India
  • search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತಾಂಧ ಶಕ್ತಿಗಳ ವಿರುದ್ಧ ಒಂದಾಗಿ: ಕೇರಳ ಸಿಎಂ

|
Google Oneindia Kannada News

ತಿರುವನಂತಪುರಂ, ಜೂ. 7: ಪ್ರವಾದಿ ಮೊಹಮ್ಮದ್ ಪೈಗಂಬರ್‌ ವಿರುದ್ಧ ಬಿಜೆಪಿ ನುಪೂರ್‌ ಶರ್ಮಾ ಹಾಗೂ ನವೀನ್‌ ಕುಮಾರ್‌ ಜಿಂದಾಲ್‌ ನೀಡಿರುವ ವಿವಾದಾತ್ಮಕ ಹೇಳಿಕೆಗಳ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯೆ ನೀಡಿದ್ದಾರೆ. ಮಂಗಳವಾರ ಸಂಘ ಪರಿವಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮತಾಂಧ ಶಕ್ತಿಗಳ ವಿರುದ್ಧ ಸರ್ವಾನುಮತದಿಂದ ಧ್ವನಿ ಎತ್ತುವಂತೆ ಕೇರಳ ಮುಖ್ಯಮಂತ್ರಿ ಜನರನ್ನು ಒತ್ತಾಯಿಸಿದ್ದಾರೆ. ಪ್ರವಾದಿ ಮೊಹಮ್ಮದ್ ಪೈಗಂಬರ್‌ ಅವರ ವಿರುದ್ಧ ಬಿಜೆಪಿ ಇಬ್ಬರು ಈ ವಕ್ತಾರರು ಮಾಡಿದ ಅವಹೇಳನಕಾರಿ ಹೇಳಿಕೆಗಳ ಮೂಲಕ ಸಂಘ ಪರಿವಾರವು ನಮ್ಮ ಪೂಜ್ಯ ಜಾತ್ಯತೀತ ಪ್ರಜಾಪ್ರಭುತ್ವವನ್ನು ಪ್ರಪಂಚದ ಮುಂದೆ ಮತ್ತೊಮ್ಮೆ ಅವಮಾನಿಸಿದೆ. ಮತಾಂಧ ಶಕ್ತಿಗಳ ವಿರುದ್ಧ ಒಮ್ಮತದ ಧ್ವನಿ ಎತ್ತಲು ಇದು ಸಮಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಟ್ವೀಟ್ ಮಾಡಿದ್ದಾರೆ.

ಪ್ರವಾದಿ ಅವಹೇಳನ; ಹಲವು ರಾಷ್ಟ್ರಗಳ ಖಂಡನೆ ಪ್ರವಾದಿ ಅವಹೇಳನ; ಹಲವು ರಾಷ್ಟ್ರಗಳ ಖಂಡನೆ

"ಪ್ರವಾದಿ ಮೊಹಮ್ಮದ್ ಪೈಗಂಬರ್‌ ವಿರುದ್ಧದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಹಲವಾರು ಗಲ್ಫ್ ರಾಷ್ಟ್ರಗಳು ಪ್ರತಿಭಟನೆಯ ಭಾಗವಾಗಿ ಸೇರಿಕೊಂಡಿದ್ದರಿಂದ ಆರ್‌ಎಸ್‌ಎಸ್ ದೇಶವನ್ನು ಮುಜುಗರದ ಸ್ಥಿತಿಗೆ ತಂದಿದೆ ಎಂದು ಮುಖ್ಯಮಂತ್ರಿಗಳು ಸೋಮವಾರ ಹೇಳಿದ್ದರು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ದ್ವೇಷ ಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ, ಪ್ರವಾದಿ ವಿರುದ್ಧದ ದ್ವೇಷದ ಹೇಳಿಕೆಗಳು ಸಂಘ ಪರಿವಾರದ ಅಜೆಂಡಾದ ಒಂದು ಭಾಗವಾಗಿದೆ. ಈ ಬಗೆಯ ಟೀಕೆಗಳು ಸಾಮಾಜಿಕ ಭದ್ರತೆ ಮಾತ್ರವಲ್ಲದೆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತವೆ" ಎಂದು ಹೇಳಿದರು.

