನೋವು ಕಂಡುಬಂದರೆ, ಆದ್ಯತೆಯ ಮೇಲೆ ತುರ್ತು ಕೇಂದ್ರಗಳಿಗೆ ಭೇಟಿ ನೀಡಬೇಕು. ತರಬೇತಿ ಪಡೆದ ಸ್ಟಾಫ್ ನರ್ಸ್ ಮತ್ತು ಇತರ ವೈದ್ಯಕೀಯ ಸೌಲಭ್ಯಗಳು ಇಲ್ಲಿ ಲಭ್ಯವಿದೆ,'' ಎಂದು ಆರೋಗ್ಯ ಸಚಿವರು ಹೇಳಿದ್ದರು.

ಶಬರಿಮಲೆ ಸನ್ನಿಧಾನಂ, ಪಂಪಾ, ನಿಲಕ್ಕಲ್, ಚರಲ್ಮೇಡು (ಅಯ್ಯಪ್ಪನ್ ರಸ್ತೆ) ಮತ್ತು ಎರುಮೇಲಿಯಲ್ಲಿ ವಿಶೇಷ ಔಷಧಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ವೀಣಾ ಗೆರೋಜ್ ಭಾನುವಾರ ಹೇಳಿದರು. ಈ ಮಧ್ಯೆ ಶಬರಿಮಲೆ ದೇವಸ್ಥಾನಕ್ಕೆ ಟ್ರೆಕ್ಕಿಂಗ್ ಅನ್ನು ಸ್ವಾಮಿ ಅಯ್ಯಪ್ಪನ್ ರಸ್ತೆಯ ಮೂಲಕ ಮಾತ್ರ ಅನುಮತಿಸಲಾಗುವುದು ಎಂದು ತಿಳಿಸಿದ್ದಾರೆ.

Recommended Video

ತಜ್ಞರ ಜೊತೆ ಮಹತ್ವದ ಸಭೆ ಮಾಡಲಿರುವ ಮುಖ್ಯ ಮಂತ್ರಿ! | Oneindia Kannada

English summary
Kerala: Sabarimala Ayyappa Swamy Temple reopened on Friday (Dec. 31) for the Makaravilakku (Makara Sankranti) festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X