ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಅಯ್ಯಪ್ಪ... ಇದೆಂಥ ಪರೀಕ್ಷೆ! ಹಿಂದಿನ ಬಾಗಿಲಿಂದ ಹೋಗಿ ದರ್ಶನ ಪಡೆಯೋದಾ?!'

|
Google Oneindia Kannada News

Recommended Video

Sabarimala Verdict : ಇಬ್ಬರು ಮಹಿಳೆಯರು ಶಬರಿಮಲೈ ಅಯ್ಯಪ್ಪ ದೇಗುಲ ಪ್ರವೇಶ | ಟ್ವಿಟ್ಟರ್ ಪ್ರತಿಕ್ರಿಯೆ

ತಿರುವನಂತಪುರಂ, ಜನವರಿ 02: 'ಶಬರಿಮಲೆಯ ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರಲ್ಲಿದ್ದಿದ್ದು, ಅಯ್ಯಪ್ಪ ಸ್ವಾಮಿಯ ಮೇಲಿನ ಶುದ್ಧ ಭಕ್ತಿಯೋ, ಪ್ರಚಾರದ ಆಸೆಯೋ, ಅಥವಾ ಕ್ರಾಂತಿ ಎಬ್ಬಿಸುವ ಹುಚ್ಚೋ? ಹಿಂದಿನ ಬಾಗಿಲಿನಿಂದ ಹೋಗಿ ದೇವರ ದರ್ಶನ ಪಡೆಯೋದು ಎಂಥ ಕೀಳುಮಟ್ಟದ ತಂತ್ರ..!' ಇಬ್ಬರು ಮಹಿಳೆಯರು ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಘಟನೆಗೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಪ್ರತಿಕ್ರಿಯೆ ಹೊರಬಂದಿದೆ.

ಈ ನಡೆಯನ್ನು ಕ್ರಾಂತಿ ಎಂದು ಸ್ವಾಗತಿಸಿದವರಿದ್ದಾರೆ. ಆದರೆ ಆ ಸಂಖ್ಯೆ ಕಡಿಮೆ! ಎಂಟು ನೂರು ವರ್ಷಗಳ ನಿಯಮವನ್ನು ಕೇರಳ ಸರ್ಕಾರ ತನ್ನ ಲಾಭಕ್ಕಾಗಿ ಮುರಿದಿದೆ, ದೇವಾಲಯ ಪ್ರವೇಶಿಸಿದ ಮಹಿಳೆಯರು ನಿಜವಾದ ಭಕ್ತರಲ್ಲ ಎಂದು ಹಳಿದವರಿದ್ದಾರೆ.

ಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿ: ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರುಶಬರಿಮಲೆಯಲ್ಲಿ ಇತಿಹಾಸ ಸೃಷ್ಟಿ: ಅಯ್ಯಪ್ಪ ದೇವಾಲಯ ಪ್ರವೇಶಿಸಿದ ಮಹಿಳೆಯರು

ಬಿಂದು ಮತ್ತು ಕನಕದುರ್ಗಾ ಎಂಬ 40 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು ಬುಧವಾರ ಶಬರಿಮಲೆ ದೇವಾಲಯದೊಳಗೆ ಪ್ರವೇಶಿಸಿದ್ದರು. ಈ ಘಟನೆಯ ನಂತರ ದೇವಾಲಯದ ಶುದ್ಧೀಕರಣಕ್ಕಾಗಿ ದೇವಾಲಯದ ಬಾಗಿಲು ಮುಚ್ಚಲಾಗಿದೆ.

ಋತುಮತಿಯಾಗುವ 10 ರಿಂದ 60 ವರ್ಷ ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸದಂತೆ ಕಳೆದ ಎಂಟು ನೂರು ವರ್ಷಗಳಿಂದ ನಿರ್ಬಂಧ ಹೇರಲಾಗಿತ್ತು.

ಆದರೆ ಕಳೆದ ಸೆಪ್ಟೆಂಬರ್ 28 ರಂದು ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪಂಚ ಸದಸ್ಯ ಪೀಠ ಮಹಿಳೆಯರ ಪ್ರವೇಶಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು.