ಪ್ರವಾದಿ ಕುರಿತ ಹೇಳಿಕೆಗೆ ಭಾರೀ ಪ್ರತಿಭಟನೆ ಮತ್ತು ಖಂಡನೆಗೆ ಕಾರಣವಾದ ವಿವಾದಾತ್ಮಕ ಹೇಳಿಕೆಗಳ ನಂತರ ಬಿಜೆಪಿ ಭಾನುವಾರ ತನ್ನ ವಕ್ತಾರರಾದ ನುಪೂರ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ. ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟಿಸಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದದ ಬಗ್ಗೆ ಮಾತನಾಡುವಾಗ ಶರ್ಮಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು ಎಂದು ವರದಿಯಾಗಿತ್ತು.

ನೂಪುರ್ ಶರ್ಮಾ ವಿವಾದ; ಕುವೈತ್ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನ ಮಾಯ ನೂಪುರ್ ಶರ್ಮಾ ವಿವಾದ; ಕುವೈತ್ ಮಾರುಕಟ್ಟೆಯಲ್ಲಿ ಭಾರತದ ಉತ್ಪನ್ನ ಮಾಯ

ಈ ಆಕ್ಷೇಪಾರ್ಹ ಹೇಳಿಕೆಗಳು ಕುವೈತ್, ಇರಾನ್, ಕತಾರ್, ಸೌದಿ ಅರೇಬಿಯಾ, ಓಮನ್, ಲಿಬಿಯಾ, ಮಾಲ್ಡೀವ್ಸ್, ಇಂಡೋನೇಷ್ಯಾ, ಯುಎಇ, ಬಹ್ರೇನ್, ಜೋರ್ಡಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಸೇರಿದಂತೆ ಗಲ್ಫ್ ರಾಷ್ಟ್ರಗಳಿಂದ ತೀವ್ರ ಟೀಕೆಗಳಿಗೆ ಕಾರಣವಾಗಿದ್ದವು. ಕೆಲವು ಭಾಗಗಳಲ್ಲಿ ಟ್ವಿಟರ್ ಬಳಕೆದಾರರು ಈ ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಒತ್ತಾಯಿಸಿದ್ದರು.

Raise Unanimous Voice Against The Forces Of Bigotry Says Pinarayi Vijayan

ಏತನ್ಮಧ್ಯೆ, ನುಪೂರ್‌ ಶರ್ಮಾ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಿದ ಸ್ವಲ್ಪ ಸಮಯದ ನಂತರ, ಅವರು ಕ್ಷಮೆಯಾಚಿಸಿದರು, ಟ್ವೀಟ್‌ನಲ್ಲಿ "ಯಾರನ್ನೂ ನೋಯಿಸುವುದು ನನ್ನ ಉದ್ದೇಶವಲ್ಲ" ಎಂದು ಬರೆದಿದ್ದಾರೆ, "ನಾನು ಶಿವನ ವಿರುದ್ಧ ಪದೇ ಪದೇ ಅವಮಾನಿಸುವುದನ್ನು ಸಹಿಸಲಾಗಲಿಲ್ಲ. ನಾನು ಕೋಪದಿಂದ ಕೆಲವು ವಿಷಯಗಳನ್ನು ಹೇಳಿದ್ದೇನೆ ಅಷ್ಟೇ. ನನ್ನ ಮಾತುಗಳು ಯಾರಿಗಾದರೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದರೆ ನಾನು ಹಿಂಪಡೆಯುತ್ತೇನೆ ಎಂದು ಹೇಳಿದ್ದರು.

English summary
Kerala Chief Minister Pinarayi Vijayan on Tuesday hit out Sangh Parivar over the controversial statements of BJP Nupur Sharma and Naveen Kumar Jindal against the Prophet Mohammed Pygambar and called for raise unanimous voice against the forces of bigotry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X