ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋಗೆ ಕೊರೊನಾ

|
Google Oneindia Kannada News

ನವದೆಹಲಿ, ಜುಲೈ 15:ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರವೆಸಗಿದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಮುಳಕ್ಕಲ್‌ಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಜಾಮೀನು ನೀಡಿಕೆ ಸಂದರ್ಭದಲ್ಲಿ, ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಷರತ್ತು ಮೀರಿ ಒಮ್ಮೆಯೂ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ, ಜಾಮೀನನ್ನು ರದ್ದುಪಡಿಸಲಾಗಿತ್ತು. ಅವರನ್ನು ಕೂಡಲೇ ಅರೆಸ್ಟ್‌ ಮಾಡುವ ಸಂಬಂಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಲಾಗಿತ್ತು.

ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋಗೆ ಜಾಮೀನು ರದ್ದುಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋಗೆ ಜಾಮೀನು ರದ್ದು

ಆದರೆ ಈ ನಡುವೆಯೇ ಅವರಿಗೆ ಕೊರನಾ ಸೋಂಕು ತಗುಲಿರುವ ಕುರಿತು ಮಾಹಿತಿ ನೀಡಲಾಗಿದೆ. ಜಾಮೀನು ಪಡೆದುಕೊಂಡಿದ್ದರೂ, ಅದರ ನಿಯಮದ ಅನ್ವಯ ಕೋರ್ಟ್‌ಗೆ ಹಾಜರಾಗದಿದ್ದರಿಂದ ಸೋಮವಾರಷ್ಟೇ ಕೋರ್ಟ್‌ ಇವರಿಗೆ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿತ್ತು.

Rape Accused Former Bishop Franco Mulakkal Tests Positive For Coronavirus

ಒಂದು ಬಾರಿ ಕೊರೊನಾ ಲಾಕ್‌ಡೌನ್ ಆಗಿದೆ ಕೋರ್ಟ್‌ಗೆ ಬರಲು ಸಾಧ್ಯವಿಲ್ಲ ಎಂದಿದ್ದರು, ಬಳಿಕ ತನ್ನ ಸ್ನೇಹಿತರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಕಾರಣ ನಾನೂ ಕೂಡ ಕ್ವಾರಂಟೈನ್‌ನಲ್ಲಿದ್ದೇನೆ ಎಂದು ಸಬೂಬು ಹೇಳಿದ್ದರು.

ಫ್ರಾಂಕೋ ಮುಳಕ್ಕಲ್ ಅವರು 2014 ರಿಂದ 2016ರ ನಡುವೆ ತಮ್ಮ ಮೇಲೆ 13 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ಆರೋಪ ಮಾಡಿದ್ದರು. ರಾಜಕೀಯ ಮತ್ತು ಹಣ ಬಲದಿಂದ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿರುವ ಅವರನ್ನು ಶಿಕ್ಷಿಸಿ, ತನಗೆ ನ್ಯಾಯ ಒದಗಿಸಲು ಮಧ್ಯ ಪ್ರವೇಶ ಮಾಡಬೇಕು ಎಂದು ವ್ಯಾಟಿಕನ್‌ಗೂ ಮನವಿ ಸಲ್ಲಿಸಿದ್ದರು. ಕೋರ್ಟ್‌ ಜಾಮೀನು ನೀಡಿತ್ತು.

English summary
Former Jalandhar Bishop Franco Mulakkal, accused of raping a nun in Kerala, has tested positive for coronavirus, a Health Department official said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X