ಶಬರಿಮಲೆ ಪ್ರವೇಶಕ್ಕೆ 'ವನಿತಾ ಮದಿಲ್'; ಬೇಕಲ್ ನಲ್ಲಿ ಕಲ್ಲುತೂರಾಟಶಬರಿಮಲೆ ಪ್ರವೇಶಕ್ಕೆ 'ವನಿತಾ ಮದಿಲ್'; ಬೇಕಲ್ ನಲ್ಲಿ ಕಲ್ಲುತೂರಾಟ

ಇದೀಗ ಮಹಿಳೆಯರ ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಕೆಲವರು ಈ ನಡೆಯನ್ನು ಸ್ವಾಗತಿಸಿದ್ದಾರೆ ಕೂಡ. ಆದರೆ ಸ್ವಾಗತಿಸಿದವರಿಗಿಂತ ಈ ನಡೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಟ್ವೀಟ್ ಗಳೇ ಹೆಚ್ಚಾಗಿ ಕಂಡುಬರುತ್ತಿದೆ.

ಹಿಂದುಗಳೇ ಎದ್ದೇಳಿ!

ಶಬರಿಮಲೆ ಎಂದರೆ ಹಿಂದುಗಳ ನಂಬಿಕೆ ಮತ್ತು ಸಂಪ್ರದಾಯ. ಹಿಂದುತ್ವದ ಬಗ್ಗೆ ಮುಸ್ಲಿಮರು ಮತ್ತು ಕ್ರೈಸ್ತರು ಚಿಂತಿಸುವ ಅಗತ್ಯವಿಲ್ಲ. ನೀವು ನಮ್ಮ ಸಹನೆಯನ್ನು ಶತಮಾನಗಳಿಂದ ಪರೀಕ್ಷಿಸುತ್ತಿದ್ದೀರಿ. ನಾವು ಮತ್ತೆ ಹೋರಾಟಕ್ಕಿಳಿಯುತ್ತೇವೆ. ಮತ್ತು ಹಿಂದು ವಿರೋಧಿ ಶಕ್ತಿಗಳನ್ನು ಸೋಲಿಸುತ್ತೇವೆ ಎಂದು ಬಿಜೆಪಿ ಮುಖಂಡ ಸಿ ಟಿ ರವಿ ಟ್ವೀಟ್ ಮಾಡಿದ್ದಾರೆ.

Array

ಹಿಂದು ಸಂಪ್ರದಾಯವನ್ನು ಹಾಳುಗೆಡವಲಾಗುತ್ತಿದೆ

ವಿದೇಶೀ ಬೆಂಬಲಿತ ಕೇರಳದ ಕಮ್ಯುನಿಸ್ಟ್ ಸರ್ಕಾರ ಹಿಂದು ಸಂಪ್ರದಾಯವನ್ನು ಹಾಳುಗೆಡವುತ್ತಿದೆ. ಇರುಮುಡಿಯಿಲ್ಲದೆ, ಸಂಪ್ರದಾಯ ಪಾಲಿಸದೆ ದೇವಾಲಯಕ್ಕೆ ತೆರಳಿದ ನಕಲಿ ಕಾರ್ಯಕರ್ತರ ಬಗ್ಗೆ ಧಿಕ್ಕಾರವಿದೆ.

ಈ ದೇಶದ ಒಳಗೆ ಮತ್ತು ಹೊರಗೆ ಹಿಂದುಗಳ ನಂಬಿಕೆ ಮತ್ತು ದೇವಾಲಯವನ್ನೇ ಗುರಿಯಾಗಿಸಿದ ಕೆಲವು ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.

ವೈರಲ್ ವಿಡಿಯೋ: ಕೊನೆಗೂ ಶಬರಿಮಲೆ ದೇವಾಲಯ ಪ್ರವೇಶಿಸಿದ ಇಬ್ಬರು ಮಹಿಳೆಯರುವೈರಲ್ ವಿಡಿಯೋ: ಕೊನೆಗೂ ಶಬರಿಮಲೆ ದೇವಾಲಯ ಪ್ರವೇಶಿಸಿದ ಇಬ್ಬರು ಮಹಿಳೆಯರು

ಸುಪ್ರೀಂ ಕೋರ್ಟ್ ಆದೇಶಕ್ಕೆ ಬೆಲೆಯಿಲ್ಲವೇ?

