ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೌರತ್ವ ಕಾಯ್ದೆ ವಿರುದ್ದ ಇನ್ನೂ ನಿಲ್ಲದ ಪ್ರತಿಭಟನೆ

|
Google Oneindia Kannada News

ಕೊಚ್ಚಿ, ಜನವರಿ 01: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ಮುಂದುವರೆದಿದೆ. ಪೌರತ್ವ ಕಾಯ್ದೆಯನ್ನು ವಿರೋಧಿಸಿ ಕೇರಳ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಕೇಂದ್ರ ಸರ್ಕಾರ ಚಾಲನೆ ನೀಡಿದ್ದ ಆನ್ ಲೈನ್ ಅಭಿಯಾನಕ್ಕೆ ಪ್ರತಿಯಾಗಿ ಮತ್ತೊಂದು ಅಭಿಯಾನ ಆರಂಭವಾಗಿದೆ. ರಾಜ್ಯಗಳ ವಿರೋಧ ಹಿನ್ನೆಲೆಯಲ್ಲಿ ವಿದೇಶಿ ನಿರಾಶ್ರಿತರಿಗೆ ನೀಡುವ ಪೌರತ್ವ ಪ್ರಕ್ರಿಯೆಯನ್ನು ಸಂಪೂರ್ಣ ಆನ್ ಲೈನ್ ಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ಮಾಡಿದೆ.

ಭಾರತದ ಮುಸ್ಲಿಮರು ಬರುವ ಆತಂಕ: ಬಾಂಗ್ಲಾ ಗಡಿಯಲ್ಲಿ ಮೊಬೈಲ್ ಸ್ಥಗಿತಭಾರತದ ಮುಸ್ಲಿಮರು ಬರುವ ಆತಂಕ: ಬಾಂಗ್ಲಾ ಗಡಿಯಲ್ಲಿ ಮೊಬೈಲ್ ಸ್ಥಗಿತ

ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಿರ್ಣಯ ಮಂಡಿಸಿದ್ದರು. ಈ ನಿರ್ಣಯವನ್ನು ಆಡಳಿತರೂಢ ಸಿಪಿಐ(ಎಂ), ಲೆಪ್ಟ್ ಡೆಮಾಕ್ರಟಿಕ್ ಫ್ರಂಟ್ ಮತ್ತು ವಿಪಕ್ಷಗಳಾದ ಕಾಂಗ್ರೆಸ್ ನೇತೃತ್ವದ ಎಲ್ಡಿಎಫ್ ಕೂಡ ಪೌರತ್ವ ಕಾಯ್ದೆ ವಿರೋಧಿ ನಿರ್ಣಯವನ್ನು ಬೆಂಬಲಿಸಿದೆ.

ಸಿಎಎ ವಿರೋಧಿಸಿ ಕೇರಳ ನಿರ್ಣಯ ಅಂಗೀಕಾರ

ಸಿಎಎ ವಿರೋಧಿಸಿ ಕೇರಳ ನಿರ್ಣಯ ಅಂಗೀಕಾರ

ಬಿಜೆಪಿಯ ಏಕೈಕ ಬಿಜೆಪಿ ಶಾಸಕ ಒ.ರಾಜಗೋಪಾಲ್ ಒಬ್ಬರೇ ಕಾಯ್ದೆ ಬೆಂಬಲಿಸಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದರು. ಅವಿಶ್ವಾಸ ನಿರ್ಣಯದ ಮೇಲೆ ತೀವ್ರ ಚರ್ಚೆ ನಡೆದ ಬಳಿಕ ನಿರ್ಣಯವನ್ನು ಅಂಗೀಕರಿಸಿತು.

ಪೌರತ್ವ ಕಾಯ್ದೆ ಸಂವಿಧಾನ ಮೌಲ್ಯಗಳನ್ನು ಹೊಂದಿಲ್ಲ. ಜನರ ನಡುವೆ ಭಿನ್ನಮತ ಉಂಟುಮಾಡುತ್ತದೆ, ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದರು.

