• search
 • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶಬರಿಮಲೆಯನ್ನುRSS ರಣರಂಗವನ್ನಾಗಿಸಿದೆ: ಪಿಣರಾಯಿ ವಿಜಯನ್

|
   Sabarimala Verdict : ಆರ್ ಆರ್ ಎಸ್ ಎಸ್ ಮೇಲೆ ಆರೋಪ ಹೊರಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

   ತಿರುವನಂತಪುರಂ, ಅಕ್ಟೊಬರ್ 23: ಶಬರಿಮಲೆಯ ಅಯ್ಯಪ್ಪ ದೇವಾಲಯದ ಆವರಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ರಣರಂಗವನ್ನಾಗಿ ಮಾಡುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   "ನಾವು ಸುಪ್ರೀಂ ಕೋರ್ಟ್ ತೀರ್ಪಿಗೆ ಬದ್ಧ ಎಂದು ಕೇರಳ ಸರ್ಕಾರ ಮೊದಲೇ ಹೇಳಿತ್ತು. ಅಂತೆಯೇ ದೇವಾಲಯದಲ್ಲಿ ಸುಪ್ರೀಂ ತೀರ್ಪನ್ನು ಜಾರಿಗೆ ತರಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನೂ ನಾವು ನೀಡಿದ್ದೆವು. ಸರ್ಕಾರವಾಗಲೀ, ಪೊಲೀಸರಾಗಲೀ ಭಕ್ತರನ್ನು ತಡೆಯಲು ಪ್ರಯತ್ನಿಸಿಲ್ಲ. ಆದರೆ ಆರೆಸ್ಸೆಸ್ ಶಬರಿಮಲೆಯನ್ನು ರಣರಂಗವನ್ನಾಗಿ ಮಾಡಲು ಪ್ರಯತ್ನಿಸಿತು" ಎಂದು ವಿಜಯನ್ ಹೇಳಿದರು.

   ಶಬರಿಮಲೆ ಸುಪ್ರೀಂ ತೀರ್ಪು: ನ.13 ರಂದು ಮೇಲ್ಮನವಿ ವಿಚಾರಣೆ

   'ಪ್ರತಿಭಟನಕಾರರು ಮಹಿಳೆಯರ ಮೇಲೆ, ಮಾಧ್ಯಮಗಳ ಮೇಲೆ ಹಲ್ಲೆ ನಡೆಸಿದರು. ಕೇರಳದ ಇತಿಹಾಸದಲ್ಲಿಯೇ ಎಂದಿಗೂ ಹೀಗೆ ಮಾಧ್ಯಮಗಳ ಮೇಲೆ ಹಲ್ಲೆ ನಡೆಯುವ ಕೆಲಸವಾಗಿರಲಿಲ್ಲ' ಎಂದು ಅವರು ವಿಷಾದ ವ್ಯಕ್ತಪಡಿಸಿದರು.

   ತೀರ್ಪಿನ ನಂತರ ಮೊದಲ ಬಾರಿಗೆ ತೆರೆದಿದ್ದ ದೇವಾಲಯ

   ತೀರ್ಪಿನ ನಂತರ ಮೊದಲ ಬಾರಿಗೆ ತೆರೆದಿದ್ದ ದೇವಾಲಯ

   ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕಳೆದ ವಾರ ಮೊದಲ ಬಾರಿಗೆ ಶಬರಿಮಲೆ ಅಯ್ಯಪ್ಪ ದೇವಾಲಯ ಭಕ್ತರಿಗಾಗಿ ತೆರೆಯಲ್ಪಟ್ಟಿತ್ತು. ಈ ಸಂದರ್ಭದಲ್ಲಿ ದೇವಾಲಯದೆದುರು ಪ್ರಕ್ಷುಬ್ಧ ವಾತಾವರಣ ಕಂಡುಬಂದಿತ್ತು. ದೇವಾಲಯ ಪ್ರವೇಶಕ್ಕೆ ಯತ್ನಿಸಿದ ಹಲವು ಮಹಿಳಾ ಭಕ್ತರನ್ನು ತಡೆದ ಘಟನೆಯೂ ನಡೆಸಿತ್ತು.

   ದೇವಾಲಯದೆದುರು ರಣರಂಗ!

   ದೇವಾಲಯದೆದುರು ರಣರಂಗ!