ಟಿವಿ ಚಾನೆಲ್ ವೊಂದರಲ್ಲಿ ಶಬರಿಮಲೆ ದೇವಾಲಯದ ಅರ್ಚಕರು ಹೇಳುತ್ತಿದ್ದರು, ಮಹಿಳೆಯರು ಪ್ರವೇಶಸಿದ್ದಕ್ಕೆ ದೇವಾಲಯವನ್ನು ಶುದ್ಧೀಕರಿಸುತ್ತೇವೆ ಎಂದು. ಹಾಗಾದರೆ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಬೆಲೆಯಿಲ್ಲವೇ? ಈ ಅಸ್ಪೃಶ್ಯತೆ ಮತ್ತು ಸಮಾನತೆಗೆ ಸುಪ್ರೀಂ ಕೋರ್ಟ್ ಏನೆನ್ನುತ್ತದೆ ಎಂದು ಕವಿತಾ ಕೃಷ್ಣನ್ ಪ್ರಶ್ನಿಸಿದ್ದಾರೆ.

ಇದಕ್ಕೆಲ್ಲ ಯಾರು ಹೊಣೆ?

ಶಬರಿಮಲೆ ದೇವಾಲಯವನ್ನು ಮುಚ್ಚಿದ್ದಕ್ಕೆ ಯಾರು ಹೊಣೆ? ದರ್ಶನಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಭಕ್ತರಿಗೆ ಈಗ ವ್ಯವಸ್ಥೆ ಮಂಆಡುವವರು ಯಾರು? ಹಂದು ಸಂಪ್ರದಾಯವನ್ನು ನಾಶಮಾಡಲು ಹವಣಿಸುತ್ತಿರುವ ಸಿಪಿಐಎಂ ಸರ್ಕಾರ ಮತ್ತು ಅರ್ಬನ್ ನಕ್ಸಲರು ಮಾತನಾಡಬೇಕು ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ಕಳ್ಳತನದಲ್ಲಿ ಹೋಗುವ ಅಗತ್ಯವೇನಿತ್ತು?

'ಕೇರಳದ ಸಿಪಿಎಂ ಸರ್ಕಾರ ಮತ್ತು ಪೊಲೀಸರ ಪಿತೂರಿಯಿಂದ ಗುಟ್ಟಾಗಿ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಿಸುವ ಅಗತ್ಯವೇನಿತ್ತು. ಇಂಥ ಕೀಳು ಪ್ರವೃತ್ತಿಯ ತಂತ್ರ ಒಂದು ರಾಜ್ಯ ಸರ್ಕಾರಕ್ಕೆ ತಕ್ಕುದಲ್ಲ' ಎಂದು ರಾಹುಲ್ ಈಶ್ವರ್ ಟ್ವೀಟ್ ಮಾಡಿದ್ದಾರೆ.

ಸ್ವಾರ್ಥಕ್ಕಾಗಿ ದೇವರ ಹೆಸರು

ಯಾರು ನಿಜವಾದ ಭಕ್ತರೋ ಅವರಿಗೆ ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವುದಕ್ಕೆ ತಕರಾರಿಲ್ಲ. ಯಾರು ನಿಜವಾದ ಭಕ್ತರಲ್ಲವೋ ಅವರು ಮಾತ್ರವೇ ದೇವರ ಹೆಸರನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರು ಎಂದಿದ್ದಾರೆ ಆಕಾಶ್ ಬ್ಯಾನರ್ಜಿ

ಇದು ಸಮಾನತೆಯ ಕೂಗಲ್ಲವೇ ಅಲ್ಲ!

ಕಮ್ಯುನಿಸ್ಟ್ ಗಳು ದೇವರಿಲ್ಲದವರು. ಮುಸ್ಲಿಮರು ಹಿಂದು ಸಂಪ್ರದಾಯ ಮತ್ತು ಮೂರ್ತಿ ಪೂಜೆಯನ್ನು ಒಪ್ಪುವವರಲ್ಲ. ಅಂದಮೇಲೆ ಶಬರಿಮಲೆ ಅಯ್ಯಪ್ಪ ದೇವಾಲಯ ಮತ್ತು ಸಂಪ್ರದಾಯದ ಬಗ್ಗೆ ನಿಮಗೇಕೆ ಅಷ್ಟು ಆಸಕ್ತಿ? ಯಾರ ಹಿತಾಸಕ್ತಿ ಕಾಪಾಡಲು ಈ ನಾಟಕ? ಇದು ಸಮಾನತೆಯ ಹೋರಾಟವಲ್ಲ, ಪರಮತದ ಮೇಲಿನ ದ್ವೇಷವಷ್ಟೆ ಎಂದು ಸ್ಮಿತಾ ಬಾರೂಹ್ ಟ್ವೀಟ್ ಮಾಡಿದ್ದಾರೆ.

English summary
Twitter reactions on 2 women enter Sabarimala temple today. Temple shuts for purification rituals. Two women devotees in their 40's had entered the temple in the early morning hours today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X