ಕಾಯ್ದೆ ವಿರೋಧಿ ಅಭಿಯಾನ ಆರಂಭ

ಕಾಯ್ದೆ ವಿರೋಧಿ ಅಭಿಯಾನ ಆರಂಭ

ಪೌರತ್ವ ಕಾಯ್ದೆ ಬೆಂಬಲಿಸಿ ಜನ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಪೌರತ್ವ ಕಾಯ್ದೆ ವಿರೋಧಿಸಿ ಮತ್ತೊಂದು ಅಭಿಯಾನ ಆರಂಭವಾಗಿದೆ.

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಮತ್ತೊಬ್ಬ ವಿದೇಶಿ ಭಾರತದಿಂದ ಹೊರಕ್ಕೆಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಮತ್ತೊಬ್ಬ ವಿದೇಶಿ ಭಾರತದಿಂದ ಹೊರಕ್ಕೆ

ಟ್ವಿಟ್ಟರ್ ನಲ್ಲಿ ಇಂಡಿಯಾ ಡಸ್ ನಾಟ್ ಸಪೋರ್ಟ್ ಸಿಎಎ ಎಂದು ಹ್ಯಾಷ್ ಟ್ಯಾಗ್ ಬಳಸಿ, ವಿರೋಧಿ ಅಭಿಯಾನ ನಡೆಸಲಾಗುತ್ತಿದೆ. 24 ಗಂಟೆಯಲ್ಲಿ 6 ಲಕ್ಷಕ್ಕೂ ಹೆಚ್ಚು ರಿಟ್ವಿಟ್ ಆಗಿದೆ.

ಉತ್ತರಪ್ರದೇಶದಲ್ಲಿ ಪಿಎಫ್ಐ ನಿರ್ಭಂದ

ಉತ್ತರಪ್ರದೇಶದಲ್ಲಿ ಪಿಎಫ್ಐ ನಿರ್ಭಂದ

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಕೆಲವು ರಾಜ್ಯಗಳು ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆಯನ್ನು ಸಂಪೂರ್ಣ ಆನ್ ಲೈನ್ ಮೂಲಕ ಮಾಡಲು ಕೇಂದ್ರ ಸರ್ಕಾರ ಚಿಂತಿಸಿದೆ.

ಉತ್ತರಪ್ರದೇಶದಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಕೇರಳದ ಪಿಎಫ್ಐ ಕೈವಾಡ ಇದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆ ಯೋಗಿ ಆದಿತ್ಯನಾಥ್ ಸರ್ಕಾರ ಪಿಎಫ್ಐ ವಿರುದ್ದ ಕ್ರಮ ಜರುಗಿಸಲು ಮುಂದಾಗಿದೆ.

ಪ್ರಿಯಾಂಕ ನಕಲಿ ಗಾಂಧಿ, ಹಿಂದುತ್ವ ಅರ್ಥ ಆಗಲ್ಲ

ಪ್ರಿಯಾಂಕ ನಕಲಿ ಗಾಂಧಿ, ಹಿಂದುತ್ವ ಅರ್ಥ ಆಗಲ್ಲ

ಎಲ್ಲ ಹಿಂಸಾಚಾರ ಘಟನೆಯಲ್ಲೂ ಪಿಎಫ್ಐ ಭಾಗಿಯಾಗಿದೆ, ಅಲ್ಲದೇ ಇಲ್ಲಿನ ಜನರು ಈ ಸಂಘಟನೆಯಲ್ಲಿ ಭಾಗಿಯಾಗಿದ್ದಾರೆ. ಇದೇ ರೀತಿ ಮುಂದುವರೆದರೆ ಸಂಘಟನೆ ಮೇಲೆ ನಿರ್ಭಂದ ಹೇರಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸಿದ್ದ ಪ್ರಿಯಾಂಕಾ ಗಾಂಧಿ ಅವರಿಗೆ ಹಿಂದೂ ಧರ್ಮ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಅವರು ನಕಲಿ ಗಾಂಧಿ ಎಂದು ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಕಿಡಿಕಾರಿದ್ದಾರೆ.

English summary
Opposition to the Citizenship Amendment Act passed by the Central Government continues.Decision passed in Kerala Assembly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X