   ಭಕ್ತರಿಗೆ ಮುಕ್ತವಾಗಿದ್ದ ಅಯ್ಯಪ್ಪ ದೇವಾಲಯ ಈ ಬಾರಿ ಎಂದಿನಂತಿರಲಿಲ್ಲ. ಕಾರಣ ಈ ಬಾರಿ ಮಹಿಳೆಯರ ಪ್ರವೇಶಕ್ಕೂ ಅನುಮತಿ ನೀಡಲಾಗಿತ್ತು. ದೇವಾಲಯದ ಒಳಕ್ಕೆ ನುಗ್ಗಲು ಪ್ರಯತ್ನಿಸಿದ ಹಲವು ಮಹಿಳೆಯರನ್ನು ತಡೆದ ಘಟನೆ ವರದಿಯಾಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಮತ್ತು ಕೆಲ ಮಹಿಳೆಯರ ಮೇಲೆ ಹಲ್ಲೆಯೂ ನಡೆದಿತ್ತು.

   ಮತ್ತೆ ಮುಚ್ಚಲಿದೆ ಶಬರಿಮಲೆ ಬಾಗಿಲು... ಐದು ದಿನಗಳಲ್ಲಿ ಆಗಿದ್ದೇನು?

   ಐತಿಹಾಸಿಕ ತೀರ್ಪು

   ಐತಿಹಾಸಿಕ ತೀರ್ಪು

   10 ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಋತುಮತಿಯಾಗುವ ಕಾರಣ ಕೇರಳದ ಶಬರಿಮಲೆ ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ವಯಸ್ಸಿನ ಮಹಿಳೆಯರು ದೇವಾಲಯಕ್ಕೆ ಪ್ರವೇಶಿಸುವುದರಿಂದ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಲಾಗಿತ್ತು. ಈ ನಿರ್ಬಂಧವನ್ನು ಸೆ.28 ರಂದು ಸುಪ್ರೀಂ ಕೋರ್ಟ್ ತೆರವುಗೊಳಿಸಿ ಐತಿಹಾಸಿಕ ತೀರ್ಪು ನೀಡಿತ್ತು.

   50ರ ನಂತರ ಮತ್ತೆ ಬರುತ್ತೇನೆ: ಅಯ್ಯಪ್ಪನಿಗೆ ಒಂಬತ್ತರ ಬಾಲಕಿಯ ಪ್ರಾರ್ಥನೆ!

   ಸುಪ್ರೀಂ ನಲ್ಲಿ ಮೇಲ್ಮನವಿ

   ಸುಪ್ರೀಂ ನಲ್ಲಿ ಮೇಲ್ಮನವಿ

   ಈಗಾಗಲೇ ಈ ತೀರ್ಪಿನ ವಿರುದ್ಧ ಒಟ್ಟು 19 ಮೇಲ್ಮನವಿ ಅರ್ಜಿಗಳು ಸುಪ್ರೀಂ ಅಂಗಳದಲ್ಲಿದ್ದು ನ.13 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾದ ಮೇಲ್ಮನವಿ ವಿಚಾರಣೆಯನ್ನು ಕೋರ್ಟ್ ಕೈಗೆತ್ತಿಕೊಳ್ಳಲಿದೆ. ಅ.17 ರಂದು ದೇವಾಲಯದ ಬಾಗಿಲು ತೆರೆಯುವ ಮೊದಲೇ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯಬೇಕೆಂದು ತುರ್ತು ವಿಚಾರಣೆಗೆ ಭಕ್ತರು ಕೋರಿದ್ದರಾದರೂ, ಅದಕ್ಕೆ ಸುಪ್ರೀಂ ಕೋರ್ಟ್ ಒಲ್ಲೆ ಎಂದಿತ್ತು.

   ಶಬರಿಮಲೆ ಅಯ್ಯಪ್ಪನ ಗರ್ಭಗುಡಿಯ ಮುಂದೆ ಕಣ್ಣೀರಿಟ್ಟ ಕೇರಳ ಪೊಲೀಸ್ ಐಜಿಪಿ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Kerala CM Pinarayi Vijayan on Sabarimala temple issue, said-Kerala government made it clear in front of the Supreme Court that it will implement the verdict. The govt arranged all facilities. Neither govt nor the police tried to block the devotees. RSS tried to make Sabarimala Temple a war zone

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more