• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತನ್ನನ್ನು ಮೊದಲು ಎತ್ತಿ ಹಿಡಿದಿದ್ದ ನರ್ಸ್ ರಾಜಮ್ಮನನ್ನು ಭೇಟಿಯಾದ ರಾಹುಲ್

|

ತಿರುವನಂತಪುರಂ, ಜೂನ್ 9: ಅಮೇಥಿಯಲ್ಲಿ ಸೋತರೂ, ತನ್ನನ್ನು ಅಭೂತಪೂರ್ವ ಮತಗಳ ಅಂತರದಿಂದ ಗೆಲ್ಲಿಸಿದ್ದ ವಯನಾಡು ಜನತೆಗೆ ಧನ್ಯವಾದ ಸಲ್ಲಿಸುವ ಸಲುವಾಗಿ, ಮೂರು ದಿನಗಳ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರವಾಸ, ಹಲವು ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ.

ಮೂರು ದಿನಗಳ ಭೇಟಿಯ ಕೊನೆಯ ದಿನವಾದ ಭಾನುವಾರ ರಾಹುಲ್, ವಯನಾಡು ನಲ್ಲಿ ನರ್ಸ್ ರಾಜಮ್ಮ ವವಾತಿಲ್ ಅವರನ್ನು ಭೇಟಿಯಾಗಿದ್ದಾರೆ. ರಾಹುಲ್ ಇಲ್ಲಿಗೆ ಬಂದಾಗ ಅವರನ್ನು ಭೇಟಿಯಾಗುವ ಇಂಗಿತವನ್ನು ರಾಜಮ್ಮ ವ್ಯಕ್ತಪಡಿಸಿದ್ದರು.

ಮಲಯಾಳಿ 'ಚಾಯ'ಕ್ಕೆ ಮಾರು ಹೋದ ರಾಹುಲ್ ಗಾಂಧಿ

ಜೂನ್ 19, 1970ರಂದು ರಾಹುಲ್ ಗಾಂಧಿ ಜನಿಸಿದ ದಿನ. ಆ ವೇಳೆ, ರಾಜಮ್ಮ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಶುಶ್ರೂಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ರಾಜೀವ್ ಗಾಂಧಿ - ಸೋನಿಯಾ ಗಾಂಧಿ ದಂಪತಿಗಳ ಗಂಡು ಮಗುವಿನ ಜನನಕ್ಕೆ (ರಾಹುಲ್) ರಾಜಮ್ಮ ಸಾಕ್ಷಿಯಾಗಿದ್ದರು.

1987ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ರಾಜಮ್ಮ, ಕೇರಳದ ಸುಲ್ತಾನ್ ಬತ್ತೇರಿ ಬಳಿಯ ಕಲ್ಲೂರಿನಲ್ಲಿ ನೆಲೆಸಿದ್ದರು. ರಾಹುಲ್ ಭೇಟಿಯಾಗುವ ಆಸೆಯನ್ನು ಕಾಂಗ್ರೆಸ್ ಮುಖಂಡರಲ್ಲಿ ರಾಜಮ್ಮ ತೋಡಿಕೊಂಡಿದ್ದರು. ಅದಕ್ಕೆ ಸಮಯ ಈಗ ಕೂಡಿ ಬಂದಿದೆ.

ಇದೇ ಮೇ ತಿಂಗಳಲ್ಲಿ, ಅದರಲ್ಲೂ ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದ್ದಾಗ, ರಾಹುಲ್ ಗಾಂಧಿಯ ಪೌರತ್ವದ ವಿಚಾರ ಭಾರೀ ಚರ್ಚೆಯ ವಿಷಯವಾಗಿತ್ತು. ಆ ವೇಳೆ, ರಾಜಮ್ಮ, ಈ ವಿಚಾರದಲ್ಲಿ ಯಾರೂ ಶಂಕೆ ವ್ಯಕ್ತಪಡಿಸಬಾರದು, ಯಾಕೆಂದರೆ, ಅವರ ಜನನಕ್ಕೆ ನಾನೂ ಸಾಕ್ಷಿಯಾಗಿದ್ದೆ ಎಂದು ಹೇಳಿದ್ದರು.

ನರೇಂದ್ರ ಮೋದಿ ದ್ವೇಷದ ವಿಷ ಬಿತ್ತುತ್ತಿದ್ದಾರೆ : ವಯನಾಡಿನಲ್ಲಿ ಸಿಟ್ಟು ಕಾರಿದ ರಾಹುಲ್ ಗಾಂಧಿ

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ನೀಡಿದ್ದ ದೂರಿನನ್ವಯ, ಗೃಹ ಸಚಿವಾಲಯ ಪೌರತ್ವದ ವಿಚಾರದಲ್ಲಿ ರಾಹುಲ್ ಗಾಂಧಿಗೆ ನೊಟೀಸ್ ಜಾರಿ ಮಾಡಿತ್ತು.

ರಾಹುಲ್ ಗಾಂಧಿ ನರ್ಸ್ ರಾಜಮ್ಮನನ್ನು ಭೇಟಿಯಾಗಿರುವುದು, ಸಾಮಾಜಿಕ ತಾಣದಲ್ಲಿ ವ್ಯಾಪಕ ಪ್ರಶಂಸೆಗೊಳಗಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress president Rahul Gandhi Sunday met Rajamma Vavathil, a retired nurse who was present at the time of his birth. She had earlier expressed her wish to meet Rahul Gandhi whenever he visits Wayanad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more