ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಿವಾಸಿ ಮಕ್ಕಳ ಆನ್‌ಲೈನ್‌ ತರಗತಿಗಾಗಿ ಟಿವಿ ಕೊಟ್ಟ ರಾಹುಲ್

|
Google Oneindia Kannada News

ತಿರುವನಂತಪುರಂ, ಜುಲೈ 02 : ಕೇರಳದ ವಯನಾಡು ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಆದಿವಾಸಿ ವಿದ್ಯಾರ್ಥಿಗಳ ಆನ್‌ಲೈನ್ ತರಗತಿಗಾಗಿ 175 ಸ್ಮಾರ್ಟ್‌ ಟಿವಿಗಳನ್ನು ನೀಡಿದ್ದಾರೆ. ಇದಕ್ಕೂ ಮೊದಲು 50 ಟಿವಿಗಳನ್ನು ನೀಡಿದ್ದರು.

Recommended Video

Facebook brings a new Update to reduce sharing of Fake news | Oneindia Kannada

ಕೊರೊನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ಕೇರಳದಲ್ಲಿ ಆನ್‌ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ವಯನಾಡು ಕ್ಷೇತ್ರದ ಕಲ್ಪೆಟ್ಟೆ ಪಟ್ಟಣದ ಆದಿವಾಸಿ ವಿದ್ಯಾರ್ಥಿಗಳ ತರಗತಿಗಾಗಿ ಟಿವಿಗಳನ್ನು ನೀಡಲಾಗಿದೆ.

 ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ

ಕೇರಳ ಸರ್ಕಾರ 'ಫಸ್ಟ್ ಬೆಲ್' ಎಂಬ ಕಾರ್ಯಕ್ರಮದಡಿ ಆನ್‌ಲೈನ್ ತರಗತಿಗಳನ್ನು ನಡೆಸುತ್ತದೆ. ಕೆಐಟಿಇ ವಿಕ್ಟರ್ಸ್ ಸೇರಿದಂತೆ ವಿವಿಧ ಟಿವಿ ಚಾನೆಲ್‌ಗಳಲ್ಲಿ ಈ ತರಗತಿಗಳು ನೇರ ಪ್ರಸಾರವಾಗುತ್ತದೆ. ಆದರೆ, ಆದಿವಾಸಿ ವಿದ್ಯಾರ್ಥಿಗಳಿಗೆ ಟಿವಿಗಳ ವ್ಯವಸ್ಥೆ ಇರಲಿಲ್ಲ.

7ನೇ ತರಗತಿ ತನಕ ಆನ್‌ಲೈನ್ ಕ್ಲಾಸ್ ಇಲ್ಲ 7ನೇ ತರಗತಿ ತನಕ ಆನ್‌ಲೈನ್ ಕ್ಲಾಸ್ ಇಲ್ಲ

Rahul Gandhi Provided 175 Smart TVs To Tribal Students

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ರಾಹುಲ್ ಗಾಂಧಿ ಈ ಕುರಿತು ಪತ್ರವನ್ನು ಬರೆದಿದ್ದರು. ಆದಿವಾಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವುದಾಗಿ ಹೇಳಿದ್ದರು. ಬುಧವಾರ 175 ಟಿವಿಗಳನ್ನು ವಿದ್ಯಾರ್ಥಿಗಳಿಗಾಗಿ ಕಳುಹಿಸಿಕೊಡಲಾಗಿದೆ. ರಾಹುಲ್ ಗಾಂಧಿ ಜನ್ಮದಿನಾಚರಣೆ ದಿನವಾದ ಜೂನ್ 19ರಂದು 50 ಟಿವಿಗಳನ್ನು ನೀಡಲಾಗಿತ್ತು.

ಕೋವಿಡ್ ನಂತರದ ಬದಲಾವಣೆ: ಕ್ರಾಂತಿಕಾರಿ ಹೆಜ್ಜೆ ಇಟ್ಟ ಕೇರಳಕೋವಿಡ್ ನಂತರದ ಬದಲಾವಣೆ: ಕ್ರಾಂತಿಕಾರಿ ಹೆಜ್ಜೆ ಇಟ್ಟ ಕೇರಳ

ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದ ರಾಹುಲ್ ಗಾಂಧಿ ಆನ್‌ಲೈನ್ ಶಿಕ್ಷಣಕ್ಕಾಗಿ ಎಷ್ಟು ಮನೆಗಳಿಗೆ ಟಿವಿ, ಸ್ಮಾರ್ಟ್‌ ಪೋನ್ ಅಗತ್ಯವಿದೆ ಎಂದು ವರದಿ ಕೇಳಿದ್ದರು. ಜಿಲ್ಲಾಡಳಿತ ಆದಿವಾಸಿಗಳು ಇರುವ ಮನೆಗಳ ಪಟ್ಟಿಯನ್ನು ಕಳುಹಿಸಿಕೊಟ್ಟಿತ್ತು.

English summary
Congress leader and Wayanad MP Rahul Gandhi has provided 175 smart TVs to tribal students in Kerala’s Wayanad to help them join online classes. Previously he handed over 50 Tvs to the district administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X