ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಜಾರಿ: ರಾಹುಲ್

|
Google Oneindia Kannada News

ಒಂದು ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ. ಸೋಮವಾರವಷ್ಟೇ ಕಾಂಗ್ರೆಸ್ ಅನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತಂದರೆ ಕನಿಷ್ಠ ಆದಾಯ ಖಾತ್ರಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು.

'ಮೋದಿ ಅವರದು ತಮ್ಮ ಗೆಳೆಯರಿಗೆ ಗರಿಷ್ಠ ಆದಾಯ ಖಾತ್ರಿ''ಮೋದಿ ಅವರದು ತಮ್ಮ ಗೆಳೆಯರಿಗೆ ಗರಿಷ್ಠ ಆದಾಯ ಖಾತ್ರಿ'

ಕೊಚ್ಚಿಯಲ್ಲಿ ನಡೆದ ಕಾಂಗ್ರೆಸ್ ನ ಬೂತ್ ಮಟ್ಟದ ಮಹಿಳಾಧ್ಯಕ್ಷರ ಸಮ್ಮೇಳನದಲ್ಲಿ ಮಂಗಳವಾರ ಅವರು ಮಾತನಾಡಿ, ಕಳೆದ ಐದು ವರ್ಷದಲ್ಲಿ ಒಂದಾದದ ಮೇಲೆ ಒಂದು ಸುಳ್ಳು ಹೇಳುವುದರಲ್ಲಿ ನರೇಂದ್ರ ಮೋದಿ ಸಮಯ ಕಳೆದರು. ಅವರು ಯುವಜನರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು ಯಾವುದೂ ಈಡೇರಿಸಲಿಲ್ಲ ಎಂದು ಆರೋಪಿಸಿದ್ದಾರೆ.

Rahul Gandhi promises womens reservation bill if Congress come to power

ಬೂತ್ ಮಟ್ಟದ ಮಹಿಳಾ ಅಧ್ಯಕ್ಷರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಭೆಗೂ ಮುನ್ನ ಕಾಂಗ್ರೆಸ್ ನ ಮುಖಂಡರು ಹಾಗೂ ಸಂಸದರಾಗಿದ್ದ ದಿವಂಗತ ಎಂ.ಐ.ಶನ್ವಾಸ್ ರ ಮನೆಗೆ ರಾಹುಲ್ ಗಾಂಧಿ ಭೇಟಿ ನೀಡಿದರು. ರಾಹುಲ್ ಗಾಂಧಿ ಭೇಟಿ ನಂತರ ಯುಡಿಎಫ್ ಸೀಟು ಹಂಚಿಕೆ ಮಾತುಕತೆ ನಡೆಸುತ್ತದೆ ಎಂದು ಯುಡಿಎಫ್ ಸಂಯೋಜಕರಾದ ಬೆನ್ನಿ ಬೆಹನನ್ ಹೇಳಿದ್ದಾರೆ.

English summary
After promising the minimum income guarantee for rural households, Congress president Rahul Gandhi has now announced the crucial women's reservation bill if his party is voted to power at the Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X