ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆ ವಿರುದ್ಧ ದೂರು

|
Google Oneindia Kannada News

ಮಲಪ್ಪುರಂ (ಕೇರಳ), ಫೆಬ್ರವರಿ 11: ಒಂಬತ್ತು ವರ್ಷದ ಬಾಲಕನ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವತ್ತಾರು ವರ್ಷದ ಮಹಿಳೆ ವಿರುದ್ಧ ತೆನ್ಹಿಪ್ಪಲಮ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸ್ಥಳೀಯ ವೈದ್ಯರ ಬಳಿ ಬಾಲಕನು ಈ ವಿಚಾರದ ತಿಳಿಸಿದ ನಂತರ ವಾರದ ಹಿಂದೆ ಘಟನೆ ಬೆಳಕಿಗೆ ಬಂದಿದೆ.

ಆ ಕೂಡಲೆ ಮಕ್ಕಳ ಸಹಾಯವಾಣಿ ಅಧಿಕಾರಿಗಳಿಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಆ ಅಧಿಕಾರಿಗಳು ಬಾಲಕನ ಹೇಳಿಕೆಯನ್ನು ದಾಖಲಿಸಿಕೊಂಡು, ದೂರನ್ನು ಪೊಲೀಸರಿಗೆ ವರ್ಗಾಯಿಸಿದ್ದಾರೆ. ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಮಹಿಳೆ ವಿರುದ್ಧ ಪೊಲೀಸರು ಪೋಕ್ಸೊ ಅಡಿಯಲ್ಲಿ ದೂರು ದಾಖಲಿಸಿದ್ದಾರೆ.

22ರ ಆಕೆಗೆ 17ರ 'ಪತಿ'; ಪೋಕ್ಸೊ ಕಾಯ್ದೆ ಅಡಿ ಜೈಲು ಸೇರಿದಳು ತಾಯಿ22ರ ಆಕೆಗೆ 17ರ 'ಪತಿ'; ಪೋಕ್ಸೊ ಕಾಯ್ದೆ ಅಡಿ ಜೈಲು ಸೇರಿದಳು ತಾಯಿ

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಇದರಿಂದ ಆ ಬಾಲಕನ ಮಾನಸಿಕ ಸ್ಥಿತಿಯೇ ಮೇಲೆ ಪರಿಣಾಮ ಬೀರಿದೆ. ಆರೋಪಿ ಮಹಿಳೆಯು ಬಾಲಕನಿಗೆ ಸಂಬಂಧಿಯೇ ಆಗಿದ್ದು, ಆತನ ಮನೆಯ ಹತ್ತಿರವೇ ವಾಸವಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Sexual Assault

ಸಂತ್ರಸ್ತ ಹಾಗೂ ಆರೋಪಿಯ ಕುಟುಂಬಗಳ ಮಧ್ಯೆ ವ್ಯಾಜ್ಯವಿದೆ. ಈಗ ಮಾಡಿರುವ ಆರೋಪಕ್ಕೂ ಹಾಗೂ ಭಿನ್ನಾಭಿಪ್ರಾಯಕ್ಕೂ ಸಂಬಂಧ ಇದೆಯಾ ಎಂಬುದನ್ನು ಪರಿಶೀಲಿಸಬೇಕು. ಮುಂಬರುವ ದಿನಗಳಲ್ಲಿ ಆರೋಪಿಯ ಹೇಳಿಕೆ ಕೂಡ ದಾಖಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ

ಇತ್ತೀಚೆಗೆ ಎರ್ನಾಕುಲಂನಲ್ಲಿ ಇಂಥದ್ದೇ ಘಟನೆಗೆ ಸಂಬಂಧಿಸಿದಂತೆ ಮಹಿಳೆಯನ್ನು ಬಂಧಿಸಲಾಗಿತ್ತು. ಕ್ಯಾನ್ಸರ್ ಪೀಡಿತ ಒಂಬತ್ತು ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಕೇಳಿಬಂದಿತ್ತು.

English summary
Kerala's Thenhippalam police have registered a case against a 36 year-old woman for allegedly raping a nine-year-old boy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X